ಕರ್ನಾಟಕ

karnataka

ETV Bharat / international

ಕ್ರಿಮಿಯಾದಲ್ಲಿ ಆರು ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದ ಗವರ್ನರ್ - ಡ್ರೋನ್‌

ರಷ್ಯಾದ ಒಕ್ಕೂಟದ ಕ್ರಿಮಿಯಾದಲ್ಲಿ ಆರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಆ ಪ್ರದೇಶದ ಗವರ್ನರ್ ಮಾಹಿತಿ ನೀಡಿದ್ದಾರೆ.

ಕ್ರೈಮಿಯಾದಲ್ಲಿ ಆರು ಡ್ರೋನ್‌ ಹೊಡೆದುರುಳಿಸಲಾಗಿದೆ ಎಂದ ಗವರ್ನರ್
Six drones shot down in Crimea, says Governor

By

Published : May 25, 2023, 6:37 PM IST

ಮಾಸ್ಕೋ (ರಷ್ಯಾ): ಕ್ರಿಮಿಯಾದ ವಿವಿಧ ಭಾಗಗಳಲ್ಲಿ ಆರು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಕ್ರಿಮಿಯಾ ಗವರ್ನರ್ ಸೆರ್ಗೆಯ್ ಆಕ್ಸಿಯೊನೊವ್ ಗುರುವಾರ ಹೇಳಿದ್ದಾರೆ. ಕಳೆದ ರಾತ್ರಿಯಲ್ಲಿ ಈ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಯಾವುದೇ ಪ್ರಾಣಿ ಹಾನಿ ಅಥವಾ ಗಾಯಗಳು ಆಗಿಲ್ಲ ಎಂದು ತಿಳಿಸಿದ್ದಾರೆ.

ಉಕ್ರೇನಿಯನ್ ಕ್ರಾಂತಿಯ ನಂತರ 2014ರಲ್ಲಿ ರಷ್ಯಾ ಆಕ್ರಮಿಸಿಕೊಳ್ಳುವ ಮೊದಲು ಕ್ರಿಮಿಯಾವನ್ನು ಉಕ್ರೇನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಯಿತು. ಆದರೆ, ಬಳಿಕ ಕ್ರಿಮಿಯಾದಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಯಿತು. ಇದರಲ್ಲಿ ಹೆಚ್ಚಿನ ಜನರು ರಷ್ಯಾದ ಒಕ್ಕೂಟದ ಭಾಗವಾಗಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಕ್ರಿಮಿಯಾ ತನ್ನ ಗಡಿಯ ಮೂರು ಬದಿಗಳಲ್ಲಿ ಸಮುದ್ರದಿಂದ ಸುತ್ತುವರಿದ ಆಯಕಟ್ಟಿನ ಸ್ಥಳದಲ್ಲಿದೆ. ಇದು ಪ್ರಪಂಚದ ಉಳಿದ ಭಾಗಗಳೊಂದಿಗೆ ಸರಿಯಾದ ಸಂಪರ್ಕ ಹೊಂದಲು ಅನುವು ಮಾಡಿಕೊಡುತ್ತದೆ.

ರಷ್ಯಾದ ಮುಖ್ಯ ಭೂಭಾಗವು ತಮ್ಮ ಖಂಡದ ನೈಋತ್ಯ ಭಾಗದಲ್ಲಿ ಸಮುದ್ರಕ್ಕೆ ಪ್ರವೇಶ ಹೊಂದಿಲ್ಲ. ಕ್ರಿಮಿಯಾದ ಮೇಲೆ ಪ್ರಾಬಲ್ಯ ಸಾಧಿಸುವುದರಿಂದ ರಷ್ಯಾ ಸರ್ಕಾರವು ವರ್ಷವಿಡೀ ಮೆಡಿಟರೇನಿಯನ್ ಸಮುದ್ರಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿದೆ. 2022ರ ಅಕ್ಟೋಬರ್​ನಲ್ಲಿ ನಡೆದ ಸ್ಫೋಟದಿಂದ ನಲುಗಿದ ಕೆರ್ಚ್ ಜಲಸಂಧಿಯ ಮೇಲೆ ಕ್ರೈಮಿಯಾವನ್ನು ರಷ್ಯಾಕ್ಕೆ ಸಂಪರ್ಕಿಸುವ ಸೇತುವೆ ತೆರೆಯಲಾಗಿದೆ. 2022ರ ಫೆಬ್ರವರಿಯಲ್ಲಿ ಮಾಸ್ಕೋದ ಆಕ್ರಮಣವು ಪ್ರಾರಂಭವಾಗಿತ್ತು.

