ಸಿಂಗಾಪುರ: ಬಾರ್‌ಗೆ ಪ್ರವೇಶಿಸಲು ಕೋವಿಡ್ ಲಸಿಕೆ ಸ್ಥಿತಿ ಬಗ್ಗೆ ಸುಳ್ಳು ಮಾಹಿತಿ ಕೊಟ್ಟ ಪ್ರಕರಣದಲ್ಲಿ ಇಬ್ಬರು ಭಾರತೀಯರನ್ನು ಇಲ್ಲಿನ ನ್ಯಾಯಾಲಯವು ಐದು ದಿನಗಳ ಜೈಲಿಗೆ ಕಳುಹಿಸಿದೆ. ಉಥೇಯಕುಮಾರ್ ನಲ್ಲತಂಬಿ ಮತ್ತು ಕಿರಣ್ ಸಿಂಗ್ ರುಘ್ಬೀರ್ ಸಿಂಗ್ ಶಿಕ್ಷೆಗೊಳಗಾದವರು.
ಕಿರಣ್ ಸಿಂಗ್ ರುಘ್ಬೀರ್ ಮತ್ತು ಆತನ ಸ್ನೇಹಿತೆ ಉಥೇಯಕುಮಾರ್ ನಲ್ಲತಂಬಿಯನ್ನು ಕಳೆದೊಂದು ವರ್ಷದ ಹಿಂದೆ ಪರಿಚಯ ಮಾಡಿಕೊಂಡಿದ್ದರು. ಈ ಮೂವರು ಬಿಕಿನಿ ಬಾರ್‌ಗೆ ತೆರಳಲು ಯೋಜಿಸಿದ್ದಾರೆ. ಆದರೆ, ಉಥೇಯಕುಮಾರ್ ನಲ್ಲತಂಬಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಬಿಕಿನಿ ಬಾರ್‌ಗೆ ಪ್ರವೇಶ ಸಿಕ್ಕಿಲ್ಲ. ಅಲ್ಲಿಂದ ಹೊರ ಬಂದ ನಂತರ ಕೋಸ್ಟೆಸ್ ಬಾರ್ ಪ್ರವೇಶಿಸಲು ಒಂದು ಪ್ಲ್ಯಾನ್ ಮಾಡಿದ್ದಾರೆ.