ಕರ್ನಾಟಕ

karnataka

By

Published : Apr 10, 2022, 11:28 AM IST

ETV Bharat / international

ಈ ವರ್ಷ 10 ಲಕ್ಷ ಹಜ್​ ಯಾತ್ರಾರ್ಥಿಗಳಿಗೆ ಭಾಗವಹಿಸಲು ಅವಕಾಶ

ಕೋವಿಡ್-19 ಕಾರಣದಿಂದಾಗಿ ಕಳೆದ ಎರಡು ವರ್ಷಗಳು ಕೇವಲ ದೇಶೀಯ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಯಾತ್ರಾರ್ಥಿಗಳಿಗೂ ಅವಕಾಶ ನೀಡಲಾಗುತ್ತಿದೆ..

hajj Piligrims
ಹಜ್​ ಯಾತ್ರೆ

ರಿಯಾದ್ :ಈ ವರ್ಷ ಹಜ್ ಋತುವಿನಲ್ಲಿ ಸೌದಿ ಅರೇಬಿಯಾ 1 ಮಿಲಿಯನ್(10 ಲಕ್ಷ) ದೇಶೀಯ ಮತ್ತು ವಿದೇಶಿ ಯಾತ್ರಾರ್ಥಿಗಳಿಗೆ ಮೆಕ್ಕಾ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿದೆ ಎಂದು ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಶನಿವಾರ ಪ್ರಕಟಿಸಿದೆ. ವಿಶ್ವದಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರಿಗೆ ಹಜ್​ ತೀರ್ಥಯಾತ್ರೆಯ ಆಚರಣೆಗಳಿಗೆ ಅನುವು ಮಾಡಿಕೊಡಲು ಸಚಿವಾಲಯ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹಜ್ ಮಾಡಲು ಬರುವ ಯಾತ್ರಿಕರು 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಮತ್ತು ಕೋವಿಡ್-19 ಲಸಿಕೆ ಎಲ್ಲ ಡೋಸ್​ಗಳನ್ನು ಪಡೆದಿರಬೇಕು ಎಂದು ಸಚಿವಾಲಯ ತಿಳಿಸಿದೆ. ವಿದೇಶಿ ಯಾತ್ರಾರ್ಥಿಗಳು ಸೌದಿ ಅರೇಬಿಯಾಕ್ಕೆ ಹೊರಡುವ 72 ಗಂಟೆಗಳ ಮೊದಲು, ಕೋವಿಡ್​ ಪಿಸಿಆರ್​ ಪರೀಕ್ಷೆಯ ನೆಗೆಟಿವ್​ ವರದಿಯನ್ನು ಸಲ್ಲಿಸಬೇಕು ಎಂಬುದನ್ನು ಸ್ಪಷ್ಟಪಡಿಸಿದೆ.

ಕೋವಿಡ್-19 ಕಾರಣದಿಂದಾಗಿ ಕಳೆದ ಎರಡು ವರ್ಷಗಳು ಕೇವಲ ದೇಶೀಯ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಯಾತ್ರಾರ್ಥಿಗಳಿಗೂ ಅವಕಾಶ ನೀಡಲಾಗುತ್ತಿದೆ. 2019ರಲ್ಲಿ 2.5 ಮಿಲಿಯನ್​ ಯಾತ್ರಾರ್ಥಿಗಳು ಮೆಕ್ಕಾಗೆ ಭೇಟಿ ನೀಡಿದ್ದರೆ, 2021ರಲ್ಲಿ ಸುಮಾರು 60,000 ಯಾತ್ರಿಕರಷ್ಟೇ ಭೇಟಿ ನೀಡಿದ್ದರು ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:ಭಾರತವನ್ನು ನೋಡಿ ಸ್ವಾಭಿಮಾನ ಕಲಿಯಬೇಕು: ಪಾಕ್ ಪ್ರಧಾನಿ ಇಮ್ರಾನ್ ಖಾನ್

ABOUT THE AUTHOR

...view details