ಕರ್ನಾಟಕ

karnataka

ಭ್ರಷ್ಟಾಚಾರ ಪ್ರಕರಣ: ಭಾರತ ಮೂಲದ ಸಿಂಗಾಪುರ ಸಚಿವ ಈಶ್ವರನ್ ಬಂಧನ.. ಜಾಮೀನಿನ ಮೇಲೆ ಬಿಡುಗಡೆ: ಸಿಪಿಐಬಿ

By

Published : Jul 15, 2023, 11:22 AM IST

ಭ್ರಷ್ಟಾಚಾರ ಆರೋಪ ಹಿನ್ನೆಲೆ ಭಾರತೀಯ ಮೂಲದ ಸಿಂಗಾಪುರ ಸಾರಿಗೆ ಸಚಿವ ಎಸ್​ ಈಶ್ವರನ್ ಮತ್ತು ಉದ್ಯಮಿ ಓಗ್​​ ಬೆಂಗ್​ ಸೆಂಗ್​ ಅವರನ್ನು ಬಂಧಿಸಲಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

singapore-minister-iswaran-tycoon-ong-arrested-released-on-bail-cpib
ಸಿಂಗಾಪುರ ಸಚಿವ ಈಶ್ವರನ್, ಉದ್ಯಮಿ ಓಂಗ್ ಬಂಧನ... ಜಾಮೀನಿನ ಮೇಲೆ ಬಿಡುಗಡೆ: ಸಿಪಿಐಬಿ

ಸಿಂಗಾಪುರ :ಭ್ರಷ್ಟಾಚಾರ ಆರೋಪ ಹೊತ್ತಿರುವ ಭಾರತೀಯ ಮೂಲದ ಸಿಂಗಾಪುರ ಸಾರಿಗೆ ಸಚಿವ ಎಸ್​ ಈಶ್ವರನ್​ ಅವರನ್ನು ಮಂಗಳವಾರ ಬಂಧಿಸಲಾಗಿತ್ತು. ಇದೀಗ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಅವರ ಪಾಸ್​ಪೋರ್ಟ್​ನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐಬಿ (ಭ್ರಷ್ಟಾಚಾರ ತನಿಖಾ ಸಂಸ್ಥೆ) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಚಿವ ಈಶ್ವರನ್​ ಬಂಧನದ ದಿನವೇ ಹೋಟೆಲ್​ ಪ್ರಾಪರ್ಟೀಸ್​ ಲಿಮಿಟೆಡ್​ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಓಂಗ್​ ಬೆಂಗ್​ ಸೆಂಗ್ ಅವರನ್ನು ಬಂಧಿಸಲಾಗಿದೆ. ಅವರನ್ನೂ ಕೂಡ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಿಪಿಐಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೂ ಮುನ್ನ ಸಚಿವ ಈಶ್ವರನ್​ ವಿರುದ್ಧ ಸಿಂಗಾಪುರ​ ಪ್ರಧಾನಿ ಲೀ ಸಿಯೆನ್​ ಲೂಂಗ್ ಅವರು ತನಿಖೆಗೆ ಆದೇಶಿಸಿದ್ದರು. ತನಿಖೆ ಪೂರ್ಣಗೊಳ್ಳುವವರೆಗೆ ಸಚಿವ ಸ್ಥಾನ ತೊರೆಯುವಂತೆ ಸೂಚಿಸಿದ್ದರು. ಅಲ್ಲದೆ ಇವರ ವಿರುದ್ಧ ಸಿಪಿಐಬಿ ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ. ಪ್ರಕರಣದ ತನಿಖೆ ಮುಗಿಯುವವರೆಗೆ ಹಿರಿಯ ಸಚಿವ ಚೀ ಹಾಂಗ್​ ಟೇಟ್​ ಅವರು ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದ್ದರು.

ಈ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ನೀಡದ ಲೀ, ಸಿಪಿಐಬಿ ನಿರ್ದೇಶಕರು ಸಚಿವ ಈಶ್ವರನ್​ ವಿರುದ್ಧ ಔಪಚಾರಿಕ ತನಿಖೆ ನಡೆಸಲು ಒಪ್ಪಿಗೆ ನೀಡುವಂತೆ ಕೇಳಿದ್ದರು. ಈ ಸಂಬಂಧ ತನಿಖೆ ನಡೆಸಲು ಒಪ್ಪಿಗೆ ನೀಡಿದ್ದೇನೆ ಎಂದು ಹೇಳಿದ್ದರು. ಸಚಿವರ ವಿರುದ್ಧ ತನಿಖೆ ನಡೆಸಲು ಆ್ಯಂಟಿ ಗ್ರಾಫ್ಟ್​ ಏಜೆನ್ಸಿಯನ್ನು ಪ್ರಾರಂಭಿಸಲಾಗಿದ್ದು, ಇದು ಪ್ರಧಾನಿ ಕಾರ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಡೆನಿಸ್​ ಟ್ಯಾಂಗ್​ ಅವರನ್ನು ಗ್ರಾಫ್ಟ್​​ ಏಜೆನ್ಸಿಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.

