ಕರ್ನಾಟಕ

karnataka

ETV Bharat / international

Sudan crisis: ಸುಡಾನ್​ನಲ್ಲಿ ಮತ್ತೊಂದು ಹಂತದ ಕದನ ವಿರಾಮ; ಎಲ್ಲೆಡೆ ಭಯ ಮಿಶ್ರಿತ ಶಾಂತಿ - ಕದನ ವಿರಾಮ ಜಾರಿಗೆ ಬಂದಾಗಿನಿಂದ ಸಶಸ್ತ್ರ ಹೋರಾಟ

ಸುಡಾನ್​ನಲ್ಲಿ ಹೋರಾಟನಿರತ ಸಶಸ್ತ್ರ ಪಡೆಗಳ ನಡುವೆ ಹೊಸ ಕದನ ವಿರಾಂ ಒಪ್ಪಂದ ಜಾರಿಗೆ ಬಂದಿದೆ.

Cautious calm in Khartoum as new truce comes into effect
Cautious calm in Khartoum as new truce comes into effect

By

Published : Jun 19, 2023, 3:59 PM IST

ಖಾರ್ಟೂಮ್ (ಸುಡಾನ್) : ಹೋರಾಟ ನಿರತ ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಹೊಸ ಶಾಂತಿ ಒಪ್ಪಂದ ಜಾರಿಗೆ ಬಂದಿದ್ದು, ಸುಡಾನ್‌ನ ರಾಜಧಾನಿ ಖಾರ್ಟೂಮ್​ನಲ್ಲಿ ಆತಂಕಭರಿತ ಶಾಂತಿ ನೆಲೆಸಿದೆ. ಸೌದಿ ಅರೇಬಿಯಾ ಮತ್ತು ಯುಎಸ್ ಮಧ್ಯಸ್ಥಿಕೆಯಲ್ಲಿ SAF ಮತ್ತು RSG ಎರಡೂ ಹೊಸ 72 ಗಂಟೆಗಳ ಕದನ ವಿರಾಮಕ್ಕೆ ತಮ್ಮ ಒಪ್ಪಂದವನ್ನು ಭಾನುವಾರ ಘೋಷಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾನುವಾರ ಬೆಳಗ್ಗೆ 6 ಗಂಟೆಗೆ ಕದನ ವಿರಾಮ ಜಾರಿಗೆ ಬಂದಾಗಿನಿಂದ ಸಶಸ್ತ್ರ ಹೋರಾಟಗಳು ನಿಂತುಹೋಗಿವೆ ಮತ್ತು ಯುದ್ಧವಿಮಾನಗಳ ಚಟುವಟಿಕೆಯು ಗಣನೀಯವಾಗಿ ಇಳಿಮುಖವಾಗಿದೆ ಎಂದು ದಕ್ಷಿಣ ಖಾರ್ಟೂಮ್‌ನಲ್ಲಿನ ಪ್ರತ್ಯಕ್ಷ ಸಾಕ್ಷಿಗಳು ಹೇಳಿದ್ದಾರೆ. "ಪರಿಸ್ಥಿತಿ ಉತ್ತಮವಾಗಿದೆ. ಗುಂಡಿನ, ಫಿರಂಗಿ ಅಥವಾ ವೈಮಾನಿಕ ದಾಳಿಯ ಶಬ್ದಗಳು ಕೇಳಿಸುತ್ತಿಲ್ಲ" ಎಂದು ಖಾರ್ಟೂಮ್‌ನ ಪಶ್ಚಿಮದ ಪ್ರಮುಖ ನಗರವಾದ ಓಮ್‌ಡುರ್‌ಮನ್‌ನಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಅಂತಾರಾಷ್ಟ್ರೀಯ ಮಾಧ್ಯಮಕ್ಕೆ ತಿಳಿಸಿದರು.

