ಬ್ರಾಟಿಸ್ಲಾವಾ (ಸ್ಲೋವಾಕಿಯಾ): ಸ್ಲೋವಾಕಿಯಾ ಸರ್ಕಾರವು ಉಕ್ರೇನ್‌ಗೆ ತನ್ನ 13 ಸೋವಿಯತ್ ಯುಗದ ಮಿಗ್ 29 ಫೈಟರ್ ಜೆಟ್‌ಗಳನ್ನು ನೀಡುವ ಯೋಜನೆಗೆ ಅನುಮೋದನೆ ನೀಡಿದೆ. ರಷ್ಯಾದ ಆಕ್ರಮಣದ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ಸಹಾಯ ಕೇಳಿದ ಉಕ್ರೇನ್‌ಗೆ ಯುದ್ಧ ವಿಮಾನವನ್ನು ಪೂರೈಸಲು ಒಪ್ಪಿದ ಎರಡನೇ ನ್ಯಾಟೋ ಸದಸ್ಯ ರಾಷ್ಟ್ರ ಇದಾಗಿದೆ. ಪ್ರಧಾನಿ ಎಡ್ವರ್ಡ್ ಹೆಗರ್ ಶುಕ್ರವಾರ ತಮ್ಮ ಸರ್ಕಾರದ ಸರ್ವಾನುಮತದ ನಿರ್ಧಾರವನ್ನು ಪ್ರಕಟಿಸಿದರು. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, @ZelenskyyUa ಹೆಚ್ಚಿನ ಶಸ್ತ್ರಗಳನ್ನು ಕೇಳಿದಾಗ ನಾವು ಭರವಸೆಗಳನ್ನ ಉಳಿಸಿಕೊಳ್ಳುವ ಉದ್ದೇಶದಿಂದ ನಾವು ನಮ್ಮ ಕೈಲಾದಷ್ಟು ಫೈಟರ್ ಜೆಟ್‌ಗಳನ್ನು ನೀಡುತ್ತೇವೆ ಎಂದು ಹೇಳಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ :ಉಕ್ರೇನ್ನಲ್ಲಿ ಶಾಂತಿ ಸ್ಥಾಪನೆ, ತಕ್ಷಣ ರಷ್ಯಾ ಸೇನೆ ವಾಪಸ್ ಪಡೆಯುವಂತೆ ನಿರ್ಣಯ: ಮತದಾನದಿಂದ ದೂರ ಉಳಿದ ಭಾರತ
ರಷ್ಯಾದ ವಿರುದ್ಧ ರಕ್ಷಿಸಿಕೊಳ್ಳಲು ಮಿಲಿಟರಿ ನೆರವು ಅಗತ್ಯ:ಉಕ್ರೇನ್‌ಗೆ ತನ್ನನ್ನು ಮತ್ತು ಇಡೀ ಯುರೋಪ್ ಅನ್ನು ರಷ್ಯಾದ ವಿರುದ್ಧ ರಕ್ಷಿಸಿಕೊಳ್ಳುವುದಕ್ಕೆ ಮಿಲಿಟರಿ ನೆರವು ಅತ್ಯಂತ ಅವಶ್ಯಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಗುರುವಾರ, ಪೋಲೆಂಡ್ ಅಧ್ಯಕ್ಷರು ತಮ್ಮ ದೇಶವು ಉಕ್ರೇನ್‌ಗೆ ಸುಮಾರು ಒಂದು ಡಜನ್ ಮಿಗ್ 29 ಫೈಟರ್ ಜೆಟ್‌ಗಳನ್ನು ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ :ಅಮೆರಿಕದ ಜೊತೆಗಿನ ರಷ್ಯಾ ಅಣು ಒಪ್ಪಂದ ಅಮಾನತು: ಉಕ್ರೇನ್ ಮೇಲೆ ಪರಮಾಣು ಸಿಡಿತಲೆ ದಾಳಿ?
ಮುಂಬರುವ ದಿನಗಳಲ್ಲಿ ಪೋಲೆಂಡ್ ನಾಲ್ಕು ಸೋವಿಯತ್ ನಿರ್ಮಿತ ಯುದ್ಧವಿಮಾನಗಳನ್ನು ಉಕ್ರೇನ್‌ಗೆ ಹಸ್ತಾಂತರಿಸಲಿದೆ ಮತ್ತು ಸೇವೆಯ ಅಗತ್ಯವಿರುವ ಇತರ ವಿಮಾನಗಳನ್ನು ನಂತರ ಸರಬರಾಜು ಮಾಡಲಾಗುವುದು ಎಂದು ಅಧ್ಯಕ್ಷ ಆಂಡ್ರೆಜ್ ದುಡಾ ಗುರುವಾರ ಹೇಳಿದ್ದಾರೆ.