ಕರ್ನಾಟಕ

karnataka

ETV Bharat / international

ಆಸ್ಟ್ರೇಲಿಯಾದಲ್ಲಿ ಶಾರ್ಕ್​ ದಾಳಿಗೆ ಬಾಲಕಿ ಬಲಿ: 1960 ಬಳಿಕ ಇದೇ ಮೊದಲ ಪ್ರಕರಣ

ಈಜಾಡಲು ನದಿಗೆ ಇಳಿದಿದ್ದಾಗ ಶಾರ್ಕ್​ ಬಾಯಿಗೆ ಸಿಲುಕಿ ಬಾಲಕಿಯೊಬ್ಬಳು ಬಲಿಯಾದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 1960 ರ ಬಳಿಕ ನಡೆದ ದಾಳಿ ಭೀತಿ ಮೂಡಿಸಿದೆ.

shark attack in Australia
ಆಸ್ಟ್ರೇಲಿಯಾದಲ್ಲಿ ಶಾರ್ಕ್​ ದಾಳಿಗೆ ಬಾಲಕಿ ಬಲಿ

By

Published : Feb 5, 2023, 10:46 AM IST

ಕ್ಯಾನ್‌ಬೆರಾ:ಸಮುದ್ರದ ದೈತ್ಯ ಜಲಚರವಾದ ಶಾರ್ಕ್​ ಎಂದಿಗೂ ಅಪಾಯಕಾರಿ. ಈ ಮೀನುಗಳ ಕ್ರೂರತ್ವ ಮತ್ತು ದಾಳಿಯ ಬಗ್ಗೆ ಈಗಾಗಲೇ ಹಲವಾರು ಸರಣಿ ಸಿನಿಮಾಗಳು ಬಂದಿವೆ. ಇದರ ಮಧ್ಯೆಯೇ ಆಸ್ಟ್ರೇಲಿಯಾದ ಪರ್ತ್​ನಲ್ಲಿ 16 ವರ್ಷದ ಬಾಲಕಿಯೊಬ್ಬಳು ಮೋಜಿಗಾಗಿ ಡಾಲ್ಫಿನ್​ಗಳೊಂದಿಗೆ ಈಜಾಡುತ್ತಿದ್ದಾಗ ಪ್ರಾಣ ಕಳೆದುಕೊಂಡಿದ್ದಾಳೆ.

ಪರ್ತ್​ನ ಉಪನಗರ ನಾರ್ತ್​ ಪ್ರೀಮ್ಯಾಂಟಲ್​ನಲ್ಲಿರುವ ಸ್ವಾನ್​ ನದಿಯಲ್ಲಿ ಈಜಾಡುವಾಗ ಬಾಲಕಿಯ ಮೇಲೆ ದೈತ್ಯ ಶಾರ್ಕ್​ಗಳು ದಾಳಿ ಮಾಡಿವೆ. ಬಾಲಕಿ ತನ್ನ ಸೇಹಿತರು, ಕುಟುಂಬಸ್ಥರ ಜೊತೆಗೂಡಿ ಸ್ವಾನ್​ ನದಿಗೆ ವಿಹಾರಕ್ಕೆ ಬಂದಿದ್ದಳು. ಈ ವೇಳೆ ಅಲ್ಲಿದ್ದ ಡಾಲ್ಫಿನ್​ಗಳ ಗುಂಪಿನೊಂದಿಗೆ ಆಟವಾಡಲು ನದಿಗಿಳಿದಿದ್ದಾಳೆ. ನದಿ ತಟಕ್ಕೆ ಶಾರ್ಕ್​ಗಳು ಬಂದಿದ್ದವು. ಈಜಾಡುತ್ತಿದ್ದ ಬಾಲಕಿಯ ಮೈಮೇಲೆರಗಿದ ಅವು ಗಂಭೀರವಾಗಿ ಕಚ್ಚಿವೆ.

ಇದನ್ನು ಕಂಡ ಲೈಫ್​​ ಗಾರ್ಡ್​ ಸಿಬ್ಬಂದಿ ತಕ್ಷಣವೇ ನದಿಗೆ ಧುಮುಕಿ ಬಾಲಕಿಯ ರಕ್ಷಣೆ ಮಾಡಿ, ದಡಕ್ಕೆ ಕರೆತಂದಿದ್ದಾರೆ. ಆದರೆ, ತೀವ್ರ ಗಾಯಗೊಂಡು ರಕ್ತಸ್ರಾವವಾದ ಕಾರಣ ಅಸುನೀಗಿದ್ದಾಳೆ. ಘಟನೆ ಪ್ರವಾಸಿಗರಲ್ಲಿ ಭೀತಿ ಮೂಡಿಸಿದೆ. ನದಿ ತಟದಲ್ಲಿ ಶಾರ್ಕ್ ಕಂಡುಬಂದಿದ್ದು ಅಚ್ಚರಿಯೂ ಆಗಿದೆ. ಈ ಭಾಗದಲ್ಲಿ ದೈತ್ಯ ಜಲಚರಗಳು ಕಾಣಸಿಗುವುದು ತೀರಾ ವಿರಳ ಎಂದೇ ಹೇಳಲಾಗುತ್ತಿದೆ.

ದಾಳಿ ಮಾಡಿದ ಶಾರ್ಕ್‌ನ ಬಗೆಯನ್ನು ಗುರುತಿಸಬೇಕಿದೆ. ನದಿಗೆ ಇಳಿಯುವಾಗ ಪ್ರವಾಸಿಗರು ಜಾಗೃತರಾಗಿರಿ, ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಎಚ್ಚರಿಕೆ ನೀಡಲಾಗಿದೆ. ದೇಶದಲ್ಲಿ ಈ ಹಿಂದೆ ಮನುಷ್ಯರ ಮೇಲೆ ಶಾರ್ಕ್ ದಾಳಿ ನಡೆದಿದ್ದು 1960ರಲ್ಲಿ. ಅಂದು ಸಿಡ್ನಿಯ ರೋಸ್‌ವಿಲ್ಲೆ ಸೇತುವೆಯಲ್ಲಿ 3.3 ಮೀಟರ್ ಉದ್ದದ ಬುಲ್ ಶಾರ್ಕ್‌ ದಾಳಿಯಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ. ಅಂದಿನಿಂದ ಯಾವುದೇ ದಾಳಿ ನಡೆದ ವರದಿಯಾಗಿರಲಿಲ್ಲ.

ಇದನ್ನೂ ಓದಿ:ಗೂಢಾಚಾರಿಕೆ ನಡೆಸುತ್ತಿದ್ದ ಚೀನಾ ಬಲೂನ್​ ಹೊಡೆದುರುಳಿಸಿದ ಅಮೆರಿಕ ಸೇನೆ

ABOUT THE AUTHOR

...view details