ಕರ್ನಾಟಕ

karnataka

ETV Bharat / international

ಬುಡಕಟ್ಟು ಜನಾಂಗದವರ ನಡುವೆ ಮಾರಾಮಾರಿ, ಐದು ದಿನಗಳಲ್ಲಿ 175 ಬಲಿ! - ಕೈರೋ ಘರ್ಷಣೆ ಸುದ್ದಿ

ಕೈರೋದಲ್ಲಿ ಹಿಂಸಾಚಾರ ಮುಂದುವರಿದಿದೆ. ಕಳೆದ ಐದು ದಿನಗಳಿಂದ ನಡೆಯುತ್ತಿರುವ ಬುಡಕಟ್ಟು ಜನಾಂಗದವರ ಮಾರಾಮಾರಿಯಲ್ಲಿ ಸುಮಾರು 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

tribal clashes in Cairo, Sudan troops deployed to Darfur, Cairo clash news, tribal clashes in sudan, ಕೈರೋದಲ್ಲಿ ಬುಡಕಟ್ಟು ಘರ್ಷಣೆ, ಸುಡಾನ್ ಪಡೆಗಳನ್ನು ಡಾರ್ಫರ್‌ಗೆ ನಿಯೋಜಿನೆ, ಕೈರೋ ಘರ್ಷಣೆ ಸುದ್ದಿ, ಸುಡಾನ್​ನಲ್ಲಿ ಬುಡಕಟ್ಟು ಜನಾಂಗದರ ನಡುವೆ ಮಾರಾಮಾರಿ,
ಬುಡಕಟ್ಟು ಜನಾಂಗದರ ನಡುವೆ ಮಾರಾಮಾರಿ

By

Published : Apr 26, 2022, 9:44 AM IST

ಕೈರೋ: ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟುಗಳ ನಡುವೆ ಉಂಟಾದ ಹಿಂಸಾಚಾರ ಮುಂದುವರಿದಿದ್ದು, ಈಗಾಗಲೇ ನೂರಾರು ಜನರನ್ನು ಬಲಿ ಪಡೆದಿದೆ. ಕಳೆದ ಐದು ದಿನಗಳಲ್ಲಿ 175 ಕ್ಕೂ ಹೆಚ್ಚು ಜನರ ಜೀವವನ್ನು ಬಲಿತೆಗೆದುಕೊಂಡ ಬುಡಕಟ್ಟು ಜನಾಂಗದ ಮಾರಾಮಾರಿ ತಡೆಯಲು ಸುಡಾನ್‌ ಸರ್ಕಾರ ಪಶ್ಚಿಮ ಡಾರ್ಫುರ್ ಪ್ರಾಂತ್ಯಕ್ಕೆ ಮತ್ತಷ್ಟು ಸೇನಾ ಪಡೆಗಳನ್ನು ನಿಯೋಜಿಸಿದೆ.

ರಾಜಧಾನಿ ಜೆನೆನಾದಿಂದ 80 ಕಿಲೋಮೀಟರ್ ಪೂರ್ವಕ್ಕೆ ಕ್ರೆನಿಕ್ ಪಟ್ಟಣದಲ್ಲಿ ಅರಬ್ಬರು ಮತ್ತು ಆಫ್ರಿಕನ್ ಮಸಲಿತ್ ಬುಡಕಟ್ಟಿನ ನಡುವಿನ ಮಾರಾಮಾರಿ ನಡೆದಿದೆ. ಈ ಘರ್ಷಣೆ ಜೆನೆನಾ ತಲುಪಿದ್ದು, ಇಲ್ಲಿನ ಮುಖ್ಯ ಮಾರುಕಟ್ಟೆಯಲ್ಲಿ ಅಧಿಕಾರಿಗಳು ರಾತ್ರಿಯಿಂದ ಕರ್ಫ್ಯೂ ಘೋಷಿಸಿದ್ದಾರೆ.

ಕ್ರೆನಿಕ್‌ನಲ್ಲಿ ಗುರುವಾರ ಇಬ್ಬರು ಅರಬ್ ಜನರನ್ನು ಅಪರಿಚಿತರು ಕೊಂದು ಹಾಕಿದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಭಾನುವಾರ ಒಂದೇ ದಿನ ಕನಿಷ್ಠ 168 ಜನರು ಸಾವನ್ನಪ್ಪಿದ್ದಾರೆ ಮತ್ತು 89 ಜನ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಕನಿಷ್ಠ 17 ಮಕ್ಕಳು ಮತ್ತು 27 ಮಹಿಳೆಯರು ಸೇರಿದ್ದಾರೆ ಎಂದು ಕ್ರೆನಿಕ್ ಪುರಸಭೆಯ ನಿರ್ದೇಶಕ ನಾಸರ್ ಅಲ್-ಝೆನ್ ಹೇಳಿದ್ದಾರೆ.

ಭಾನುವಾರ ನಡೆದ ಕೆಲ ಗಂಟೆಗಳ ಗಲಾಟೆಯಲ್ಲಿ ಸರ್ಕಾರಿ ಕಟ್ಟಡಗಳು, ಪೊಲೀಸ್ ಠಾಣೆ ಮತ್ತು ಕ್ರೆನಿಕ್‌ನ ಏಕೈಕ ಆಸ್ಪತ್ರೆಯನ್ನು ಗಲಭೆಕೋರರು ಸುಟ್ಟು ಹಾಕಿದ್ದಾರೆ. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಜೆನೆನಾ ಬೋಧನಾ ಆಸ್ಪತ್ರೆಯ ಮೇಲೆ ಭಾನುವಾರ ಗುಂಡಿನ ದಾಳಿ ನಡೆಸಲಾಗಿದ್ದು, ಓರ್ವ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ ಎಂದು ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಚಾರಿಟಿ ತಿಳಿಸಿದೆ.

ಎರಡು ಸಮುದಾಯಗಳ ನಡುವಿನ ದಾಳಿಯನ್ನು ಹತ್ತಿಕ್ಕಲು ಸುಡಾನ್​ ಸರ್ಕಾರ ಮತ್ತಷ್ಟು ಸೇನಾ ಪಡೆಗಳನ್ನು ನಿಯೋಜಿಸಿ ಭದ್ರತೆಯನ್ನು ಗಟ್ಟಿಗೊಳಿಸಿದೆ.

ABOUT THE AUTHOR

...view details