ಸಿಯೋಲ್:ದಕ್ಷಿಣ ಕೊರಿಯಾದಲ್ಲಿ ನೈಸರ್ಗಿಕ ಜನನದ ದರ ಕುಸಿತ ಕಂಡಿದೆ. ಇದೇ ವೇಳೆ ವಯಸ್ಕರ ಸಂಖ್ಯೆಯಲ್ಲಿ ಭಾರಿ ಏರಿಕೆ ಕೂಡ ಕಂಡಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಮಕ್ಕಳ ಜನನ ದರದ ದತ್ತಾಂಶಗಳು ಇಳಿಕೆ ಆಗುತ್ತಿರುವುದು ದೇಶದಲ್ಲಿ ಕಳವಳದ ವಿಷಯವಾಗಿದೆ.
ಇತ್ತೀಚಿಗೆ ಬಿಡುಗಡೆಯಾದ ಹೊಸ ದತ್ತಾಂಶದ ಪ್ರಕಾರ, ಜುಲೈನಲ್ಲಿ ಕೇವಲ 19,102 ಶಿಶುಗಳು ಜನಿಸಿದ್ದು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮಗುವಿನ ಜನನ ದರ 6.7 ರಷ್ಟು ಕುಸಿದಿದೆ ಎಂದು ವರದಿ ತಿಳಿಸಿದೆ.
ಕಳೆದ 10 ತಿಂಗಳಿನಿಂದ ದಕ್ಷಿಣ ಕೊರಿಯಾದಲ್ಲಿ ಶಿಶುಗಳ ಜನನ ಸಂಖ್ಯೆ ಕುಸಿತ ಕಾಣುತ್ತಿದೆ ಎಂದು ಯಿನ್ಹಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಅದರಲ್ಲೂ ಜುಲೈನಲ್ಲಿ ಈ ಸಂಖ್ಯೆ ದೊಡ್ಡ ಮಟ್ಟದ ಕುಸಿತ ಕಂಡಿದೆ. 1981ರಿಂದ ಏಜೆನ್ಸಿ ಆರಂಭವಾದಾಗಿನಿಂದ ಈ ಜನನ ದರ ಲೆಕ್ಕ ಹಾಕಲಾಗಿದೆ. ಸಾಮಾನ್ಯವಾಗಿ ಕನಿಷ್ಟ ಎಂದರೂ ಮಾಸಿಕ 20,000 ಜನನ ಪ್ರಮಾಣ ದಾಖಲಾಗುತ್ತಿತ್ತು. ಆದರೆ, ಇದೀಗ ಈ ಸಂಖ್ಯೆ ಜುಲೈನಲ್ಲಿ ಕುಸಿತ ಕಂಡಿದೆ.
ಇದಕ್ಕೆ ತದ್ವಿರುದ್ದವಾಗಿ ದೇಶದಲ್ಲಿ ಸಾವಿನ ಪ್ರಮಾಣ 8.3ಕ್ಕೆ ಇಳಿಕೆಯಾಗಿದೆ. ವಯಸ್ಕರ ಜನಸಂಖ್ಯೆಯಲ್ಲಿ 28,238 ಅಧಿಕವಾಗಿದೆ. ವಯಸ್ಕರ ಸಾವಿನ ದರದಲ್ಲಿ ಕಳೆದ 45 ತಿಂಗಳಿನಿಂದ ಯಾವುದೇ ನೈಸರ್ಗಿಕ ಇಳಿಕೆ ಕಂಡಿಲ್ಲ ಎಂದು ವರದಿ ತಿಳಿಸಿದೆ.