ಕರ್ನಾಟಕ

karnataka

ETV Bharat / international

ಶ್ರೀಲಂಕಾದಲ್ಲಿ ಭಾರತೀಯ ರೂಪಾಯಿ ಬಳಕೆಗೆ ಅನುಮತಿ ಸಾಧ್ಯತೆ: ಅನುಕೂಲಗಳೇನು ಗೊತ್ತೇ? - Indian rupee for local transactions in Sri Lanka

ಶ್ರೀಲಂಕಾ ಮತ್ತು ಭಾರತ ದೇಶಗಳ ನಡುವೆ ವ್ಯಾಪಾರ, ಪ್ರವಾಸೋದ್ಯಮವನ್ನು ಉತ್ತೇಜಿಸಲು ಶ್ರೀಲಂಕಾದಲ್ಲಿ ಭಾರತೀಯ ರೂಪಾಯಿಯ ಬಳಕೆಗೆ ಅನುಮತಿ ನೀಡುವ ಸಾಧ್ಯತೆ ಗೋಚರಿಸಿದೆ.

Sri Lanka
ಶ್ರೀಲಂಕಾ

By

Published : Jul 23, 2023, 9:40 AM IST

ಕೊಲಂಬೊ: ಶ್ರೀಲಂಕಾದಲ್ಲಿ ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ಡಾಲರ್, ಯೂರೋ ಮತ್ತು ಯೆನ್‌ ಕರೆನ್ಸಿಯಂತೆ ಸ್ಥಳೀಯ ವಹಿವಾಟುಗಳಿಗೆ ಭಾರತೀಯ ರೂಪಾಯಿ ಬಳಕೆಗೆ ಅನುಮತಿ ನೀಡುವ ವಿಚಾರವನ್ನು ಪರಿಗಣಿಸಿದ್ದೇವೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ಶನಿವಾರ ತಿಳಿಸಿದ್ದಾರೆ.

ಜುಲೈ 20-21ರಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ವರ್ಷ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಭೇಟಿಯಾಗಿತ್ತು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಬ್ರಿ, "ನಾವು ಡಾಲರ್, ಯೂರೋ ಮತ್ತು ಯೆನ್ ಅನ್ನು ಸ್ವೀಕರಿಸಿದಂತೆ ಭಾರತೀಯ ರೂಪಾಯಿಗಳನ್ನು ಬಳಸುವ ಸಾಧ್ಯತೆಯನ್ನು ಪರಿಗಣಿಸಿದ್ದೇವೆ. ಈ ಕುರಿತು ವಿಕ್ರಮಸಿಂಘೆ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಮೋದಿ ನಾಯಕತ್ವದಲ್ಲಿ ಭಾರತವು ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುತ್ತಿದೆ. ಭಾರತೀಯ ರೂಪಾಯಿ ಬಳಕೆಯು ನಮಗೆ ಯಾವುದೇ ವ್ಯತ್ಯಾಸ ಉಂಟುಮಾಡುವುದಿಲ್ಲ. ಜಗತ್ತು ಅಭಿವೃದ್ಧಿ ಹೊಂದುತ್ತಿದೆ, ನಾವೂ ಕೂಡ ಹೊರಗಿನ ಪ್ರಪಂಚಕ್ಕೆ ಹೆಚ್ಚು ತೆರೆದುಕೊಳ್ಳಬೇಕಿದೆ" ಎಂದು ಹೇಳಿದರು.

ಶುಕ್ರವಾರ, ಉಭಯ ದೇಶಗಳ ನಡುವಿನ ವ್ಯಾಪಾರ ವಸಾಹತುಗಳಿಗೆ ಕರೆನ್ಸಿಯಾಗಿ INR (Indian National Rupee) ಅನ್ನು ಗೊತ್ತುಪಡಿಸುವ ನಿರ್ಧಾರಕ್ಕೆ ಉಭಯ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ. ವ್ಯಾಪಾರ ಮತ್ತು ವಹಿವಾಟುಗಳನ್ನು ಮತ್ತಷ್ಟು ಹೆಚ್ಚಿಸಲು ಏಕೀಕೃತ ಪಾವತಿಗಳ ಇಂಟರ್ಫೇಸ್ ಆಧಾರಿತ ಡಿಜಿಟಲ್ ಪಾವತಿಗಳನ್ನು ಕಾರ್ಯಗತಗೊಳಿಸಲು ಒಪ್ಪಿಕೊಳ್ಳಲಾಗಿದೆ. ಮೋದಿ ಮತ್ತು ವಿಕ್ರಮಸಿಂಘೆ ನಡುವಿನ ದ್ವಿಪಕ್ಷೀಯ ಮಾತುಕತೆಯ ನಂತರ ಶ್ರೀಲಂಕಾದಲ್ಲಿ UPI ಅರ್ಜಿ ಸ್ವೀಕಾರಕ್ಕಾಗಿ NIPL ಮತ್ತು ಲಂಕಾ ಪೇ ನಡುವಿನ ನೆಟ್‌ವರ್ಕ್ ಟು ನೆಟ್‌ವರ್ಕ್ ಒಪ್ಪಂದಕ್ಕೆ ಎರಡು ದೇಶಗಳು ಸಹಿ ಹಾಕಿವೆ ಎಂದಿದ್ದಾರೆ.

