ಕೇನ್ಸ್(ಫ್ರಾನ್ಸ್):ಉಕ್ರೇನ್‌ನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕಾನ್ಸ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಮಹಿಳೆಯೊಬ್ಬಳು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಈ ಮಹಿಳೆ ಕಿರುಚುತ್ತಾ ತನ್ನ ಕೆಲ ಬಟ್ಟೆಗಳನ್ನು ಬಿಚ್ಚಿಟ್ಟು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ರೆಡ್ ಕಾರ್ಪೆಟ್ ಮುಂದೆ ಛಾಯಾಗ್ರಾಹಕರು ನೆರೆದಿದ್ದರು. ಈ ವೇಳೆ ಮಹಿಳೆಯೊಬ್ಬಳು ಅರೆಬೆತ್ತಲೆಯಾಗಿ ದಿಢೀರನೆ ಪ್ರತಿಭಟನೆ ಕೈಗೊಂಡಿದ್ದಾಳೆ. ಎಚ್ಚೆತ್ತ ಸೆಕ್ಯುರಿಟಿ ಗಾರ್ಡ್‌ಗಳು ಅವಳ ಬಳಿಗೆ ಧಾವಿಸಿ ಆಕೆಯ ದೇಹವನ್ನು ಕೋಟ್‌ನಿಂದ ಮುಚ್ಚುತ್ತಿರುವುದು ಕಂಡುಬಂದಿದೆ.
ಮಹಿಳೆಯ ಮೈ ಮೇಲೆ ಉಕ್ರೇನಿಯನ್ ಧ್ವಜದ ಬಣ್ಣ ಹಚ್ಚಿಕೊಂಡಿದ್ದಾರೆ. ಅವಳ ಎದೆ ಮತ್ತು ಹೊಟ್ಟೆಯ ಉದ್ದಕ್ಕೂ 'ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ' ಎಂಬ ಪದಗಳು ಗೋಚರಿಸಿವೆ. ಮಹಿಳೆ ಕೆಳ ಬೆನ್ನಿನ ಮೇಲೆ ಮತ್ತು ಕಾಲುಗಳ ಮೇಲೆ ಕೆಂಪು ಬಣ್ಣ ಕಂಡು ಬಂದಿದೆ.