ಕರ್ನಾಟಕ

karnataka

ETV Bharat / international

ಟೆಕ್ಸಾಸ್‌ನಲ್ಲಿ ಬಸ್​ಗೆ ಕಾಯುತ್ತಿದ್ದ ಜನರ ಮೇಲೆ ನುಗ್ಗಿದ ಕಾರು: 7 ಸಾವು, 10 ಮಂದಿಗೆ ಗಾಯ

ಟೆಕ್ಸಾಸ್‌ನ ಬ್ರೌನ್ಸ್‌ವಿಲ್ಲೆಯಲ್ಲಿ ಬಸ್​ಗಾಗಿ ಕಾಯುತ್ತಿದ್ದ ವಲಸಿಗ ಜನರ ಮೇಲೆ SUV ಕಾರು ಹರಿದಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ.

accident
ಅಪಘಾತದ ಸ್ಥಳ

By

Published : May 8, 2023, 9:50 AM IST

ಬ್ರೌನ್ಸ್‌ವಿಲ್ಲೆ(ಟೆಕ್ಸಾಸ್‌): ಟೆಕ್ಸಾಸ್‌ನ ಗಡಿ ನಗರ ಬ್ರೌನ್ಸ್‌ವಿಲ್ಲೆಯಲ್ಲಿ ನಿನ್ನೆ ಕಾರು ಅಪಘಾತ ಸಂಭವಿಸಿದ್ದು, 7 ಜನರು ಅಸುನೀಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ವಲಸಿಗರ ಆಶ್ರಯತಾಣದ ಹೊರಗೆ ಬಸ್​ಗಾಗಿ ಕಾಯುತ್ತಿದ್ದ ಜನರಿಗೆ ಕಾರು ಬಂದು ಡಿಕ್ಕಿ ಹೊಡೆದಿತ್ತು.

ಬ್ರೌನ್ಸ್‌ವಿಲ್ಲೆಯ ಪೊಲೀಸ್​ ತನಿಖಾಧಿಕಾರಿ ಮಾರ್ಟಿನ್​ ಸ್ಯಾಂಡೋವಲ್​ ಮಾಹಿತಿ ನೀಡಿದ್ದು, ಅಪಘಾತ ಬೆಳಗ್ಗೆ 8.30ಕ್ಕೆ ಸಂಭವಿಸಿದೆ. SUV ಕಾರು ರಸ್ತೆ ತಡೆಬೇಲಿ ಮೇಲೆ ಚಲಿಸಿ ಪಲ್ಟಿಯಾಗಿದೆ. ಬಳಿಕ 60 ಮೀಟರ್ ​ದೂರ ಚಲಿಸಿದೆ. ರಸ್ತೆ ತಡೆ ಮೇಲೆ ಕುಳಿತಿದ್ದ ಜನರಿಗೆ ಗುದ್ದಿದ್ದಲ್ಲದೆ, ಅಲ್ಲಿಂದ 9 ಮೀಟರ್ ಮುಂದೆ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರಿಗೂ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹೆಚ್ಚಾಗಿ ವೆನೆಜುವೆಲಾದ ಪುರುಷರು ಪ್ರಾಣ ಕಳೆದುಕೊಂಡಿದ್ದಾರೆ. ಆರೋಪಿ ಚಾಲಕ ಘಟನೆಯ ನಂತರ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಪ್ರತ್ಯಕ್ಷದರ್ಶಿಗಳು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಪಘಾತ ಸಂಭವಿಸಿದ ಸಿಟಿ ಬಸ್​ ನಿಲ್ದಾಣವು ಶೆಲ್ಟರ್​ ರಸ್ತೆಯ ಎದುರೇ ಇದ್ದು ಬಸ್​ ನಿಲ್ದಾಣದ ಯಾವುದೇ ಗುರುತು ಹಾಕಲಾಗಿಲ್ಲ. ನಿಲ್ದಾಣದಲ್ಲಿ ಕುಳಿತುಕೊಳ್ಳಲು ಬೆಂಚು ಕೂಡ ಹಾಕಿಲ್ಲ. ಹಾಗಾಗಿ ನಿಲ್ದಾಣದಲ್ಲಿದ್ದ ಜನರು ರಸ್ತೆಯ ತಡೆಗೋಡೆ ಮೇಲೆ ಕುಳಿತಿದ್ದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಬಂದ ಕಾರು ಜನರ ಮೇಲೆ ಹರಿದಿದೆ ಎಂದು ಮಾಹಿತಿ ನೀಡಿದರು.

