ಕರ್ನಾಟಕ

karnataka

ETV Bharat / international

ರಕ್ಷಣಾ ವ್ಯವಸ್ಥೆ ಭೇದಿಸಿ 600 ಕಿಮೀ ದೂರದ ರಷ್ಯಾ ವಾಯುನೆಲೆ ಬಳಿ ಉಕ್ರೇನ್​ ಡ್ರೋನ್​ ಬ್ಲಾಸ್ಟ್​

10 ತಿಂಗಳಿಂದ ಉಕ್ರೇನ್​ ರಷ್ಯಾ ಯುದ್ಧ - ಕ್ರಿಸ್​ಮಸ್​ ಹಬ್ಬದ ಸಂಭ್ರಮದಲ್ಲೂ ಬಾಂಬ್​ ಸದ್ದು - ರಷ್ಯಾ ಏರ್​ಬೇಸ್​ ಬಳಿ ಡ್ರೋನ್​ ಬ್ಲಾಸ್ಟ್​

shot-down-ukrainian-drone-near-russia-air-base
ರಷ್ಯಾ ವಾಯುನೆಲೆ ಬಳಿ ಉಕ್ರೇನ್​ ಡ್ರೋನ್​ ಬ್ಲಾಸ್ಟ್​

By

Published : Dec 27, 2022, 7:08 AM IST

ಕೀವ್​:ನ್ಯಾಟೋ ಪಡೆಗೆ ಸೇರುವ ಉಕ್ರೇನ್​ ನಿರ್ಧಾರದ ವಿರುದ್ಧ ರಷ್ಯಾ ನಡೆಸುತ್ತಿರುವ ಭೀಕರ ಯುದ್ಧ 10 ತಿಂಗಳು ಕಳೆಯುತ್ತಿದೆ. ಮಿಸೈಲ್​, ಬಾಂಬ್​ ಸೇರಿದಂತೆ ಹಲವಾರು ಮಾರಕ ರಷ್ಯಾದ ಶಸ್ತ್ರಾಸ್ತ್ರಗಳು ಉಕ್ರೇನ್​ ಅನ್ನು ಛಿದ್ರ ಮಾಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳ ನೆರವಿನಿಂದ ಉಕ್ರೇನ್​ ಕೂಡ ರಷ್ಯಾಗೆ ಟಕ್ಕರ್​ ನೀಡುತ್ತಿದೆ. ಕ್ರಿಸ್​ಮಸ್​ ಹಬ್ಬದ ಸಂಭ್ರಮ ನಡುವೆಯೇ ಉಕ್ರೇನ್​ನ ಶಸ್ತ್ರಸಜ್ಜಿತ ಡ್ರೋನ್​ ಅನ್ನು ರಷ್ಯಾ ಪಡೆ ಹೊಡೆದು ಹಾಕಿದೆ ಎಂದು ಅಲ್ಲಿನ ಸೇನೆ ತಿಳಿಸಿದೆ.

ವಾಯುನೆಲೆಯ ಸಮೀಪ ಹಾರಾಡುತ್ತಿದ್ದ ಉಕ್ರೇನಿಯನ್​ ಡ್ರೋನ್​ ಅನ್ನು ನಮ್ಮ ಸೇನಾ ಪಡೆ ಛಿದ್ರ ಮಾಡಿದೆ. ಇದು ಎರಡನೇ ಬಾರಿಗೆ ನಡೆದ ದಾಳಿಯಾಗಿದೆ. ಇನ್ನೊಂದೆಡೆ ಕ್ಷಿಪಣಿ ದಾಳಿಯೂ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಯಾವುದೇ ವಿಮಾನಗಳಿಗೆ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದು ರಷ್ಯಾದ ವಾಯು ರಕ್ಷಣಾ ವ್ಯವಸ್ಥೆಯ ದೌರ್ಬಲ್ಯ ಎಂಬ ಟೀಕೆ ಕೂಡ ವ್ಯಕ್ತವಾಗಿದೆ.

ಇದಲ್ಲದೇ, ಉಕ್ರೇನ್​ನ Tu -95 ಮತ್ತು Tu-160 ಕ್ಷಿಪಣಿ ದಾಳಿಯಲ್ಲಿ ಮೂವರು ರಷ್ಯನ್​ ಸೈನಿಕರು ಅಸುನೀಗಿದ್ದಾರೆ. ಎಂಗೆಲ್ಸ್​ ವಾಯುನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಹೇಳಿದೆ.

