ನ್ಯೂ ಯಾರ್ಕ್: ಹಿಂದೂಗಳನ್ನು ಪ್ರತಿನಿಧಿಸುವ ಹಲವಾರು ಸಂಘಟನೆಗಳ ವಿರೋಧದ ನಡುವೆಯೂ ಅಮೆರಿಕದ ಸಿಯಾಟಲ್ ನಗರ ಜಾತಿ ತಾರತಮ್ಯವನ್ನು ನಿಷೇಧಿಸಿದ್ದು, ಈ ಕ್ರಮ ಕೈಗೊಂಡ ಮೊದಲ ಯುನೈಟೆಡ್ ಸ್ಟೇಟ್ ಸಿಟಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕೌನ್ಸಿಲರ್ ಕ್ಷಾಮ ಸಾವಂತ್ ಅವರು ಮಂಡಿಸಿದ ಈ ಶಾಸಕಾಂಗ ಕ್ರಮವನ್ನು ಸಿಟಿ ಕೌನ್ಸಿಲ್ ಮಂಗಳವಾರ ಅನುಮೋದಿಸಿತು. ಜನಾಂಗೀಯ ಪಕ್ಷಪಾತದ ವಿರುದ್ಧ ಕಾನೂನುಗಳ ಮಾದರಿಯಲ್ಲಿ ಶಾಸನವು ಈ ಕ್ರಮ ನಡೆಸಿದೆ. ಕೆಲಸ, ಮನೆ ಬಾಡಿಗೆ ಮತ್ತು ಮಾರಾಟ, ಹೋಟೆಲ್, ರೆಸ್ಟೋರೆಂಟ್ ಮತ್ತು ಸ್ಟೋರ್ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಆಧಾರದ ತಾರತಮ್ಯವನ್ನು ನಿಷೇಧಿಸುವಂತೆ ಕೇಳಲಾಯಿತು.
ಇದರ ವಿರುದ್ಧ ಕೆಲವು ಹಿಂದೂ ಸಂಘಟನೆಗಳು, ಎಡಪಂಥೀಯ ಗುಂಪುಗಳು, ನಾಗರಿಕ ಹಕ್ಕು ಗುಂಪುಗಳು ಕೂಡ ವಿರೋಧ ವ್ಯಕ್ತಪಡಿಸಿದವು. ಸಾರ್ವಜನಿಕರು ಈ ಕುರಿತು ಹೇಳಿಕೆ ನೀಡಲು ಅವಕಾಶ ನೀಡಿದ ನಂತರ ಚರ್ಚೆಯ ಬಳಿಕ ಈ ಶಾಸನವೂ ಅನುಮೋದನೆ ನೀಡಲಾಯಿತು. ಈ ಕುರಿತು ಮಾತನಾಡಲು ನೂರಾರು ಜನರು ಸಹಿ ಹಾಕಿದ್ದರು. ಆದರೆ, ಸಮಯದ ಮಿತಿ ಹಿನ್ನೆಲೆ ಕೆಲವರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಯಿತು. ಡೆಮೋಕ್ರಾಟ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕ್ಷೇತ್ರವು ಸಿಯಾಟಲ್‌ನ ಹೆಚ್ಚಿನ ಭಾಗವನ್ನು ಒಳಗೊಂಡಿದೆ.
ಇನ್ನು, ಈ ಕುರಿತು ಟ್ವೀಟ್ ಮಾಡಿರುವ ನ್ಯಾಶನಲ್ ಪಬ್ಲಿಕ್ ರೇಡಿಯೋ ವರದಿಗಾರ್ತಿ ಲಿಲ್ಲಿ ಅನಾ ಫೌಲರ್, ಕೌನ್ಸಿಲ್ ಚೇಂಬರ್‌ನಿಂದ ಮತದಾನದ ಮೊದಲು ಸ್ವಲ್ಪ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಇದು ಶಮನವಾಯಿತು. ಜಾತಿವಾದ ನಿಲ್ಲಿಸಿ ಎಂಬ ಫಲಕಗಳನ್ನು ಹಿಡಿದಿರುವ ಜನರನ್ನು ಕಾಣಬಹುದಾಗಿದೆ. ಸುಳ್ಳುಗಳನ್ನು ಕೂಗುವುದರಿಂದ ಅದು ನಿಜವಾಗುವುದಿಲ್ಲ ಎಂದಿದ್ದಾರೆ.