ಕರ್ನಾಟಕ

karnataka

ETV Bharat / international

ಬ್ರಿಟನ್​ನ ಭಾರತೀಯ ಹೈಕಮಿಷನ್‌ ಹೊರಗೆ ಮತ್ತೆ ಶಂಕಿತ ಖಲಿಸ್ತಾನಿಗಳ ಪ್ರತಿಭಟನೆ, ಬಿಗಿ ಬಂದೋಬಸ್ತ್​​ - ಭಾರತೀಯ ಹೈಕಮಿಷನ್‌ ಹೊರಗೆ ಪ್ರತಿಭಟನೆ

ಬ್ರಿಟನ್​ನಲ್ಲಿರುವ ಭಾರತೀಯ ಹೈಕಮಿಷನ್‌ ಹೊರಗೆ ಶಂಕಿತ ಖಲಿಸ್ತಾನ್ ಪರ ಬೆಂಬಲಿಗರು ಬುಧವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಿದ್ದಾರೆ.

suspected-khalistanis-hold-fresh-protest-behind-barricade-at-indian-high-commision-in-uk
ಬ್ರಿಟನ್​ನ ಭಾರತೀಯ ಹೈಕಮಿಷನ್‌ ಹೊರಗೆ ಮತ್ತೆ ಶಂಕಿತ ಖಲಿಸ್ತಾನ್ ಪರ ಬೆಂಬಲಿಗರ ಪ್ರತಿಭಟನೆ, ಬಿಗಿ ಬಂದೋಬಸ್ತ್​​

By

Published : Mar 22, 2023, 9:33 PM IST

ಲಂಡನ್​ (ಬ್ರಿಟನ್): ಶಂಕಿತ ಖಲಿಸ್ತಾನ್ ಪರ ಬೆಂಬಲಿಗರು ಮತ್ತೆ ಉದ್ಧಟತನ ತೋರಿದ್ದಾರೆ. ಬ್ರಿಟನ್​ನಲ್ಲಿರುವ ಭಾರತೀಯ ಹೈಕಮಿಷನ್‌ ಹೊರಗೆ ಬುಧವಾರ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗಿದೆ. ಇದೇ ವೇಳೆ ಪೊಲೀಸರು ಬಿಗಿ ಬಂದೋಬಸ್ತ್​​ ಕೈಗೊಂಡಿದ್ದಾರೆ. ಇದರಿಂದ ಈ ಬಾರಿ ಪ್ರತಿಭಟನೆಯು ಪೊಲೀಸ್ ಬ್ಯಾರಿಕೇಡ್‌ಗಳ ಹಿಂದೆಕ್ಕೆ ಸೀಮಿತವಾಗಿತ್ತು.

ಇದನ್ನೂ ಓದಿ:ಖಲಿಸ್ತಾನಿಗಳ ಉದ್ಧಟತನಕ್ಕೆ ದಿಟ್ಟ ಪ್ರತಿಕ್ರಿಯೆ! ಹೈಕಮಿಷನ್ ಕಟ್ಟಡದಲ್ಲಿ ಮತ್ತೆ ಹಾರಾಡಿದ ಬೃಹತ್​ 'ತಿರಂಗಾ'

ಭಾರತದಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಬಾಬ್​ ಸಂಘಟನೆಯ ಮುಖ್ಯಸ್ಥ ಅಮೃತ್​ ಪಾಲ್​ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬ್ರಿಟನ್​ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ಶಂಕಿತ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಸೋಮವಾರ ನಡೆದ ಪ್ರತಿಭಟನೆ ಸಮಯದಲ್ಲಿ ಹೈಕಮಿಷನ್ ಕಟ್ಟಡದ ಮೇಲಿದ್ದ ತ್ರಿವರ್ಣ ಧ್ವಜ ಕೆಳಗಡೆ ಇಳಿದಿದ್ದರು. ಅಲ್ಲದೇ, ಖಲಿಸ್ತಾನ್ ಧ್ವಜವನ್ನು ಹಾರಿಸುವ ಪ್ರಯತ್ನವನ್ನು ಪ್ರತಿಭಟನಾಕಾರರು ಮಾಡಿದ್ದರು. ಈ ಬಗ್ಗೆ ಭಾರತದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಭಾರತದ ಖಂಡನೆ:ಭಾರತದ ಪ್ರತಿಭಟನೆ ನಂತರ ಲಂಡನ್‌ನ ಭಾರತೀಯ ಹೈಕಮಿಷನ್‌ ಇರುವ ಆಲ್ಡ್‌ವಿಚ್‌ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಮೆಟ್ರೋಪಾಲಿಟನ್ ಪೊಲೀಸ್ ವ್ಯಾನ್‌ಗಳನ್ನು ನಿಲ್ಲಿಸಲಾಗಿದೆ. ಅಲ್ಲದೇ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಹೀಗಾಗಿ ಶಂಕಿತ ಖಲಿಸ್ತಾನ್ ಉಗ್ರಗಾಮಿ ಮತ್ತು ಪ್ರತ್ಯೇಕತಾವಾದಿಗಳು ಪ್ರತಿಭಟನೆಯು ಈ ಬಾರಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಬರಲು ಸಾಧ್ಯವಾಗಲಿಲ್ಲ. ಇದರ ನಡುವೆ ಬುಧವಾರ ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್‌ನ ಹೊರಗಿನ ಬ್ಯಾರಿಕೇಡ್‌ಗಳನ್ನು ಕೇಂದ್ರ ಸರ್ಕಾರ ತೆಗೆದು ಹಾಕಿಸಿದೆ.

