ಅಥೆನ್ಸ್ (ಗ್ರೀಸ್):ಸಾವಿರಾರು ಪ್ರತಿಭಟನಾಕಾರರು ಬುಧವಾರ ಅಥೆನ್ಸ್ ಮತ್ತು ಉತ್ತರ ಗ್ರೀಕ್ ನಗರವಾದ ಥೆಸಲೋನಿಕಿ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಾರ್ವಜನಿಕ ಮತ್ತು ಕೆಲವು ಖಾಸಗಿ ವಲಯದ ಕಾರ್ಮಿಕರು ಬೆಲೆ ಏರಿಕೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆ ಖಂಡಿಸಿ 24 ಗಂಟೆಗಳ ಕಾಲ ಕೆಲಸ ಸ್ಥಗಿತಗೊಳಿದ್ದರು.
ಈ ಮುಷ್ಕರದಿಂದ ದೇಶಾದ್ಯಂತ ಸೇವೆಗಳಿಗೆ ಅಡ್ಡಿಪಡಿಸಿತು. ಗ್ರೀಸ್‌ನ ದ್ವೀಪಗಳಿಗೆ ಬರುವ ಹಡಗುಗಳ ಸಂಪರ್ಕ ಕಡಿತಗೊಂಡಿತ್ತು. ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿದ್ದವು. ಕಡಿಮೆ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಗಳು ಕಾರ್ಯನಿರ್ವಹಿಸಿದ್ದು, ಹೆಚ್ಚಿನ ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡಿತ್ತು.