ಬೀಜಿಂಗ್(ಚೀನಾ): ಉತ್ತರ ಚೀನಾದ ಹಲವೆಡೆ ಗುರುವಾರ ಭಾರೀ ಮರಳಿನ ಅಲೆ ಮತ್ತು ಧೂಳುಗಳು ಎದ್ದಿದ್ದು, ಜನರು ಇದರಿಂದ ಸಮಸ್ಯೆಗೆ ಒಳಗಾಗುವಂತೆ ಆಗಿದೆ. ಅದರಲ್ಲೂ ಮಂಗೋಲಿಯಾದ ಹಲವು ಭಾಗ ಮರಳಿನ ಬಿರುಗಾಳಿಗೆ ಸಾಕ್ಷಿಯಾಗಿದೆ. ಈ ಮರಳು, ಬಲವಾದ ಗಾಳಿ ಮತ್ತು ಧೂಳಿನ ವಾತಾವರಣ ಭಾನುವಾರದವರೆಗೆ ಮುಂದುವರೆಯುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹವಾಮಾನ ಕೇಂದ್ರ ತಿಳಿಸಿದೆ. ಇದೇ ವೇಳೆ, ಕಡಿಮೆ ವಾಯು ಗುಣಮಟ್ಟದಿಂದ ರಕ್ಷಣೆಗೆ ಪಡೆಯಲು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.
ಮರಳಿನ ಬಿರುಗಾಳಿಯಿಂದಾಗಿ ನೀಲಿ ಅಲರ್ಟ್ ಅನ್ನು ಘೋಷಿಸಿದೆ. ನಾಲ್ಕು ಹಂತದ ಹವಾಮಾನ ಮುನ್ಸೂಚನೆಯನ್ನು ಚೀನಾ ಹೊಂದಿದ್ದು, ಇದರ ಅನುಸಾರ ನೀಲಿ ಹೆಚ್ಚಿನ ಅಪಾಯಕಾರಿಯಲ್ಲ. ಕೆಂಪು ಆಲರ್ಟ್ ಹೆಚ್ಚಿನ ಅಪಾಯವನ್ನು ಹೊಂದಿದೆ. ಚೀನಾದ ಪ್ರಮುಖ ನಗರಗಳಾದ ಬಿಜೀಂಗ್ ಮತ್ತು ಶಾಂಘೈ ಸೇರಿದಂತೆ 12 ನಗರಗಳು ಈ ಧೂಳು ಮತ್ತು ಮರಳಿನ ಅಲೆಯಿಂದ ತತ್ತರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕೆಲವು ಪ್ರದೇಶಗಳಲ್ಲಿನ ಜನರು ಗುರುವಾರ ಮರಳಿನ ಅಲೆ ಮತ್ತು ಧೂಳಿನಿಂದ ಸಮಸ್ಯೆ ಅನುಭವಿಸುವಂತೆ ಆಗಿದೆ.
ಕೇಂದ್ರ ಮುಖ್ಯ ಹವಾಮಾನ ತಜ್ಞರಾಗಿರುವ ಗುಜ್ ಹೈಲಿನ್, ಈ ಮೊದಲು ದಕ್ಷಿಣ ಮಂಗೋಲಿಯಾದಲ್ಲಿ ಭಾನುವಾರದಿಂದ ಮರಳು ಮತ್ತು ಧೂಳಿನ ವಾತಾವರಣ ಆರಂಭವಾಗಲಿದೆ ಎಂದಿದ್ದಾರೆ. ಹವಾಮಾನ ದಕ್ಷಿಣ ಕಡೆಗೆ ಶೀತಗಾಳಿ ಚಲಿಸಿದಂತೆ, ಉತ್ತರ ಮತ್ತು ಈಶಾನ್ಯ ಚೀನಾ ಕಡೆ ಹರಡಲಿದೆ. ಬಿಜೀಂಗ್ನಲ್ಲಿ ಈ ಧೂಳಿನ ವಾತಾವರಣದಿಂದ ಕಡಿಮೆ ಗೋಚರತೆ ಆಗಲಿದೆ ಎಂದು ಅವರು ತಿಳಿಸಿದ್ದರು.