ಕರ್ನಾಟಕ

karnataka

ETV Bharat / international

ಮಿಂಚಿನಂತೆ ವೈರಲ್ ಆದ ಮಿಂಚಿನ ಫೋಟೋ.. ಬ್ಯೂಟಿಫುಲ್ ಎಂದ ನೆಟ್ಟಿಗರು! - ಮಲೇಷ್ಯಾದಲ್ಲಿ ಮಿಂಚಿನ ವೈರಲ್ ಫೋಟೋ

ಮಲೇಷ್ಯಾದ ಕೌಲಾಲಂಪುರ್​ನಲ್ಲಿ ಮಿಂಚು ಸೃಷ್ಟಿಸಿದ ಅತ್ಯರೂಪದ ಕ್ಷಣವೊಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿ ಜೊತೆಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

Spectacular lightning display of Malaysia's night sky goes viral
ಮಿಂಚಿನಂತೆ ವೈರಲ್ ಆದ ಮಿಂಚಿನ ಫೋಟೋ.. ಬ್ಯೂಟಿಫುಲ್ ಎಂದ ನೆಟ್ಟಿಗರು!

By

Published : Apr 30, 2022, 7:26 AM IST

ಕೌಲಾಲಂಪುರ್, ಮಲೇಷ್ಯಾ:ಆಗಸ ಸೃಷ್ಟಿಸುವ ಕೌತುಕಗಳಿಗೆ ಕೊನೆಯೇ ಇಲ್ಲ. ಅಲ್ಲಿ ಕ್ಷಣಕ್ಕೊಂದು ವಿಸ್ಮಯ ಇದ್ದೇ ಇರುತ್ತದೆ. ಆಕಾಶದ ವಿದ್ಯಮಾನಗಳು ಭೂಮಿಯ ಮೇಲೆ ಸೃಷ್ಟಿಸುವ ಸುಂದರ ಕ್ಷಣಗಳೂ ಕೂಡಾ ಅವುಗಳ ಪಟ್ಟಿಗೇ ಸೇರುತ್ತದೆ. ಇತ್ತೀಚೆಗಷ್ಟೇ ಮಲೇಷ್ಯಾ ಕೌಲಾಲಂಪುರ್​ನಲ್ಲಿ ಮಿಂಚು ಸೃಷ್ಟಿಸಿದ ಅತ್ಯರೂಪದ ಕ್ಷಣವೊಂದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈಗ ಮಲೇಷ್ಯಾದಲ್ಲಿ ಚಂಡಮಾರುತ ಬೀಸುತ್ತಿದೆ. ಇದರಿಂದ ಗುಡುಗು ಸಹಿತ ಮಳೆಯೂ ಕೂಡಾ ಬೀಳುತ್ತಿದೆ. ಕೆಲವು ದಿನಗಳ ಹಿಂದೆ ರಾತ್ರಿಯ ವೇಳೆ ಆಕಾಶದಲ್ಲಿ ಕಾಣಿಸಿಕೊಂಡ ಮಿಂಚನ್ನು ವ್ಯಕ್ತಿಯೊಬ್ಬರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಕೆಲವರು ಈ ಫೋಟೋಗೆ ಮೆಚ್ಚುಗೆ ಸೂಚಿಸಿದರೆ, ಇನ್ನೂ ಕೆಲವರು ಫೋಟೋಶಾಪ್ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಲವರ ಅನುಮಾನಗಳಿಗೆ ಉತ್ತರಿಸಿರುವ ಬಳಕೆದಾರರೊಬ್ಬರು ಇದು ಫೋಟೋಶಾಪ್ ಅಲ್ಲ. ಮೊಬೈಲ್​ಗಳನ್ನು ಬಳಸಿ ನಾವು ಇಂಥದ್ದೇ ಫೋಟೋ ತೆಗೆಯಬಹುದು ಎಂದು ಸಮಾಜಾಯಿಷಿ ನೀಡಿದ್ದಾರೆ. ಬಹುತೇಕ ಮಂದಿ ಈ ಫೋಟೋಗೆ 'ವ್ಹಾವ್', 'ಅಮೇಜಿಂಗ್ ಶಾಟ್'​, 'ಬ್ಯೂಟಿಫುಲ್' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಲೇಷ್ಯಾವನ್ನು ಭಯಾನಕ ಸಿಡಿಲುಗಳ ತಾಣ ಎಂದು ಬಣ್ಣಿಸಿದ್ದಾರೆ.

ಕೆಲವರ ಪ್ರಕಾರ ಮಲೇಷ್ಯಾದಲ್ಲಿ ಇಂತಹ ಮಿಂಚುಗಳು ಸರ್ವೇ ಸಾಮಾನ್ಯ. ಉಷ್ಣವಲಯದ ಹವಾಮಾನ ಮತ್ತು ಭೌಗೋಳಿಕ ಸ್ಥಾನಮಾನದಿಂದಾಗಿ ಇಂತಹ ಮಿಂಚು- ಗುಡುಗುಗಳು ಸಂಭವಿಸುತ್ತದೆ. ಸಿಡಿಲು ಬಡಿದು ಮಲೇಷ್ಯಾದಲ್ಲಿ ಆಗಸ್ಟ್ 2019ರವರೆಗೆ 10 ವರ್ಷಗಳ ಅವಧಿಯಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನೂ ಓದಿ:ಹೆಲಿಕಾಪ್ಟರ್​ ಮೂಲಕ ಮೆರವಣಿಗೆ, ಜಾಗ್ವಾರ್ ಕಾರಲ್ಲಿ ಮಂಟಪ ತಲುಪಿದ ವರ- ರೈತನ ಮಗನ ಅದ್ಧೂರಿ ಮದುವೆ!

ABOUT THE AUTHOR

...view details