ಕೇಪ್ ಕ್ಯಾನವೆರಲ್(ಫ್ಲೋರಿಡಾ): ಉತ್ತರ ಕೊರಿಯಾದೊಂದಿಗಿನ ಉದ್ವಿಗ್ನತೆಯ ನಡುವೆ ದಕ್ಷಿಣ ಕೊರಿಯಾ ಗುರುವಾರ ತನ್ನ ಮೊದಲ ಚಂದ್ರನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಗಸ್ಟ್ 4 ರಂದು ಕೊರಿಯಾ ಪಾತ್‌ಫೈಂಡರ್ ಲೂನಾರ್ ಆರ್ಬಿಟರ್ (ಕೆಪಿಎಲ್‌ಒ) ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು.
ಇದು ಸ್ವದೇಶಿ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತಿದ್ದು, ಚಂದ್ರನ ಮೇಲ್ಮೈಗೆ ಮಾನವರಹಿತ ಮಿಷನ್ ಅನ್ನು ಪ್ರಾರಂಭಿಸಿದ ವಿಶ್ವದ ಏಳನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಇದೆ. ದನುರಿ ಎಂದರೆ ಕೊರಿಯನ್ ಭಾಷೆಯಲ್ಲಿ ಚಂದ್ರನನ್ನು ಆನಂದಿಸಿ ಎಂದರ್ಥ.
ನಾಸಾದೊಂದಿಗೆ ಪಾಲುದಾರಿಕೆ:ದನುರಿ ಪ್ರೋಬ್ ಅನ್ನು ಕೊರಿಯಾ ಏರೋಸ್ಪೇಸ್ ರಿಸರ್ಚ್ ಇನ್ಸಿಟ್ಯೂಟ್ (KARI) ಅಭಿವೃದ್ಧಿಪಡಿಸಿದೆ. ಇದು ಚಂದ್ರನ ಮೇಲ್ಮೈಯಿಂದ 100 ಕಿಮೀ ಎತ್ತರದಿಂದ ಚಂದ್ರನ ಮೇಲ್ಮೈ ಅಧ್ಯಯನ ನಡೆಸುತ್ತದೆ. ದಕ್ಷಿಣ ಕೊರಿಯಾ ಈ ಕಾರ್ಯಾಚರಣೆಯಲ್ಲಿ ನಾಸಾದೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ.
ಲೂನಾರ್ ಆರ್ಬಿಟರ್ 1.82 ಮೀ ಅಗಲ, 2.14 ಮೀ ಉದ್ದ ಮತ್ತು 2.29 ಮೀ ಎತ್ತರದ ಮುಖ್ಯ ದೇಹವನ್ನು ಒಳಗೊಂಡಿದೆ. ಮುಖ್ಯ ದೇಹವು ನ್ಯಾವಿಗೇಷನ್ ಮತ್ತು ಮಾರ್ಗದರ್ಶನ ನಿಯಂತ್ರಣ ಉಪಕರಣಗಳು, ವಿದ್ಯುತ್ ವ್ಯವಸ್ಥೆಗಳು, ಉಷ್ಣ ನಿಯಂತ್ರಣಗಳು, ದೂರದ ಸಂವಹನ ವ್ಯವಸ್ಥೆಗಳು ಮತ್ತು ಪ್ರೊಪಲ್ಷನ್ ಸಿಸ್ಟಮ್ಗಳನ್ನು ಹೊಂದಿದೆ.
ಒಂದು ವರ್ಷದ ನಿರೀಕ್ಷಿತ ಜೀವಿತಾವಧಿ:678 ಕೆಜಿ ತೂಕದ ರಾಕೆಟ್ ಚಂದ್ರನ ಸುತ್ತ ಒಂದು ವರ್ಷದ ನಿರೀಕ್ಷಿತ ಜೀವಿತಾವಧಿಯನ್ನು ಹೊಂದಿದೆ ಮತ್ತು 100 ಕಿಮೀ ಎತ್ತರದಲ್ಲಿ ಮತ್ತು 90 ಡಿಗ್ರಿಗಳ ಇಳಿಜಾರಿನ ಕೋನದಲ್ಲಿ ವೃತ್ತಾಕಾರದ ಕಕ್ಷೆಯಲ್ಲಿ ಪರಿಭ್ರಮಿಸುತ್ತದೆ.
