ಸಾವೊ ಪಾಲೊ (ಬ್ರೆಜಿಲ್):ದಕ್ಷಿಣ ಬ್ರೆಜಿಲ್ ಭೀಕರ ಚಂಡಮಾರುತಕ್ಕೆ ತತ್ತರಿಸಿ ಹೋಗಿದೆ. ಹಲವಾರು ನಗರಗಳಲ್ಲಿ ಪ್ರವಾಹ ಉಂಟಾಗಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಸುಮಾರು 60 ನಗರಗಳು ಚಂಡಮಾರುತಕ್ಕೆ ತುತ್ತಾಗಿವೆ. ಇದನ್ನು ಉಷ್ಣವಲಯದ (extratropical) ಸೈಕ್ಲೋನ್ ಎಂದು ಕರೆಯಲಾಗುತ್ತಿದೆ.
ಮ್ಯೂಕಮ್‌ನಲ್ಲಿ ಸುಮಾರು 50,000 ನಿವಾಸಿಗಳು ನೆಲೆಸಿದ್ದಾರೆ. ಮ್ಯೂಕಮ್ ನಗರದ ಒಂದೇ ಕುಟುಂಬದ 15 ಜನರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿಯಿಂದ 1,650 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಲೈಟ್ ಹೇಳಿದರು. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ದಡದಲ್ಲಿರುವ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇಲ್ಲಿನ ಮನೆಯ ಛಾವಣಿ ಮೇಲೆ ಹತ್ತಿ ಕುಳಿತ ಕುಟುಂಬಸ್ಥರು ಸಹಾಯಕ್ಕಾಗಿ ಮನವಿ ಮಾಡುವುದನ್ನು ಮಾಧ್ಯಮಗಳಲ್ಲಿ ಕಂಡು ಬಂದಿದೆ.
ಒಬ್ಬ ಮಹಿಳೆಯನ್ನು ರಕ್ಷಣೆ ಮಾಡುತ್ತಿದ್ದ ವೇಳೆಯಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಭಯಾನಕ ಘಟನೆ ಜರುಗಿದೆ. ತಕ್ವಾರಿ ನದಿಯ ಸಮೀಪದ ರಕ್ಷಣಾ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಲೈಟ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹೇಳಿದ್ದಾರೆ. ಹಗ್ಗ ಕಟ್ ಆಗಿ ಮಹಿಳೆ ಮತ್ತು ರಕ್ಷಕನು ಕೆಳಗೆ ಬಿದ್ದರು. ದುರದೃಷ್ಟವಶಾತ್ ಮಹಿಳೆ ಬದುಕುಳಿಯಲಿಲ್ಲ ಮತ್ತು ರಕ್ಷಣಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೂನ್‌ನಲ್ಲಿ ರಿಯೊ ಗ್ರಾಂಡೆ ಡೊ ಸುಲ್ನಲ್ಲಿ ಅಪ್ಪಳಿಸಿದ ಉಷ್ಣವಲಯದ ಚಂಡಮಾರುತದಿಂದಾಗಿ 16 ಜನರು ಮೃತಪಟ್ಟಿದ್ದರು. ಜೊತೆಗೆ 40 ನಗರಗಳು ಚಂಡಮಾರುತಕ್ಕೆ ತುತ್ತಾಗಿದ್ದವು.