ಮ್ಯಾಡ್ರಿಡ್(ಸ್ಪೇನ್):ಮಂಕಿಪಾಕ್ಸ್‌ನಿಂದ ವ್ಯಕ್ತಿಯ ಸಾವನ್ನಪ್ಪಿದ್ದು, ಇದು ಯುರೋಪಿಯನ್ ಯೂನಿಯನ್ ರಾಷ್ಟ್ರದಲ್ಲಿ ಮೊದಲನೇ ಮರಣವಾಗಿದೆ ಎಂದು ಸ್ಪಾನೀಷ್ ಮಾಧ್ಯಮಗಳು ವರದಿ ಮಾಡಿವೆ. ಇದುವರೆಗೆ 120 ಜನರನ್ನು ಮಂಕಿಪಾಕ್ಸ್‌ನಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಇದು ದೇಶದ ಮೊದಲ ಮಂಕಿಪಾಕ್ಸ್ ಸಾವು ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯವು ಪ್ರಕಟಣೆ ಮೂಲಕ ತಿಳಿಸಿದೆ ಎಂದು ಸ್ಪೇನ್‌ನ ರಾಜ್ಯ ಸುದ್ದಿ ಸಂಸ್ಥೆ ಎಫೆ ಮತ್ತು ಇತರ ಮಾಧ್ಯಮಗಳು ಹೇಳಿವೆ.
ಸಾವಿನ ಬಗ್ಗೆ ಹೆಚ್ಚಿನ ವಿವರಗಳನ್ನು ಸಚಿವಾಲಯ ಬಹಿರಂಗ ಪಡಿಸಿಲ್ಲ. ಸ್ಪೇನ್‌ನಲ್ಲಿ 4,298 ಜನರು ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಅದರಲ್ಲಿ, ಸುಮಾರು 3,500 ಪ್ರಕರಣಗಳು ಇತರ ಪುರುಷರೊಂದಿಗೆ ಸಂಭೋಗಿಸಿದ ಪುರುಷರಲ್ಲಿ ಈ ವೈರಸ್ ಕಂಡು ಬಂದಿದ್ದು, ಕೇವಲ 64 ಮಹಿಳೆಯರಲ್ಲಿ ಮಾತ್ರ ಈ ಸೋಂಕು ಕಾಣಿಸಿಕೊಂಡಿದೆ.