ಕರ್ನಾಟಕ

karnataka

ETV Bharat / international

ಅಪರಿಚಿತ ವ್ಯಕ್ತಿಯಿಂದ ದಾಳಿ: ಅಪ್ರಾಪ್ತ ಬಾಲಕಿ ಸಾವು - ಬಾಲಕಿ ಸಾವು

ಶಾಲೆಗೆ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯರ ಮೇಲೆ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ದಕ್ಷಿಣ ಜರ್ಮನಿಯ ಇಲ್ಲರ್‌ಕಿರ್ಚ್‌ಬರ್ಗ್‌ ವಸತಿ ಪ್ರದೇಶದಲ್ಲಿ ಸೋಮವಾರ ಈ ಘಟನೆ ನಡೆದಿದೆ.

Teenage girl dies after attack near school
ಅಪರಿಚಿತ ವ್ಯಕ್ತಿಯಿಂದ ದಾಳಿ: ಅಪ್ರಾಪ್ತ ಬಾಲಕಿ ಸಾವು

By

Published : Dec 6, 2022, 8:20 AM IST

ಬರ್ಲಿನ್(ಜರ್ಮನ್​): ಶಾಲೆಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬನ ದಾಳಿಯಿಂದ ಬಾಲಕಿಯೊಬ್ಬಳು(14) ಸಾವನ್ನಪ್ಪಿದ್ದಾಳೆ ಎಂದು ಜರ್ಮನ್ ಪೊಲೀಸರು ಖಚಿತಪಡಿಸಿದ್ದಾರೆ.

ಸೋಮವಾರ ಬೆಳಗ್ಗೆ ಸ್ಟಟ್‌ಗಾರ್ಟ್ ಮತ್ತು ಮ್ಯೂನಿಚ್ ನಡುವಿನ ಇಲ್ಲರ್‌ಕಿರ್ಚ್‌ಬರ್ಗ್‌ನ ವಸತಿ ಪ್ರದೇಶದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯರ ಮೇಲೆ ದಾಳಿ ಮಾಡಿದ್ದಾನೆ. ತಕ್ಷಣ ಇಬ್ಬರು ಬಾಲಕಿಯರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಮತ್ತೋರ್ವ ಬಾಲಕಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ವರದಿಯಾಗಿದೆ.

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಲ್ಲದೇ ದಾಳಿಗೆ ಯಾವ ಆಯುಧ ಬಳಸಲಾಗಿದೆ ಎಂಬುದು ಕೂಡ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ವ್ಯಕ್ತಿ ಚಾಕು ಹಿಡಿದುಕೊಂಡಿದ್ದ ಎಂದು ಜರ್ಮನ್ ಮಾಧ್ಯಮಗಳು ವರದಿ ಮಾಡಿವೆ. ಶಂಕಿತ ಹತ್ತಿರದ ಅಪಾರ್ಟ್ಮೆಂಟ್ ಕಟ್ಟಡಕ್ಕೆ ಓಡಿಹೋದನೆಂದು ವರದಿಯಾಗಿದೆ. ಅಲ್ಲಿ ಅಧಿಕಾರಿಗಳು ಶಂಕಿತ ದಾಳಿಕೋರ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕ್ಷುಲ್ಲಕ ವಿಚಾರಕ್ಕೆ ಗಲಾಟೆ: ಪಾಟ್ನಾದ ರೈಲ್ವೆ ನಿಲ್ದಾಣದಲ್ಲಿ ಯುವಕನ ಮೇಲೆ ಗುಂಡಿನ ದಾಳಿ

ABOUT THE AUTHOR

...view details