ಲಂಡನ್:ಕಳೆದ ಎರಡು ಶತಮಾನಗಳಲ್ಲಿ ಗ್ರೇಟ್ ಬ್ರಿಟನ್ ಹೊಂದಿದ್ದ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ರಿಷಿ ಸುನಕ್ ಪಾತ್ರರಾಗಿದ್ದಾರೆ. ಇನ್ನೂ ವಿಶೇಷ ಎಂದರೆ ಸುನಕ್, ಯುನೈಟೆಡ್ ಕಿಂಗ್ಡಮ್ನ ರಾಜ ಕಿಂಗ್ ಚಾರ್ಲ್ಸ್ III ಗಿಂತ ಶ್ರೀಮಂತರಾಗಿದ್ದಾರೆ ಎಂಬುದು ಮತ್ತೊಂದು ವಿಶೇಷ.
ಅವರು ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಹೊಂದಿರುವ ಒಟ್ಟು ಸಂಪತ್ತು ಬ್ರಿಟನ್ ರಾಣಿಯ ಸಂಪತ್ತಿಗಿಂತ ಮಿಗಿಲು. 42 ನೇ ವಯಸ್ಸಿನಲ್ಲೇ ರಿಷಿ ಸುನಕ್ ಭಾರತೀಯ ಮೂಲದ ಬ್ರಿಟನ್ನ ಮೊದಲ ಪ್ರಧಾನಿ ಹಾಗೂ ಮೊದಲ ಹಿಂದೂ ಪ್ರಧಾನಿ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
ಅಕ್ಷತಾ ಆದಾಯ 6612 ಕೋಟಿ ರೂ.:ಸುನಕ್ ಅವರ ಪತ್ನಿ ಅಕ್ಷತಾ ಅವರು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಪುತ್ರಿ. ಭಾರತದ ಬಿಲಿಯನೇರ್‌ಗಳಲ್ಲಿ ಒಬ್ಬರು. ಅವರ ಮಗಳು ಅಕ್ಷತಾ ಅವರಿಗೆ ತಮ್ಮ ಕಂಪನಿಯಲ್ಲಿ 0.91 ಶೇಕಡಾ ಪಾಲನ್ನು ನೀಡಿದ್ದಾರೆ. ಇದು 700 ಮಿಲಿಯನ್ ಪೌಂಡ್‌ಗಳಷ್ಟು ಮೌಲ್ಯದ ಸಂಪತ್ತಾಗಿದೆ. ಅಂದರೆ ಭಾರತೀಯ ಲೆಕ್ಕದಲ್ಲಿ 66,12,05,86,000( 6612 ಕೋಟಿ) ರೂ ಆಗಿದೆ. ಇದು ಬಹುಶಃ ಅವರ ಪತಿ ಮತ್ತು ಅವರ ಇಬ್ಬರು ಮಕ್ಕಳಾದ ಅನೌಷ್ಕಾ ಮತ್ತು ಕೃಷ್ಣ ಅವರಿಗೆ ಸೇರಿದೆ.
ಸುನಕ್ ಮತ್ತು ಮೂರ್ತಿ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್‌ಗಳು ಎಂದು ಅಂದಾಜಿಸಲಾಗಿದೆ. ಇದೇ ವೇಳೆ ಕಿಂಗ್ ಚಾರ್ಲ್ಸ್ III ಮತ್ತು ಪತ್ನಿ ಕ್ಯಾಮಿಲ್ಲಾ ಅವರ ಒಟ್ಟು ಆಸ್ತಿ ಅಂದಾಜು 300-350 ಮಿಲಿಯನ್ ಪೌಂಡ್‌ಗಳು ಎಂದು ಅಂದಾಜಿಸಲಾಗಿದೆ. ಅಂದರೆ ರಾಜಮನತನದ ಆಸ್ತಿಗಿಂತ ದುಪ್ಪಟ್ಟು ಆಸ್ತಿಯನ್ನು ಅಕ್ಷತಾ ಮತ್ತು ಸುನಕ್ ದಂಪತಿ ಹೊಂದಿದ್ದಾರೆ.