ನೈರೋಬಿ: ಹವಾಮಾನ ವೈಪರೀತ್ಯದಿಂದಾಗಿ ತಾಂಜಾನಿಯಾದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವೊಂದು ಇಂದು ಬೆಳಗ್ಗೆ ಅಲ್ಲಿನ ವಿಕ್ಟೋರಿಯಾ ಸರೋವರದಲ್ಲಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಸುಮಾರು 26 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ವಿಮಾನದಲ್ಲಿ ಅಂದಾಜು 40 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗುತ್ತಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ತಾಂಜಾನಿಯಾದ ಕರಾವಳಿ ನಗರವಾದ ದಾರ್ ಎಸ್ ಸಲಾಮ್‌ನಿಂದ ಹೊರಟಿದ್ದ ವಿಮಾನ ಬುಕೋಬಾ ವಿಮಾನ ನಿಲ್ದಾಣಕ್ಕೆ ಬರುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ಪ್ರೆಸಿಷನ್ ಏರ್ ತಿಳಿಸಿದೆ.