ಇಬ್ಬರಿಗೂ ಷರತ್ತುಬದ್ಧ ಜಮೀನು ನೀಡಲಾಗಿದ್ದು, ಇಬ್ಬರ ಪಾಸ್​​ಪೋರ್ಟ್​ಗಳನ್ನು ವಶಕ್ಕೆ ಪಡೆಯಲಾಗಿದೆ. ಜಾಮೀನಿನ ಮೇಲೆ ಹೊರಗಿದ್ದರೂ ವಿದೇಶಕ್ಕೆ ತೆರಳಲು ಸಿಪಿಐಬಿ ಬಳಿ ವಿನಂತಿ ಮಾಡಬಹುದು. ಓಂಗ್ ಅವರ ವಿದೇಶಿ ಪ್ರಯಾಣಕ್ಕೆ ಸಿಪಿಐಬಿ ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ. ಈ ಸಂಬಂಧ ಓಂಗ್ ಅವರ ಜಾಮೀನಿನ ಪ್ರಮಾಣವನ್ನು SGD 100,000ಕ್ಕೆ ಹೆಚ್ಚಿಸಲಾಗಿದೆ. ಓಂಗ್ ವಿದೇಶದಿಂದ ಹಿಂತಿರುಗಿದ ನಂತರ CPIBಗೆ ವರದಿ ಮಾಡಬೇಕಾಗುತ್ತದೆ ಮತ್ತು ಪಾಸ್‌ಪೋರ್ಟ್ಅನ್ನು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.

ಸಚಿವ ಈಶ್ವರನ್ ಅವರು ಆಡಳಿತಾರೂಢ ಪೀಪಲ್ಸ್ ಆ್ಯಕ್ಷನ್ ಪಾರ್ಟಿಯ ಹಿರಿಯ ಸದಸ್ಯರಾಗಿದ್ದಾರೆ. 1997ರಲ್ಲಿ ಮೊದಲ ಬಾರಿಗೆ ವೆಸ್ಟ್ ಕೋಸ್ಟ್ ಜಿಆರ್‌ಸಿಯ ಸಂಸದರಾಗಿ ಆಯ್ಕೆಯಾಗುವ ಮೂಲಕ ಈಶ್ವರನ್ ಅವರ ರಾಜಕೀಯ ಜೀವನ ಪ್ರಾರಂಭವಾಯಿತು. 2006ರಲ್ಲಿ ಕ್ಯಾಬಿನೆಟ್​ಗೆ ಆಯ್ಕೆಯಾದರು. ಇವರು ಹಲವು ಹುದ್ದೆಯನ್ನು ನಿರ್ವಹಿಸಿದ್ದು, ಸಂಸತ್ತಿನ ಉಪ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಮೇ 2021ರಿಂದ ಎಸ್​ ಈಶ್ವರನ್​ ಅವರು ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೇ 2018ರಲ್ಲಿ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದಲ್ಲಿ (MTI) ವ್ಯಾಪಾರ ಸಂಬಂಧಗಳ ಉಸ್ತುವಾರಿ ಸಚಿವರಾಗಿದ್ದರು.

ಸಾರಿಗೆ ಸಚಿವ ಎಸ್ ಈಶ್ವರನ್ ಮತ್ತು ಓಂಗ್ ಬೆಂಗ್ ಸೆಂಗ್ ಅವರು ಎಫ್ 1 ಸಿಂಗಾಪುರ್ ಗ್ರ್ಯಾಂಡ್ ಪ್ರಿಕ್ಸ್‌ನ್ನು ಆಯೋಜಿಸುವ ಹಕ್ಕುಗಳನ್ನು ಹೊಂದಿದ್ದಾರೆ. ಕಳೆದ ವರ್ಷ ಎಫ್ 1 ಸಿಂಗಾಪುರ್ ಗ್ರ್ಯಾಂಡ್ ಪ್ರಿಕ್ಸ್‌ಗೆ ಇವರು ಸಹಿ ಹಾಕಿದ್ದರು. ಫಾರ್ಮುಲಾ 1 (F1) ಸಿಂಗಾಪುರ್ ಏರ್‌ಲೈನ್ಸ್ ಸಿಂಗಾಪುರ್ ಗ್ರ್ಯಾಂಡ್ ಪ್ರಿಕ್ಸ್ 2023 ಸೆಪ್ಟೆಂಬರ್ 15 -17ಕ್ಕೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ :IndiGo flight: ಇಂಡಿಗೋ ವಿಮಾನದ ತುರ್ತು ನಿರ್ಗಮನದ ಕವರ್​ ತೆರೆದ ವ್ಯಕ್ತಿ ವಿರುದ್ಧ ಎಫ್​ಐಆರ್

ABOUT THE AUTHOR

...view details