ಕೊಲಂಬೊ: ಭಾರತದ ಪಕ್ಕದಲ್ಲಿರೋ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದಿನನಿತ್ಯದ ಅಗತ್ಯವಸ್ತುಗಳ ಕೊರತೆ ಎದುರಾಗಿದ್ದು, ಜನತೆ ರೊಚ್ಚಿಗೆದ್ದಿದ್ದಾರೆ. ಪರಿಸ್ಥಿತಿ ನಿಭಾಯಿಸಲು ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಇಂದಿನಿಂದ ಯುಟ್ಯೂಬ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟರ್, ಟಿಕ್ಟಾಕ್ ಸೇರಿದಂತೆ ಎರಡು ಡಜನ್ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ.
ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ - ಇಂಟರ್ನೆಟ್ ವೀಕ್ಷಣಾಲಯ
ತೀವ್ರ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಈಗಾಗಲೇ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸಾರ್ವಜನಿಕರ ಪ್ರತಿಭಟನೆಗಳನ್ನು ಹತ್ತಿಕ್ಕಲು ಶನಿವಾರದಿಂದ ಸೋಮವಾರದವರೆಗೆ ರಾಷ್ಟ್ರಾದ್ಯಂತ 36 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ. ಈ ಬೆನ್ನಲ್ಲೇ ಇಂದಿನಿಂದ ಸುಮಾರು 24 ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನೂ ನಿರ್ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
Sri Lanka
ಲಾಕ್‌ಡೌನ್ ಹೊಡೆತ ಹಾಗೂ ಅಸಮರ್ಪಕ ವಿದೇಶಿ ವಿನಿಮಯ ನಿರ್ವಹಣೆಯೇ ಇಂದಿನ ಲಂಕಾ 'ದಹನ'ಕ್ಕೆ ಕಾರಣವಾಗಿದೆ. ಇಡೀ ದೇಶವನ್ನೇ ನಿಯಂತ್ರಣಕ್ಕೆ ಪಡೆದಿರುವ ಸೇನೆ, ರಸ್ತೆ ರಸ್ತೆಗೂ ಯೋಧರನ್ನು ನಿಯೋಜಿಸಿದೆ. ಬಂದೂಕಿನ ನಳಿಕೆಯಡಿ ಜನತೆ ಬದುಕುವಂತಾಗಿದೆ. ತೀವ್ರ ವಿದ್ಯುತ್ ಬಿಕ್ಕಟ್ಟು ಉಂಟಾಗಿದ್ದು, ಪ್ರತಿಭಟನೆಗಳನ್ನು ಹತ್ತಿಕ್ಕಲು ಶನಿವಾರದಿಂದ ಸೋಮವಾರದವರೆಗೆ 36 ಗಂಟೆಗಳ ಕರ್ಫ್ಯೂ ಘೋಷಿಸಲಾಗಿದೆ.
ಇದನ್ನೂ ಓದಿ:ರಂಜಾನ್ ಮಾಸ ಆರಂಭ: ಪ್ರಧಾನಿ ಮೋದಿ, ರಾಹುಲ್ ಗಾಂಧಿ ಶುಭಾಶಯ