ಇದನ್ನೂ ಓದಿ:ಜಿ-7 ಶೃಂಗಸಭೆ.. ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ

ಮತ್ತೊಂದೆಡೆ, ಬುಧವಾರ ಬೆಲ್ಗೊರೊಡ್‌ ಪ್ರದೇಶದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೊವ್, ಬೆಲ್ಗ್ರೇಡ್​ ನಲ್ಲಿ ರಾತ್ರಿಯಿಡೀ ಹಲವಾರು ಡ್ರೋನ್‌ಗಳಿಂದ ಟಾರ್ಗೆಟ್​ ಮಾಡಲಾಗಿತ್ತು. ಈ ಪ್ರದೇಶವು ನಿರಂತರ ಫಿರಂಗಿ ಮತ್ತು ಗುಂಡಿನ ದಾಳಿಗೆ ಒಳಗಾಗಿದ್ದರಿಂದ 13 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದರು. ಏತನ್ಮಧ್ಯೆ, ಕೈವ್ ಸೇರಿದಂತೆ ಅನೇಕ ನಗರಗಳಲ್ಲಿ ರಾತ್ರೋರಾತ್ರಿ ರಷ್ಯಾ ಪ್ರಾರಂಭಿಸಿದ ಡ್ರೋನ್ ದಾಳಿಯ ಹೊಸ ಅಲೆಯು ತನ್ನ ಟಾರ್ಗೆಟ್​ಗಳನ್ನು ತಲುಪಲು ವಿಫಲವಾಗಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.

36 ಡ್ರೋನ್‌ಗಳ ಹಿಮ್ಮೆಟ್ಟಿಸಿದ ಉಕ್ರೇನ್: ಉಕ್ರೇನ್‌ನ ವಾಯು ರಕ್ಷಣಾವು ಕೀವ್​​ ಸೇರಿದಂತೆ ಅನೇಕ ನಗರಗಳಲ್ಲಿ ರಾತ್ರಿಯಿಡೀ ರಷ್ಯಾ ಉಡಾವಣೆ ಮಾಡಿದ ಎಲ್ಲ 36 ಡ್ರೋನ್‌ಗಳನ್ನು ಹಿಮ್ಮೆಟ್ಟಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಶತ್ರುಗಳು ಉಕ್ರೇನ್ ಅನ್ನು ಭಯಭೀತಗೊಳಿಸುವುದನ್ನು ಮುಂದುವರೆಸಿದರು. ಇದಕ್ಕಾಗಿ ಡ್ರೋನ್​ಗಳಿಂದ ದಾಳಿ ಯತ್ನಿಸಿದರು. ಆದರೆ, ಅವುಗಳಲ್ಲಿ ಯಾವುದೂ ಗುರಿಯನ್ನು ತಲುಪಲಿಲ್ಲ" ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹಿಂದೆ ರಷ್ಯಾದ ಪಡೆಗಳು ಸುಮಿ ಒಬ್ಲಾಸ್ಟ್‌ನಲ್ಲಿ ಐದು ಸಮುದಾಯಗಳ ಮೇಲೆ ಶೆಲ್ ದಾಳಿ ನಡೆಸಿದ್ದವು. ವಿವಿಧ ರೀತಿಯ ಫಿರಂಗಿ ಶಸ್ತ್ರಾಸ್ತ್ರಗಳಿಂದ 84ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿತ್ತು ಎಂದು ಉಕ್ರೇನಿಯನ್ ಸೇನೆ ಹೇಳಿತ್ತು. ಇದೇ ವೇಳೆ ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್​ಎಸ್​ಬಿ) ಇಬ್ಬರು ಉಕ್ರೇನಿಯನ್ ವಿಧ್ವಂಸಕರನ್ನು ಬಂಧಿಸಿದೆ ಎಂದು ವರದಿಯಾಗಿದೆ. ರಷ್ಯಾದಲ್ಲಿ ಪರಮಾಣು ವಿದ್ಯುತ್ ಸ್ಥಾವರಗಳ ವಿದ್ಯುತ್ ಕಂಬಗಳನ್ನು ಸ್ಫೋಟಿಸಲು ಈ ಜೋಡಿ ಸಂಚು ರೂಪಿಸಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ:ಟ್ರಕ್ ಡಿಕ್ಕಿ ಪ್ರಕರಣ: ಅಮೆರಿಕ ಅಧ್ಯಕ್ಷರನ್ನು ಕೊಲ್ಲುವ ಉದ್ದೇಶವಿತ್ತು ಎಂದ ಆರೋಪಿ!

ABOUT THE AUTHOR

...view details