ಸೋಮವಾರ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾರತೀಯ ಹೈಕಮಿಷನ್‌ ಬಳಿ ನಡೆದ ಘಟನೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ ಬ್ರಿಟನ್​ ಹಿರಿಯ ರಾಜತಾಂತ್ರಿಕರನ್ನು ಭಾನುವಾರ ರಾತ್ರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕರೆಸಿಕೊಂಡಿತ್ತು. ಶಂಕಿತ ಖಲಿಸ್ತಾನ್ ಪರವಾದ ಪ್ರತಿಭಟನಾಕಾರರಿಗೆ ಹೈಕಮಿಷನ್ ಆವರಣವನ್ನು ಪ್ರವೇಶಿಸಲು ಅನುಮತಿ ನೀಡಿದ ಬ್ರಿಟಿಷ್ ಭದ್ರತೆಯ ಲೋಪದ ವಿವರಣೆಯನ್ನು ಕೋರಲಾಗಿತ್ತು.

ಇದನ್ನೂ ಓದಿ:ಲಂಡನ್‌ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿ ಖಲಿಸ್ತಾನಿಗಳ ಅಟ್ಟಹಾಸ!

ಬ್ರಿಟನ್​ಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣ ಮತ್ತು ಸಿಬ್ಬಂದಿ ಭದ್ರತೆಗೆ ಯುಕೆ ಸರ್ಕಾರದ ಉದಾಸೀನತೆಯನ್ನು ಭಾರತವು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದ್ದರು. ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವೀಟ್​ ಮಾಡಿ, ಭಾರತದ ಹೈಕಮಿಷನ್‌ ವಿರುದ್ಧ ನಡೆದ ಅವಮಾನಕರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಇದು ಯಾವುದೇ ಕಾರಣಕ್ಕೂ ಸ್ವೀಕಾರಾರ್ಹವಲ್ಲ ಎಂದಿದ್ದರು. ಇದರ ನಂತರ ಲಂಡನ್‌ನ ಆಲ್ಡ್‌ವಿಚ್‌ ಪ್ರದೇಶದ ಇಂಡಿಯಾ ಹೌಸ್‌ ಮೇಲೆ ಭಾರತದ ಬೃಹತ್‌ ತ್ರಿವರ್ಣ ಧ್ವಜವನ್ನು ಹಾಕಲಾಗಿದೆ.

ಪಂಜಾಬ್​ನಲ್ಲಿ ನಾಲ್ವರು ಕೋರ್ಟ್​ಗೆ ಹಾಜರು:ಮತ್ತೊಂದೆಡೆ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಸಿಂಗ್ ಬ್ರೆಝಾ ಕಾರಿನಲ್ಲಿ ಪರಾರಿಯಾಗಲು ಸಹಾಯ ಮಾಡಿದ ನಾಲ್ವರನ್ನು ಪೊಲೀಸರು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ. ಮನ್‌ಪ್ರೀತ್, ಗುರುದೀಪ್, ಹರ್‌ಪ್ರೀತ್ ಮತ್ತು ಗುರ್​ಪೇಜ್ ಎಂಬುವವರೇ ಬಂಧಿತರಾಗಿದ್ದು, ಇವರನ್ನು ಜಲಂಧರ್‌ನ ಶಾಕೋಟ್ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಇದನ್ನೂ ಓದಿ:ನವದೆಹಲಿಯ ಬ್ರಿಟಿಷ್ ಹೈಕಮಿಷನ್ ಕಚೇರಿಗೆ ಅಳವಡಿಸಿದ್ದ ಭದ್ರತಾ ಬ್ಯಾರಿಕೇಡ್​ಗಳ ತೆರವು

ABOUT THE AUTHOR

...view details