ನ್ಯೂಯಾರ್ಕ್:ಸ್ಥೂಲಕಾಯತೆಯ ಹೆಚ್ಚಳಕ್ಕೆ ಕಾರಣವೇನೆಂದು ಪೌಷ್ಟಿಕಾಂಶ ತಜ್ಞರು ಹಲವು ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುವ ಆಹಾರಗಳು ಈ ಸ್ಥಿತಿಗೆ ಕೊಡುಗೆ ನೀಡುತ್ತಿದ್ದರೂ, ಫ್ರಕ್ಟೋಸ್ (ಸಕ್ಕರೆಯ ವಿಧ) ಸ್ಥೂಲಕಾಯತೆಗೆ ನಿಜವಾದ ಕಾರಣ ಎಂಬ ಅಚ್ಚರಿಯ ಅಂಶವನ್ನು ಅಧ್ಯಯನ ತಿಳಿಸಿದೆ.
ಕೊಲೊರಾಡೋ ವಿಶ್ವವಿದ್ಯಾಲಯದ ಆನ್‌ಸ್ಚುಟ್ಜ್ ವೈದ್ಯಕೀಯ ಕ್ಯಾಂಪಸ್‌ನ ರಿಚರ್ಡ್ ಜಾನ್ಸನ್ ಹೇಳುವ ಪ್ರಕಾರ, ಸ್ಥೂಲಕಾಯಕ್ಕೆ ಪ್ರಾಥಮಿಕ ಕಾರಣ ಫ್ರಕ್ಟೋಸ್. ಪ್ರಕ್ಟೋಸ್ ಸಕ್ಕರೆ ಮತ್ತು ಕಾರ್ನ್ ಸಿರಪ್‌ನಲ್ಲಿ ಹೆಚ್ಚಾಗಿರುತ್ತದೆ. ಕಾರ್ಬೋಹೈಡ್ರೇಟ್‌ಗಳಿಂದ (ವಿಶೇಷವಾಗಿ ಗ್ಲೂಕೋಸ್) ದೇಹದಲ್ಲಿ ಫ್ರಕ್ಟೋಸ್ ಹೆಚ್ಚಳವಾಗುತ್ತದೆ ಎಂದಿದ್ದಾರೆ.
ಫ್ರಕ್ಟೋಸ್ ಚಯಾಪಚಯಗೊಂಡಾಗ ದೇಹದಲ್ಲಿ ಸಕ್ರಿಯ ಶಕ್ತಿಯನ್ನು ಕಡಿಮೆ ಮಾಡುತ್ತದೆ. (ಎಟಿಪಿ, ಅಥವಾ ಅಡೆನೊಸಿನ್ ಟ್ರೈಫಾಸ್ಫೇಟ್ ಎಂದು ಕರೆಯಲಾಗುತ್ತದೆ) ಇದರಿಂದಾಗಿ ವ್ಯಕ್ತಿಗೆ ಹಸಿವು ಜಾಸ್ತಿಯಾಗುತ್ತದೆ. ಇದರ ಪರಿಣಾಮ ಹೆಚ್ಚಿನ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಜಾನ್ಸನ್ ಇದನ್ನು "ಫ್ರಕ್ಟೋಸ್ ಸರ್ವೇವೈವಲ್ ಹಿಪ್ನೋಥಿಸಿಸ್'' ಎಂದು ಕರೆದಿದ್ದಾರೆ. "ಫ್ರಕ್ಟೋಸ್ ನಮ್ಮ ಚಯಾಪಚಯವನ್ನು ಕಡಿಮೆ ಮಾಡುತ್ತದೆ. ಇದು ನಾವು ಹಸಿವಿನ ನಿಯಂತ್ರಣ ಕಳೆದುಕೊಳ್ಳಲು ಪ್ರಚೋದಿಸುತ್ತದೆ. ಆದರೆ ಕೊಬ್ಬಿನ ಆಹಾರಗಳು ತೂಕ ಹೆಚ್ಚಿಸುವ ಕ್ಯಾಲೊರಿಗಳ ಪ್ರಮುಖ ಮೂಲವಾಗಿದೆ" ಎಂದು ಜಾನ್ಸನ್ ವಿವರಿಸಿದ್ದಾರೆ.