ರಷ್ಯಾದ ವಾಯುನೆಲೆಯ ಬಳಿ ಹೊಡೆದುರುಳಿಸಲಾದ ಡ್ರೋನ್​ ಉಕ್ರೇನ್​ನಿಂದ ಹಾರಿಬಂದಿದ್ದೇ ಎಂಬ ಬಗ್ಗೆ ಶಂಕೆ ಇದೆ. ಎಂಗೆಲ್ಸ್​ ವಾಯುನೆಲೆ ಉಕ್ರೇನ್​ ಗಡಿಯಿಂದ 600 ಕಿಮೀ ದೂರದಲ್ಲಿದ್ದು, ಅಷ್ಟು ದೂರದಿಂದ ಡ್ರೋನ್​ ಹಾರಿಬಂದಲ್ಲಿ ಇದು ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯ ಭಾರೀ ವೈಫಲ್ಯವಾಗಲಿದೆ. ಒಂದು ವೇಳೆ ಇದು ರಷ್ಯಾದ ಪ್ರದೇಶದಿಂದಲೇ ನಡೆಸಿದ ದಾಳಿಯ ಸಂಚಾಗಿದೆ ಎಂಬ ಅನುಮಾನವೂ ಇದೆ.

ಉಕ್ರೇನ್​ ನಿರಾಕರಣೆ:ಇನ್ನು ಡ್ರೋನ್​ ಹೊಡೆದು ಹಾಕಿದ್ದನ್ನು ಉಕ್ರೇನ್​ ನಿರಾಕರಿಸಿದೆ. ರಷ್ಯಾ ವಾಯುನೆಲೆಯಲ್ಲಿ ಉಡಾಯಿಸಲಾದ ಡ್ರೋನ್​ ಸ್ಫೋಟವಾಗಿದೆ. ಅದನ್ನು ಹೊಡೆದುರುಳಿಸಲಾಗಿದೆ ಎಂಬ ಹೇಳಿಕೆ ರಷ್ಯಾ ಪ್ರಾಯೋಜಕತ್ವದ ಸುಳ್ಳಾಗಿದೆ ಎಂದು ಉಕ್ರೇನಿಯನ್ ವಾಯುಪಡೆಯ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರಷ್ಯಾ ಭೂಪ್ರದೇಶಗಳನ್ನು ದಾಟಿ ನಮ್ಮ ಶಸ್ತ್ರಾಸ್ತ್ರಗಳು ದಾಳಿ ಮಾಡಿವೆ. ಇದು ಆ ದೇಶದ ಸೈನಿಕರ ಜೀವವನ್ನೂ ಬಲಿ ಪಡೆದಿವೆ. ಈ ದಾಳಿಗಳು ಅದರ ವಾಯು ರಕ್ಷಣಾ ವ್ಯವಸ್ಥೆಯ ವೈಫಲ್ಯವನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.

ಇನ್ನೊಂದೆಡೆ ಬ್ರಿಯಾನ್ಸ್ಕ್ ಪ್ರದೇಶದಲ್ಲಿ ಉಕ್ರೇನ್​ನಿಂದ ಅಕ್ರಮವಾಗಿ ಗಡಿ ಪ್ರವೇಶಿಸಿ ಸ್ಫೋಟಕಗಳನ್ನು ಕದ್ದೊಯ್ಯುತ್ತಿದ್ದ ನಾಲ್ವರು ಉಕ್ರೇನಿಯನ್ನರನ್ನು ರಷ್ಯನ್​ ಭದ್ರತಾ ಪಡೆಗಳು ಕೊಂದು ಹಾಕಿವೆ ಎಂದು ಅಲ್ಲಿನ ಮಾಧ್ಯಮ ವರದಿ ಭಿತ್ತರಿಸಿದೆ.

ಓದಿ:ಪೂರ್ಣ ದೇಹದ ಸೆಕ್ಸ್‌ ಡಾಲ್‌ ಆಮದು ನಿಷೇಧ ತೆಗೆದುಹಾಕಿದ ದಕ್ಷಿಣ ಕೊರಿಯಾ

ABOUT THE AUTHOR

...view details