ಅಪಘಾತಕ್ಕೆ ಒಳಗಾದ ಜನರೆಲ್ಲರೂ ವಲಸಿಗರ ಆಶ್ರಯದಲ್ಲಿ ರಾತ್ರಿ ತಂಗಿದ್ದು, ಬೆಳಗ್ಗೆ ಡೌನ್‌ಟೌನ್ ಬ್ರೌನ್ಸ್‌ವಿಲ್ಲೆಗೆ ಹಿಂದಿರುಗಲು ಬಸ್​ಗಾಗಿ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಕಾರು ಇವರ ಮೇಲೆ ಹರಿಯಿತು ಎಂದು ರಿಯೊ ಗ್ರಾಂಡೆ ವ್ಯಾಲಿಯ ಕ್ಯಾಥೊಲಿಕ್ ಚಾರಿಟೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿಸ್ಟರ್ ನಾರ್ಮಾ ಪಿಮೆಂಟೆಲ್ ತಿಳಿಸಿದರು.

ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಆತನಿಗೂ ಗಾಯಗಳಾಗಿರುವುದರಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತ ಚಿಕಿತ್ಸೆ ಪಡೆದು ಬಿಡುಗಡೆಯಾದ ಕೂಡಲೇ ನಗರದ ಜೈಲಿಗೆ ಕರೆದೊಯ್ಯಲಾಗುವುದು. ಫಿಂಗರ್​ ಪ್ರಿಂಟ್​ ಮತ್ತು ರಕ್ತದ ಮಾದರಿಯನ್ನು ಟೆಕ್ಸಾಸ್ ಡಿಪಾರ್ಟ್ಮೆಂಟ್ ಆಫ್ ಪಬ್ಲಿಕ್ ಸೇಫ್ಟಿ ಲ್ಯಾಬ್‌ಗೆ ಕಳುಹಿಸಲಾಗಿದೆ. ಕಾರಿನಲ್ಲಿ ಆರೋಪಿ ಚಾಲಕ ಬಿಟ್ಟರೆ ಬೇರೆ ಯಾರು ಇರಲಿಲ್ಲ. ಮಾದಕ ವಸ್ತು ಸೇವನೆ, ಸಹಜ ಅಪಘಾತ ಹಾಗು ಉದ್ದೇಶಪೂರ್ವಕ ಕೃತ್ಯವೇ ಎಂಬೆಲ್ಲ ಆಯಾಮಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್​ ತನಿಖಾಧಿಕಾರಿ ಮಾರ್ಟಿನ್​ ಸ್ಯಾಂಡೋವಲ್ ಹೇಳಿದರು.

ಮಿಯಾಮಿಯಲ್ಲಿ ಶೂಟೌಟ್​: ಮಿಯಾಮಿ ಬೀಚ್ ನೈಟ್‌ಕ್ಲಬ್‌ನಲ್ಲಿ ಭಾನುವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಮಹಿಳೆಯರು ಗಾಯಗೊಂಡಿದ್ದರು. ನಗರದ ಸೌತ್ ಬೀಚ್ ಪ್ರದೇಶದ ಗಾಲಾ ನೈಟ್‌ಕ್ಲಬ್‌ನಲ್ಲಿ ಮುಂಜಾನೆ 4 ಗಂಟೆಯ ಸುಮಾರಿಗೆ ಗುಂಡಿನ ದಾಳಿ ನಡೆದಿದೆ. ಗಾಯಾಳುಗಳಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರಿದ್ದು ಮಿಯಾಮಿ ಟ್ರಾಮ ಸೆಂಟರ್​ಗೆ ಸಾಗಿಸಲಾಗಿತ್ತು. ಪುರುಷ ಗಾಯಾಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದು ಆರೋಪಿಗಳು ಪತ್ತೆಯಾಗಿಲ್ಲ. ಗುಂಡಿನ ದಾಳಿಗೆ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ:ಕೇರಳ ದೋಣಿ ದುರಂತದಲ್ಲಿ ಸಾವಿನ ಸಂಖ್ಯೆ 22ಕ್ಕೇರಿಕೆ: ಪ್ರಧಾನಿ ಮೋದಿ ಸಂತಾಪ

ABOUT THE AUTHOR

...view details