ಕರ್ನಾಟಕ

karnataka

ETV Bharat / international

ಡೆನ್ಮಾರ್ಕ್​ ಶಾಪಿಂಗ್ ಮಾಲ್​ನಲ್ಲಿ ಗುಂಡಿನ ದಾಳಿ: ಮೂವರು ಸಾವು, ಹಲವರಿಗೆ ಗಾಯ - Shooting attack in Denmark shopping mall

ಡೆನ್ಮಾರ್ಕ್​ ರಾಜಧಾನಿ ಕೋಪನ್​ಹೇಗನ್​​ನ ಶಾಪಿಂಗ್​ ಮಾಲ್​ನಲ್ಲಿ 22 ವರ್ಷದ ಯುವಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಮೂವರು ಸಾವನ್ನಪ್ಪಿದ ಬಗ್ಗೆ ಮಾಹಿತಿ ಸಿಕ್ಕಿದೆ.

ಡೆನ್ಮಾರ್ಕ್​ ಶಾಪಿಂಗ್ ಮಾಲ್​ನಲ್ಲಿ ಗುಂಡಿನ ದಾಳಿ
ಡೆನ್ಮಾರ್ಕ್​ ಶಾಪಿಂಗ್ ಮಾಲ್​ನಲ್ಲಿ ಗುಂಡಿನ ದಾಳಿ

By

Published : Jul 4, 2022, 6:42 AM IST

ಕೋಪನ್​ಹೇಗನ್​:ರಾಜಧಾನಿಯ ಹೊರವಲಯದಲ್ಲಿರುವ ಶಾಪಿಂಗ್​ ಮಾಲ್​ನಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಗುಂಡಿನ ದಾಳಿ ನಡೆಸಿದ 22 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ. ಇದು ಭಯೋತ್ಪಾದಕ ದಾಳಿಯಾಗಿರಬಹುದು. ಇದರಲ್ಲಿ ಇನ್ನಷ್ಟು ಜನರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಂದೂಕುಧಾರಿ ವ್ಯಕ್ತಿ ಏಕಾಏಕಿ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಜನರು ಮಾಲ್​ನಿಂದ ಹೊರ ಓಡುತ್ತಿರುವ ದೃಶ್ಯಗಳು ಭಯಾನಕವಾಗಿದ್ದವು. ಆರೋಪಿ ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾಲ್​ನಲ್ಲಿ ನಡೆದ ಗುಂಡಿನ ದಾಳಿ ಭೀಕರವಾಗಿದೆ. ಇದರಲ್ಲಿ ಸಾವನ್ನಪ್ಪಿದವರ ನಿಖರ ಮಾಹಿತಿ ತಿಳಿದಿಲ್ಲ. ಹಲವರು ಪ್ರಾಣ ತೆತ್ತಿರಬಹುದು. ತನಿಖೆ ನಡೆಸಲಾಗುತ್ತಿದೆ. ಇದೊಂದು ಭಯಾನಕ ಕೃತ್ಯ ಎಂದು ಕೋಪನ್​ಹೇಗನ್​​ ಮೇಯರ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಬಂಧಿತರಾದ ಎಲ್‌ಇಟಿ ಭಯೋತ್ಪಾದಕರಲ್ಲಿ ಓರ್ವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥನಾಗಿದ್ದ!

For All Latest Updates

ABOUT THE AUTHOR

...view details