ಕಾಬೂಲ್(ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿರುವ ಗುರುದ್ವಾರದ ಮೇಲೆ ಇಂದು ಬೆಳಗ್ಗೆ ಉಗ್ರರು ದಾಳಿ ನಡೆಸಿದ್ದಾರೆ. ಗುರುದ್ವಾರ ಕರ್ತೆ ಪರ್ವಾನ್‌ನಲ್ಲಿ ಅಂದಾಜು 10-15 ಮಂದಿ ಸಿಲುಕಿಕೊಂಡಿದ್ದು, ಒಬ್ಬ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಸದ್ಯ ಗುರುದ್ವಾರದಲ್ಲಿ ಸಿಲುಕಿಕೊಂಡಿರುವ ಮೂವರನ್ನು ಸ್ಥಳಾಂತರಿಸಲಾಗಿದೆ. ಇವರಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಜೆಪಿ ವಕ್ತಾರ ಆರ್‌ಪಿ ಸಿಂಗ್, ಗುರುದ್ವಾರದಲ್ಲಿ ವಾಸಿಸುತ್ತಿದ್ದ ಅನೇಕ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಗುರುದ್ವಾರ ಕರ್ತಾ ಪರ್ವ್ ಅಧ್ಯಕ್ಷ ಗುರ್ನಾಮ್ ಸಿಂಗ್, ಅಫ್ಘಾನಿಸ್ತಾನದಲ್ಲಿ ಸಿಖ್ಖರಿಗೆ ಜಾಗತಿಕ ಬೆಂಬಲ ನೀಡಬೇಕೆಂದು ಅವರು ಕರೆ ನೀಡಿದರು.
ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಟ್ವಿಟರ್‌ನಲ್ಲಿ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿರುವ ಗುರುದ್ವಾರ ಇಂದು ಬೆಳಗ್ಗೆ ಭಯೋತ್ಪಾದಕರ ದಾಳಿಗೆ ಒಳಗಾಯಿತು. ಗುರುದ್ವಾರ ಸಾಹಿಬ್ ಕಾಂಪ್ಲೆಕ್ಸ್‌ನಲ್ಲಿ ಅನೇಕ ಸ್ಫೋಟಗಳು ಸಂಭವಿಸಿವೆ. ಗುರುದ್ವಾರದಲ್ಲಿ ಸಿಲುಕಿರುವ ಎಲ್ಲರ ಕಲ್ಯಾಣಕ್ಕಾಗಿ ಶಾಂತಿ ಮತ್ತು ಭದ್ರತೆಗಾಗಿ ಪ್ರಾರ್ಥಿಸಲಾಗುತ್ತಿದೆ ಎಂದಿದ್ದಾರೆ. ಅಲ್ಲದೇ ತಕ್ಷಣದ ಮಧ್ಯಪ್ರವೇಶಕ್ಕಾಗಿ ಪ್ರಧಾನಿಗೆ ವಿನಂತಿ ಮಾಡಿದ್ದಾರೆ.
ಐಸಿಸ್ ಖುರಾಸಾನ್‌ನಿಂದ ಈ ದಾಳಿ ನಡೆದಿದೆ ಎಂದು ಶಂಕಿಸಲಾಗಿದೆ. ದಾಳಿಯ ವೇಳೆ ಗುರುದ್ವಾರದಲ್ಲಿ 10 ಜನರು ಇದ್ದರು ಎಂದು ಹೇಳಲಾಗುತ್ತಿದೆ. ಶಸ್ತ್ರಸಜ್ಜಿತ ಭಯೋತ್ಪಾದಕರು ಸ್ಫೋಟ ನಡೆಸಿದ್ದು, ಪ್ರಸ್ತುತ ಪೂಜಾ ಸ್ಥಳವನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಇಂದು ಬಿಹಾರ್ ಬಂದ್.. ಜೆಹಾನಾಬಾದ್‌ನಲ್ಲಿ ಬಸ್, ಟ್ರಕ್ಗೆ ಬೆಂಕಿ: ಅಲರ್ಟ್ ಮೋಡ್ನಲ್ಲಿ ಪೊಲೀಸ್ ಪಡೆ!