ರೂಪಾಯಿಯನ್ನು ನೇರವಾಗಿ ಬಳಸಲು ಅನುಮತಿ ದೊರೆಯುವ ಹಿನ್ನೆಲೆಯಲ್ಲಿ ಭಾರತೀಯ ಪ್ರವಾಸಿಗರು ಮತ್ತು ಉದ್ಯಮಿಗಳು ಆಗಾಗ್ಗೆ ಕರೆನ್ಸಿ ಬದಲಾಯಿಸಬೇಕಾಗಿಲ್ಲ. ಎರಡು ದೇಶಗಳ ನಡುವಿನ ವ್ಯಾಪಾರಕ್ಕಾಗಿ ರೂಪಾಯಿಯನ್ನೇ ಕರೆನ್ಸಿಯಾಗಿ ಅಳವಡಿಸಿಕೊಳ್ಳುವುದರಿಂದ ವಾಣಿಜ್ಯ ಸಂಬಂಧಗಳು ಗಟ್ಟಿಯಾಗುತ್ತವೆ. ಇದು ಹೆಚ್ಚು ಲಾಭದಾಯಕ ಕೂಡಾ. ವ್ಯಾಪಾರ ಮತ್ತು ವಹಿವಾಟುಗಳನ್ನು ಹೆಚ್ಚಿಸಲು UPI ಆಧಾರಿತ ಡಿಜಿಟಲ್ ಪಾವತಿಗಳನ್ನು ನಿರ್ವಹಿಸಲು ಎರಡೂ ದೇಶಗಳು ಈಗಾಗಲೇ ಒಪ್ಪಿಕೊಂಡಿವೆ ಎಂದು ಮತ್ತೊಮ್ಮೆ ಅವರು ಸ್ಪಷ್ಟಪಡಿಸಿದರು.

ಕೈಗಾರಿಕೆ, ಶಕ್ತಿ ಮತ್ತು ದ್ವಿಪಕ್ಷೀಯ ಸಹಕಾರಕ್ಕಾಗಿ ಪ್ರಾದೇಶಿಕ ಕೇಂದ್ರವಾಗಿ ಟ್ರಿಂಕೋಮಲಿಯನ್ನು ಅಭಿವೃದ್ಧಿಪಡಿಸುವ ಕುರಿತು ಭಾರತದೊಂದಿಗೆ ಸಹಿ ಹಾಕಲಾದ ತಿಳುವಳಿಕೆ ಒಪ್ಪಂದಕ್ಕೆ ಚೀನಾದಿಂದ ಯಾವುದೇ ಆಕ್ಷೇಪಣೆ ಇಲ್ಲ. ಉಭಯ ದೇಶಗಳ ನಡುವಿನ ಬಂದರು ಸಂಪರ್ಕದ ಪ್ರಾಮುಖ್ಯತೆಯ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. ಮುಂದಿನ ಗುರಿ ತಲುಪಲು ಹೂಡಿಕೆಯ ಅಗತ್ಯವಿದೆ. ಎರಡೂ ದೇಶಗಳಿಗೆ ಪರಸ್ಪರ ಲಾಭದಾಯಕವಾದ ಮಾರ್ಗಗಳ ಕುರಿತು ಚರ್ಚಿಸಿವೆ. ಖಾಸಗಿ ವಲಯದ ನಡುವಿನ ಸಂಬಂಧದ ಕುರಿತು ಸಹ ಒತ್ತಿಹೇಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ :ಫ್ರಾನ್ಸ್‌ನಲ್ಲಿ ಭಾರತದ ಯುಪಿಐ ಬಳಕೆ, ವಿದ್ಯಾರ್ಥಿಗಳಿಗೆ 5 ವರ್ಷದ ದೀರ್ಘಾವಧಿಯ ಪೋಸ್ಟ್‌ ಸ್ಟಡಿ ವೀಸಾ ಸೌಲಭ್ಯ: ಪ್ರಧಾನಿ ಮೋದಿ

ಕೊಲಂಬೊ, ಟ್ರಿಂಕೋಮಲಿ ಮತ್ತು ದಕ್ಷಿಣ ಭಾರತದ ಪ್ರದೇಶಗಳ ನಡುವಿನ ಬಂದರು ಸಂಪರ್ಕದ ಅಗತ್ಯದ ಬಗ್ಗೆ ಉಭಯ ನಾಯಕರು ಚರ್ಚಿಸಿದ್ದಾರೆ. ಭೂ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸುವ ಅಥವಾ ಈಗಿರುವ ದೋಣಿ ಸೇವೆಗಳನ್ನು ಮುಂದುವರಿಸುವ ಕುರಿತು ಅಗತ್ಯ ಅಧ್ಯಯನಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಶ್ರೀಲಂಕಾದ ಡಿಜಿಟಲೀಕರಣಕ್ಕೆ ಸಹಾಯ ಮಾಡಲು ಭಾರತೀಯ ವಿಶ್ವವಿದ್ಯಾನಿಲಯಗಳ ಸಹಾಯ ಪಡೆಯುವ ಬಗ್ಗೆಯೂ ಚರ್ಚಿಸಲಾಗಿದೆ.

ಇತ್ತೀಚೆಗೆ ಫ್ರಾನ್ಸ್​ಗೆ ಭೇಟಿ ನೀಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದರು. ಜೊತೆಗೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ, ಫ್ರಾನ್ಸ್ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಮೂಲದ ಫ್ರಾನ್ಸ್‌ನಲ್ಲಿರುವ ಭಾರತೀಯ ಪ್ರವಾಸಿಗರು ಮುಂದಿನ ದಿನಗಳಲ್ಲಿ ರೂಪಾಯಿಗಳಲ್ಲಿ ವ್ಯವಹಾರ ಮಾಡಲು ಅನುಮತಿ ನೀಡಲಾಗಿದೆ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸಬ್ರಿ ತಿಳಿಸಿದರು.

ABOUT THE AUTHOR

...view details