ಹಿಂದಿನ ದಿನ ನಗರದಲ್ಲಿ ನಡೆದ ತೀವ್ರ ಘರ್ಷಣೆಯ ನಂತರ ಬಹ್ರಿ (ಖಾರ್ಟೂಮ್ ಉತ್ತರ) ನಗರದಲ್ಲಿ ಭಾನುವಾರ ಪರಿಸ್ಥಿತಿ ಶಾಂತವಾಗಿತ್ತು. ಕದನ ವಿರಾಮದ ಸಮಯದಲ್ಲಿ ನಿಷೇಧಿತ ಚಲನವಲನಗಳಿಗೆ ಮುಂದಾಗುವುದಿಲ್ಲ, ದಾಳಿ ನಡೆಸುವುದಿಲ್ಲ, ಮಿಲಿಟರಿ ವಿಮಾನಗಳು ಅಥವಾ ಡ್ರೋನ್‌ಗಳ ಬಳಕೆ ಮಾಡುವುದಿಲ್ಲ, ಫಿರಂಗಿ ದಾಳಿ ನಡೆಸುವುದಿಲ್ಲ, ಸ್ಥಾನಗಳ ಬಲವರ್ಧನೆ ಮಾಡುವುದಿಲ್ಲ ಹೀಗೆ ಹಲವಾರು ಒಪ್ಪಂದಗಳಿಗೆ ಎರಡೂ ಪಕ್ಷಗಳು ಒಪ್ಪಿಕೊಂಡಿವೆ.

ದೇಶಾದ್ಯಂತ ಅಡೆತಡೆಯಿಲ್ಲದ ಚಲನೆ ಮತ್ತು ಮಾನವೀಯ ನೆರವು ಪೂರೈಕೆಗೆ ಅವಕಾಶ ನೀಡಲು ಸಹ ಹೋರಾಟ ನಿರತ ಗುಂಪುಗಳು ಒಪ್ಪಿಕೊಂಡಿವೆ. ಹೇಳಿಕೆಯ ಪ್ರಕಾರ, ಎರಡೂ ಕಡೆಯವರು 72 ಗಂಟೆಗಳ ಕದನ ವಿರಾಮವನ್ನು ಪಾಲಿಸಲು ವಿಫಲವಾದರೆ, ಜೆಡ್ಡಾ ಮಾತುಕತೆಯನ್ನು ನಿರ್ಣಯಗಳನ್ನು ಮಧ್ಯಸ್ಥಿಕೆದಾರರು ರದ್ದು ಮಾಡಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೇ 6 ರಿಂದ ಸೌದಿ ಅರೇಬಿಯಾ ಮತ್ತು ಯುಎಸ್, ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಸುಡಾನ್​ನಲ್ಲಿ ಕಾದಾಡುತ್ತಿರುವ ಪಕ್ಷಗಳ ನಡುವೆ ಮಾತುಕತೆಗಳನ್ನು ನಡೆಸುವಂತೆ ಪ್ರೋತ್ಸಾಹಿಸುತ್ತಿವೆ. ಅಂದಿನಿಂದ ಹಲವಾರು ಕದನ ವಿರಾಮಗಳನ್ನು ಸಾಧಿಸಲಾಗಿದ್ದರೂ, ಅವು ಬಹಳ ಸಮಯದವರೆಗೆ ಪಾಲನೆಯಾಗಿಲ್ಲ. ಏಪ್ರಿಲ್ 15 ರಿಂದ ಸುಡಾನ್ ಖಾರ್ಟೂಮ್ ಮತ್ತು ಇತರ ಪ್ರದೇಶಗಳಲ್ಲಿ ಮಾರಣಾಂತಿಕ ಶಸ್ತ್ರಸಜ್ಜಿತ ಘರ್ಷಣೆಗಳು ನಡೆದಿವೆ. ಇದರಲ್ಲಿ 3,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 6,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸಂಘರ್ಷ ಪ್ರಾರಂಭವಾದಾಗಿನಿಂದ 1.9 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಇವರು ಸುಡಾನ್ ಒಳಗೆ ಮತ್ತು ಹೊರಗೆ ಸುರಕ್ಷಿತ ಪ್ರದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ಯುಎನ್ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (OCHA) ತನ್ನ ಇತ್ತೀಚಿನ ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 6 ರ ಹೊತ್ತಿಗೆ ಸುಡಾನ್‌ನಲ್ಲಿ 1.4 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ನಿರಾಶ್ರಿತರು, ಆಶ್ರಯ ಪಡೆಯುವವರು ಸೇರಿದಂತೆ ಸುಮಾರು 4,60,000 ಜನರು ನೆರೆಯ ದೇಶಗಳಿಗೆ ದಾಟಿದ್ದಾರೆ ಎಂದು ಯುಎನ್ ನಿರಾಶ್ರಿತರ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ : Work Culture: ಕೆಲಸ ಮಾಡುವ ಸಂಸ್ಥೆಯ ಬಗ್ಗೆ ಹೆಮ್ಮೆಯಿದೆ ಎಂದ ಶೇ 86ರಷ್ಟು ಉದ್ಯೋಗಿಗಳು

ABOUT THE AUTHOR

...view details