ಕೊಲಂಬೊ (ಶ್ರೀಲಂಕಾ) : ಸರ್ಕಾರಿ ವೆಚ್ಚದ ಮಿತಿಗಳ ಕುರಿತು ಹಣಕಾಸು ಇಲಾಖೆ ಹೊರಡಿಸಿರುವ ಸುತ್ತೋಲೆಗೆ ಬದ್ಧವಾಗಿರಬೇಕು ಎಂದು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಘೆ ಎಲ್ಲಾ ಸರ್ಕಾರಿ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ. ಈ ನಿಯಮವನ್ನು ಮೀರಿ ಸಂಸ್ಥೆಯು ಹೆಚ್ಚಿನ ವೆಚ್ಚ ಮಾಡಿದಲ್ಲಿ ಇದನ್ನು ಸಂಸ್ಥೆಯ ಮುಖ್ಯಸ್ಥರು ತಮ್ಮ ವೈಯಕ್ತಿಕ ಹಣದಿಂದ ಭರಿಸಬೇಕೆಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸೂಚನೆಯನ್ನು ಸಚಿವಾಲಯದ ಕಾರ್ಯದರ್ಶಿಗಳಿಗೆ, ಇಲಾಖೆಗಳ ಮುಖ್ಯಸ್ಥರುಗಳಿಗೆ, ಪ್ರಾಂತೀಯ ಕಾರ್ಯದರ್ಶಿಗಳಿಗೆ, ನಿಗಮದ ಅಧ್ಯಕ್ಷರುಗಳಿಗೆ, ಸಾಂಸ್ಥಿಕ ಮಂಡಳಿಗಳಿಗೆ ಮತ್ತು ಸರ್ಕಾರಿ ಸ್ವಾಮ್ಯದ ವ್ಯಾಪಾರ ಸಂಸ್ಥೆಗಳಿಗೆ ರವಾನಿಸಲಾಗಿದೆ ಎಂದು ಮಾಧ್ಯಮ ಘಟಕ ತಿಳಿಸಿದೆ.