ವಾಷಿಂಗ್ಟನ್ ಡಿಸಿ(ಅಮೆರಿಕ):ಅಮೆರಿಕದ ಬರ್ಲಿಂಗ್ಟನ್‌ನಲ್ಲಿ ಪ್ಯಾಲೆಸ್ಟೈನ್ ಮೂಲದ ಮೂವರು ಯುವಕರ ಮೇಲೆ ಗುಂಡಿನ ದಾಳಿ ನಡೆದಿದೆ. ಇದು ದ್ವೇಷದ ಕೃತ್ಯವಾಗಿರಬಹುದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಮಾಧ್ಯಮಗಳ ವರದಿ ಪ್ರಕಾರ, ಶನಿವಾರ ಸಂಜೆ ಬರ್ಲಿಂಗ್‌ಟನ್ ಸಿಟಿಯ ವರ್ಮೊಂಟ್‌ನಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳು ಬರ್ಲಿಂಗ್ಟನ್‌ನಲ್ಲಿ ಸಂಬಂಧಿಕರನ್ನು ಭೇಟಿಯಾದ ನಂತರ ಪ್ರಾಸ್ಪೆಕ್ಟ್ ಸ್ಟ್ರೀಟ್‌ನಲ್ಲಿ ತಿರುಗಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ವರ್ಮೊಂಟ್ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇಬ್ಬರ ಸ್ಥಿತಿ ಸ್ಥಿರವಾಗಿದ್ದರೆ, ಒಬ್ಬರ ಸ್ಥಿತಿ ಗಂಭೀರವಾಗಿದೆ. ದಾಳಿಕೋರನೊಬ್ಬ ಏಕಾಏಕಿ ನಾಲ್ಕು ಗುಂಡುಗಳನ್ನು ಹಾರಿಸಿ ಪರಾರಿಯಾಗಿದ್ದಾನೆ. ಇಬ್ಬರು ವಿದ್ಯಾರ್ಥಿಗಳು ಕೆಫಿಯೆಹ್ (ಸಾಂಪ್ರದಾಯಿಕ ಪ್ಯಾಲೆಸ್ಟೈನಿಯನ್ ಸ್ಕಾರ್ಫ್) ಧರಿಸಿದ್ದರು.
ಬರ್ಲಿಂಗ್‌ಟನ್ ಪೊಲೀಸರ ಪ್ರಕಾರ, ತನಿಖೆಯ ವೇಳೆ ಘಟನಾ ಸ್ಥಳದಲ್ಲಿ ಲಭಿಸಿದ ಪುರಾವೆಗಳನ್ನು ಪಡೆಯಲಾಗಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಲು ಸಿದ್ಧ ಎಂದು ಎಫ್‌ಬಿಐ ಭಾನುವಾರ ತಿಳಿಸಿದೆ. ಶೂಟರ್‌ನನ್ನು ಗುರುತಿಸಲಾಗಿಲ್ಲ ಅಥವಾ ಸೆರೆಹಿಡಿಯಲಾಗಿಲ್ಲ. ತನಿಖೆಯ ಆರಂಭಿಕ ಹಂತದಲ್ಲಿದೆ