ಕರ್ನಾಟಕ

karnataka

ETV Bharat / international

ಪಿಕ್​ಅಪ್​ ವ್ಯಾನ್​ ಡಿಕ್ಕಿ ಹೊಡೆದ ರಭಸಕ್ಕೆ ನೆಲಕ್ಕುರುಳಿದ ಚಲಿಸುತ್ತಿದ್ದ ರೈಲು... ಹಲವರ ಸಾವು, ಕೆಲವರ ಸ್ಥಿತಿ ಗಂಭೀರ - ಹಂಗೇರಿಯಲ್ಲಿ ಹಳಿ ತಪ್ಪಿದ ರೈಲು

ಪಿಕ್​ಅಪ್​ ವ್ಯಾನ್​ ಡಿಕ್ಕಿ ಹೊಡೆದ ರಭಸಕ್ಕೆ ಚಲಿಸುತ್ತಿದ್ದ ಪ್ಯಾಸೆಂಜರ್​ ರೈಲು ನೆಲಕ್ಕುರುಳಿ ಬಿದ್ದ ಘಟನೆ ಹಂಗೇರಿ ರಾಷ್ಟ್ರದ ಮೈಂಡ್ಸೆಂಟ್ ಪಟ್ಟಣದಲ್ಲಿ ನಡೆದಿದೆ.

Several Killed As Van Crashes Into Train In Hungary, Hungary Rail accident, derailed in Hungary, Hungary news, ಹಂಗೇರಿಯಲ್ಲಿ ವ್ಯಾನ್​ಗೆ ಡಿಕ್ಕಿ ಹೊಡೆದು ನೆಲಕ್ಕುರಳಿದ ರೈಲು, ಹಂಗೇರಿಯಲ್ಲಿ ರೈಲು ಅಪಘಾತದಲ್ಲಿ ಹಲವರು ಸಾವು, ಹಂಗೇರಿಯಲ್ಲಿ ಹಳಿ ತಪ್ಪಿದ ರೈಲು, ಹಂಗೇರಿ ಸುದ್ದಿ,
ಕೃಪೆ: Twitter

By

Published : Apr 6, 2022, 8:12 AM IST

ಬುಡಾಪೆಸ್ಟ್:ಪಿಕ್​ಅಪ್​ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಚಲಿಸುತ್ತಿದ್ದ ರೈಲು ನೆಲಕ್ಕುರುಳಿ ಬಿದ್ದಿದೆ. ಪರಿಣಾಮ ಏಳು ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ದಕ್ಷಿಣ ಹಂಗೇರಿಯ ಮೈಂಡ್ಸೆಂಟ್​ ಪಟ್ಟಣದಲ್ಲಿ ನಡೆದಿದೆ.

ಮೈಂಡ್ಸೆಂಟ್ ಪಟ್ಟಣದಲ್ಲಿ ನಿನ್ನೆ ಮುಂಜಾನೆ ಈ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ಪಿಕ್​ಅಪ್​ ವ್ಯಾನ್​ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಟ್ರೈನ್​ ನೆಲಕ್ಕುರಳಿ ಬಿದ್ದಿದೆ. ಪರಿಣಾಮ ಈ ಸಂಭವಿಸಿದ ಅಪಘಾತದಲ್ಲಿ ಏಳು ಜನ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಅಲ್ಲಿನ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಓದಿ:ಅಪರಿಚಿತ ವಾಹನ ಡಿಕ್ಕಿ: ಕರ್ತವ್ಯನಿರತ ಪೊಲೀಸ್ ಪೇದೆ ಸಾವು

ರೈಲು ಕಿಸ್ಕುನ್‌ಫೆಲೆಗಿಹಾಜಾದಿಂದ ಹೊಡ್ಮೆಜೊವಾಸರ್ಹೆಲಿಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರೈಲಿನಲ್ಲಿ 22 ಪ್ರಯಾಣಿಕರಿದ್ದರು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಂಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವ್ಯಾನ್‌ನಲ್ಲಿದ್ದ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ರೈಲ್ವೆ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಹೆಲಿಕಾಪ್ಟರ್​ ಮತ್ತು ಆ್ಯಂಬುಲೆನ್ಸ್​ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು ಅಪಘಾತದ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details