ಬಾಹ್ಯಾಕಾಶ ನೌಕೆಯು ಒಟ್ಟು ಆರು ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಚಂದ್ರನ ಲ್ಯಾಂಡಿಂಗ್ ಮಾಡ್ಯೂಲ್‌ಗಾಗಿ ಉದ್ದೇಶಿತ ಲ್ಯಾಂಡಿಂಗ್ ಸೈಟ್ ಅನ್ನು ಅನ್ವೇಷಿಸಲು ಬಾಹ್ಯಾಕಾಶ ನೌಕೆಯು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ಹೊಂದಿದೆ. ಚಂದ್ರನ ಮೇಲ್ಮೈ ಕಣಗಳು ಮತ್ತು ಬಾಹ್ಯಾಕಾಶ ನೌಕೆಯ ಪ್ರಭಾವ ವಿಶ್ಲೇಷಿಸಲು ಧ್ರುವೀಕರಿಸಿದ ಕ್ಯಾಮೆರಾ ಮತ್ತು ಸಂಬಂಧಿತ ಡೇಟಾ ಸಂಗ್ರಹಿಸಲು ಈ ಉಪಗ್ರಹ ಹೊಂದಿದೆ.
ಈ ಉಪಗ್ರಹದ ವಿಶೇಷತೆ ಏನು?:ಗಾಮಾ - ರೇ ಸ್ಪೆಕ್ಟ್ರೋಮೀಟರ್ ಅನ್ನು ಸಹ ಈ ಉಪಗ್ರಹದಲ್ಲಿದೆ. ಇದು ಚಂದ್ರನ ಮೇಲ್ಮೈ ಮತ್ತು ಅದರ ವಿತರಣಾ ಮಾದರಿಯನ್ನು ರೂಪಿಸುವ ಅಂಶಗಳನ್ನು ಗುರುತಿಸುತ್ತದೆ. ಚಂದ್ರನಿಗೆ ಕಳುಹಿಸಲಾಗುತ್ತಿರುವ ಧ್ರುವೀಕೃತ ಕ್ಯಾಮರಾವನ್ನು ಸಂಪೂರ್ಣ ಚಂದ್ರನ ಮೇಲ್ಮೈಯ ಚಿತ್ರವನ್ನು ಚಿತ್ರೀಕರಿಸಲು ಮತ್ತು ಧ್ರುವ ಪ್ರದೇಶ ಹೊರತುಪಡಿಸಿ ಪ್ರದೇಶಗಳ ಧ್ರುವೀಕೃತ ಚಿತ್ರಗಳನ್ನು ಸೆರೆಹಿಡಿಯಲು ಬಳಸಲಾಗುತ್ತದೆ.
ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಶನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ETRI) ಅಭಿವೃದ್ಧಿಪಡಿಸಿದ ಬಾಹ್ಯಾಕಾಶ ಇಂಟರ್ನೆಟ್ ಪರೀಕ್ಷಾ ಸಲಕರಣೆಗಳನ್ನು ವಿಳಂಬ-ಸಹಿಷ್ಣು ನೆಟ್‌ವರ್ಕ್‌ಗಳನ್ನು ಪರೀಕ್ಷಿಸಲು ಸಹ ಬಳಸಲಾಗುತ್ತದೆ.
ಇತಿಹಾಸ ನಿರ್ಮಿಸಿದ ಕೊರಿಯಾ:ದಕ್ಷಿಣ ಕೊರಿಯಾ ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಬಾರಿಗೆ ಘನ ಇಂಧನ ಬಾಹ್ಯಾಕಾಶ ರಾಕೆಟ್ ಅನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಇತಿಹಾಸ ನಿರ್ಮಿಸಿತು. ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ದಕ್ಷಿಣದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ರಾಕೆಟ್ ಅಭಿವೃದ್ಧಿಯ ಮೇಲೆ ದಶಕಗಳ ನಿರ್ಬಂಧಗಳನ್ನು ಕೊನೆಗೊಳಿಸಲು ಕಳೆದ ವರ್ಷ ಒಪ್ಪಿಕೊಂಡ ನಂತರ ಇದು ಮೊದಲ ಪರೀಕ್ಷೆಯಾಗಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾ ತನ್ನ ಮೊದಲ ಸ್ವದೇಶಿ ನಿರ್ಮಿತ ರಾಕೆಟ್‌ನ್ನು ಉಡಾವಣೆ ನಡೆಸಿತು. ನೂರಿ ಸ್ಫೋಟಗೊಂಡಿದ್ದರಂದಿ ಡಮ್ಮಿ ಉಪಗ್ರಹವನ್ನು ಸಂಪೂರ್ಣವಾಗಿ ಕಕ್ಷೆಗೆ ಸೇರಿಸಲು ವಿಫಲವಾಯಿತು.
ಓದಿ:ಸಿಂಗಾಪುರದ 3 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆ ಸೇರಿಸಿದ ಇಸ್ರೋ: ವಿಡಿಯೋ