ಕರ್ನಾಟಕ

karnataka

ETV Bharat / international

ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆ ನಾವು ಬೆಂಬಲಿಸುತ್ತೇವೆ: ಅಮೆರಿಕ - ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ

ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಅಮೆರಿಕ ಹೇಳಿದೆ.

Support direct dialogue between India and Pakistan  US on Islamabad  willingness to talk with India  ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆ  ನೇರ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ  ಕಳವಳಕಾರಿ ವಿಷಯಗಳ ಕುರಿತು  ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಸಂವಾದ  ನಿಯಮಿತವಾದ ವಿದೇಶಾಂಗ ಇಲಾಖೆ  ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ  ಅಧಿಕೃತ ವಕ್ತಾರ ಮ್ಯಾಥ್ಯೂ ಮಿಲ್ಲರ್
ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ: ಅಮೆರಿಕ

By

Published : Aug 3, 2023, 7:03 AM IST

ವಾಷಿಂಗ್ಟನ್, ಅಮೆರಿಕ:ಕಳವಳಕಾರಿ ವಿಷಯಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಸಂವಾದವನ್ನು ಬೆಂಬಲಿಸುವುದಾಗಿ ಅಮೆರಿಕ ಬುಧವಾರ ಹೇಳಿದೆ. ವಿದೇಶಾಂಗ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅಮೆರಿಕ ಸರ್ಕಾರದ ಅಧಿಕೃತ ವಕ್ತಾರ ಮ್ಯಾಥ್ಯೂ ಮಿಲ್ಲರ್, "ನಾವು ಬಹಳ ಹಿಂದೆಯೇ ಹೇಳಿದಂತೆ ಕಾಳಜಿಯ ವಿಷಯಗಳ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವಿನ ನೇರ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ. ಅದು ನಮ್ಮ ನಿಲುವು ಎಂದು ಹೇಳಿದ್ದಾರೆ.

'ಭಾರತದೊಂದಿಗೆ ಮಾತನಾಡಲು ಇಚ್ಛೆ' ಎಂಬ ಪಾಕಿಸ್ತಾನದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದು ಕೇಳಿ ಬಂದ ನಂತರ ಈ ಪ್ರತಿಕ್ರಿಯೆ ಬಂದಿದೆ. ಸೋಮವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಮಿನರಲ್ಸ್​ ಶೃಂಗಸಭೆಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶೆಹಬಾಜ್ ಷರೀಫ್, ರಾಷ್ಟ್ರವನ್ನು ಅಭಿವೃದ್ಧಿಪಡಿಸಲು ನಾವು ನೆರೆಹೊರೆಯವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದರು.

ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳು ಹದಗೆಟ್ಟಿರುವ ಇತಿಹಾಸದ ಹೊರತಾಗಿಯೂ 1947 ರಲ್ಲಿ ಅವರ ಸ್ವಾತಂತ್ರ್ಯದ ನಂತರ ಪಾಕಿಸ್ತಾನದ ಪ್ರಧಾನಿ ಮೌಲ್ಯಯುತವಾದ ಸಂಬಂಧ ಉತ್ತೇಜಿಸಲು ಪ್ರಯತ್ನಿಸುತ್ತಿದ್ದಾರೆ.

ನಮ್ಮ ನೆರೆಹೊರೆಯವರೊಂದಿಗೆ ನಾವು ಮಾತನಾಡಲು ಸಿದ್ಧರಿದ್ದೇವೆ. ಪಾಕಿಸ್ತಾನವು ಪರಮಾಣು ಶಕ್ತಿಯಾಗಿದೆ. ಆಕ್ರಮಣಕಾರಿಯಾಗಿ ಅಲ್ಲ. ಆದರೆ ನಮ್ಮ ರಕ್ಷಣಾ ಉದ್ದೇಶಗಳಿಗಾಗಿ ಕಳೆದ 75 ವರ್ಷಗಳಲ್ಲಿ ನಾವು ಮೂರು ಯುದ್ಧಗಳನ್ನು ನಡೆಸಿದ್ದೇವೆ. ಪರಿಣಾಮ ಹೆಚ್ಚು ಬಡತನ, ನಿರುದ್ಯೋಗ ಮತ್ತು ಹಣಕಾಸು, ಶಿಕ್ಷಣ, ಆರೋಗ್ಯ ಮತ್ತು ಜನರ ಯೋಗಕ್ಷೇಮಕ್ಕೆ ಸಂಪನ್ಮೂಲಗಳ ಕೊರತೆ ಸೃಷ್ಟಿಸಿತ್ತು. ಇದು ಅಳವಡಿಸಿಕೊಳ್ಳಬೇಕಾದ ಮಾರ್ಗವಲ್ಲ. ಆದರೆ ಈ ಪ್ರದೇಶದಲ್ಲಿ ಆರ್ಥಿಕ ಸ್ಪರ್ಧೆಯ ಮೂಲಕ ಹೋರಾಡಬೇಕು ಎಂದು ಪಿಎಂ ಷರೀಫ್ ಒತ್ತಿ ಹೇಳಿದ್ದರು.

ಬಡತನ ಮತ್ತು ನಿರೋದ್ಯಗದ ವಿರುದ್ಧ ಹೋರಾಡುವ ಉಭಯ ದೇಶಗಳಿಗೆ ಯುದ್ಧ ಒಂದು ಆಯ್ಕೆಯಾಗಿಲ್ಲ. ನಾವು ಶಾಂತಿಯುತ ಮತ್ತು ಅರ್ಥಪೂರ್ಣ ಚರ್ಚೆಗಳ ಮೂಲಕ ಗಂಭೀರ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಪಾಕ್​ ಪ್ರಧಾನಿ ಪ್ರತಿಪಾದಿಸಿದ್ದರು.

ಭಾರತ ಮತ್ತು ಪಾಕಿಸ್ತಾನದ ಸಂಬಂಧಗಳು ದೇಶ ರಚನೆಯಾದ ನಂತರ ಎಂದಿಗೂ ಸಾಮಾನ್ಯವಾಗಿರಲಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ಭಾರತವು ತನ್ನ ಕಳವಳವನ್ನು ಪದೇ ಪದೇ ವ್ಯಕ್ತಪಡಿಸುತ್ತಿದೆ. ಭಯೋತ್ಪಾದನೆ ಮತ್ತು ಮಾತುಕತೆ ಒಟ್ಟಿಗೆ ಹೋಗುವುದಿಲ್ಲ ಎಂದು ಷರೀಫ್​ ಪ್ರತಿಪಾದಿಸಿದ್ದರು .

ಆಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಲು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಭಾರತ ಸರ್ಕಾರದ ನಿರ್ಧಾರದ ನಂತರ, ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನಲ್ಲಿರುವ ಭಾರತದ ರಾಯಭಾರಿಯನ್ನು ಹೊರಹಾಕಿತು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಿರುವುದು ಗಮನಾರ್ಹ..

ಓದಿ:ಶ್ವೇತಭವನಕ್ಕೆ ಮುತ್ತಿಗೆ ಹಾಕಿದ್ದಕ್ಕೆ ಡೊನಾಲ್ಡ್​ ಟ್ರಂಪ್​ ವಿರುದ್ಧ 3ನೇ ಕ್ರಿಮಿನಲ್​ ಕೇಸ್​..ಚುನಾವಣೆ ಸ್ಪರ್ಧೆಗೆ ಅಡ್ಡಿಯಾಗುತ್ತವಾ ಆರೋಪಗಳು?

ABOUT THE AUTHOR

...view details