ಬರ್ಮಿಂಗ್‌ಹ್ಯಾಮ್ (ಅಮೆರಿಕ):ಅಲಬಾಮದ ಬರ್ಮಿಂಗ್‌ಹ್ಯಾಮ್‌ನಲ್ಲಿ ಕಳವು ಮಾಡಲಾಗಿದೆ ಎಂದು ಹೇಳಲಾದ ಕಾರೊಂದಕ್ಕೆ ಸಂಬಂಧಿಸಿದ ಘರ್ಷಣೆ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಬರ್ಮಿಂಗ್‌ಹ್ಯಾಮ್‌ನ ದಕ್ಷಿಣ ಭಾಗದಲ್ಲಿ ಶುಕ್ರವಾರ ಸಂಜೆ 4.30ರ ಸುಮಾರಿಗೆ ಶೂಟ್‌ಔಟ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರ್ಮಿಂಗ್‌ಹ್ಯಾಮ್‌ನಲ್ಲಿ ಗುಂಡಿನ ದಾಳಿ: ಇಬ್ಬರು ಆಸ್ಪತ್ರೆಗೆ ದಾಖಲು - ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಶೂಟ್‌ಔಟ್
ಶುಕ್ರವಾರ ರಾತ್ರಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಶೂಟ್‌ಔಟ್ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಘಟನೆಯು 20 ನೇ ಸ್ಟ್ರೀಟ್ ಎನ್ಸ್ಲೆ ಎಕ್ಸಿಟ್ ಬಳಿ ನಡೆದಿದೆ ಎಂದು ಬರ್ಮಿಂಗ್‌ಹ್ಯಾಮ್ ಪೊಲೀಸರು ಮಾಹಿತಿ ನೀಡಿದ್ದಾರೆ.
By PTI
Published : Nov 11, 2023, 10:37 AM IST
20 ನೇ ಸ್ಟ್ರೀಟ್ ಎನ್ಸ್ಲೆನಿರ್ಗಮನದ ಬಳಿ ಗುಂಡಿನ ದಾಳಿ ಜರುಗಿದಾಗ ತುರ್ತು ಸಿಬ್ಬಂದಿ ಸ್ಥಳದಲ್ಲಿದ್ದರು ಎಂದು ಬರ್ಮಿಂಗ್‌ಹ್ಯಾಮ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ ಅ್ಯಪ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಘಟನೆಯಿಂದ ಮೃತಪಟ್ಟವರ ಸಂಖ್ಯೆ, ಗಾಯಾಳುಗಳ ಸ್ಥಿತಿಗತಿ ಮತ್ತು ಗುಂಡಿನ ದಾಳಿಗೆ ಕಾರಣವೇನು ಎಂಬುದರ ಕುರಿತು ಯಾವುದೇ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಬರ್ಮಿಂಗ್‌ಹ್ಯಾಮ್ ಅಗ್ನಿಶಾಮಕ ಅಧಿಕಾರಿಗಳು ಕನಿಷ್ಠ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಹೇಳಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ರಸ್ತೆಮಾರ್ಗದ ಎಲ್ಲಾ ದಕ್ಷಿಣದ ಪಥಗಳನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಜಮೀನು ವಿವಾದ : ಅಣ್ಣನ ಮಗನನ್ನೇ ಗುಂಡಿಕ್ಕಿ ಹತ್ಯೆ ಮಾಡಿದ ರೌಡಿಶೀಟರ್ ಸೀಮೆಎಣ್ಣೆ ಕುಮಾರ್