ವಿಶ್ವಸಂಸ್ಥೆ( ನ್ಯೂಯಾರ್ಕ್- ಅಮೆರಿಕ):ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಅಮೆರಿಕದ ಲಿಖಿತ ಕರಡು ನಿರ್ಣಯವನ್ನು ರಷ್ಯಾ ಮತ್ತು ಚೀನಾ ವೀಟೋ ಚಲಾಯಿಸಿವೆ. ಈ ಬಗ್ಗೆ ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್ ಪ್ರತಿಕ್ರಿಯಿಸಿ, ಇದೇ ರೀತಿಯ ಹತ್ಯಾಕಾಂಡವನ್ನು ಅನುಭವಿಸಿದ್ದರೆ ಉಳಿದ ರಾಷ್ಟ್ರಗಳು ಈ ಬಗ್ಗೆ ಹೆಚ್ಚು ಬಲವಾಗಿ ಪ್ರತಿಕ್ರಿಯಿಸುತ್ತಿದ್ದವು ಎಂದು ಪ್ರತಿಪಾದಿಸಿದರು.
ಇಸ್ರೇಲ್‌ನಲ್ಲಿ, ನಾವು ನಮ್ಮ ಉಳಿವಿಗಾಗಿ ಹೋರಾಡುತ್ತಿದ್ದೇವೆ. ಯಾವುದೇ ದೇಶಗಳು ಇದೇ ರೀತಿಯ ಹತ್ಯಾಕಾಂಡವನ್ನು ಸಹಿಸಿಕೊಂಡಿದ್ದರೆ, ಅವು ಇಸ್ರೇಲ್‌ಗಿಂತ ಹೆಚ್ಚಿನ ಬಲದಿಂದ ಹೋರಾಡುತ್ತಿದ್ದವು ಎಂದು ಹೇಳಿದರು. ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯನ್ನು ಖಂಡಿಸುವ ಅಮೆರಿಕದ ಕರಡು ನಿರ್ಣಯವನ್ನು ರಷ್ಯಾ ಮತ್ತು ಚೀನಾ ವೀಟೋ ಚಲಾಯಿಸಿ ವಿರೋಧಿಸಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್, ಈ ರಾಷ್ಟ್ರಗಳು ನಮ್ಮ ರೀತಿಯ ಹತ್ಯಾಕಾಂಡವನ್ನು ಸಹಿಸಿಕೊಂಡಿದ್ದರೆ ಅದರ ವಿರುದ್ಧ ಬಲವಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಿದರು.
ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕದ ಕರಡು ನಿರ್ಣಯವನ್ನು ರಷ್ಯಾ ಮತ್ತು ಚೀನಾ ವೀಟೋ ಚಲಾಯಿಸುವ ಮೂಲಕ ವಿರೋಧಿಸಿವೆ. ರಷ್ಯಾ ತನ್ನ ನಿರ್ಣಯವನ್ನು ಅಂಗೀಕರಿಸಲು ಕನಿಷ್ಠ ಸಂಖ್ಯೆಯ ಮತಗಳನ್ನು ಪಡೆಯಲು ವಿಫಲವಾಗಿದೆ. ಗಾಜಾದಲ್ಲಿ ಇಸ್ರೇಲ್‌ನ ಬಾಂಬ್ ದಾಳಿಯ ಮಧ್ಯೆ, ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಕದನ ವಿರಾಮದ ಬಗ್ಗೆ ಒಮ್ಮತಕ್ಕೆ ಸಾಧ್ಯವಾಗಲಿಲ್ಲ.