ಸ್ಯಾನ್ ಫ್ರಾನ್ಸಿಸ್ಕೋ: ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಂಪನಿಯೆಂದರೆ ಸ್ಯಾಮ್ಸಂಗ್. ಈ ಕಂಪನಿ ಮಾರುಕಟ್ಟೆಗೆ ಹಲವಾರು ಬಗೆಯ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೆ ಹೊಸ "ಸ್ಯಾಮ್‌ಸಂಗ್ ಮೆಸೇಜ್ ಗಾರ್ಡ್" ಎಂಬ ಭದ್ರತಾ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದು ಬಳಕೆದಾರರು ಮೋಸಕ್ಕೊಳಗಾದದಂತೆ ತಡೆಯುತ್ತದೆ.
ಮೊಬೈಲ್ ಬಳಕೆದಾರರಿಗೆ ಹೆಚ್ಚಿನ ಭದ್ರತೆ ಒದಗಿಸುವ ಟೆಕ್ ಸಂಸ್ಥೆ.. ಹೌದು, ಬಳಕೆದಾರರಿಗೆ ಸ್ಯಾಮ್‌ಸಂಗ್ ಮೆಸ್ಸೇಜ್ ಗಾರ್ಡ್ ಬಹಳ ಉಪಕಾರಿಯಾಗಿದೆ. "ಪೂರ್ವಭಾವಿಯಾಗಿ" ಬಳಕೆದಾರರನ್ನು ರಕ್ಷಿಸುವ ಮೂಲಕ ಹೆಚ್ಚಿನ ಭದ್ರತೆ ನೀಡುತ್ತದೆ ಎಂದು ದೈತ್ಯ ಟೆಕ್ ಸಂಸ್ಥೆ ಶುಕ್ರವಾರ ಬ್ಲಾಗ್ನಲ್ಲಿ ಪೋಸ್ಟ್ ಮಾಡಿ ತಿಳಿಸಿದೆ.
ಇದನ್ನೂ ಓದಿ:ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 23 ಅಲ್ಟ್ರಾ ಸ್ಮಾರ್ಟ್‌ಫೋನ್ ವಿನ್ಯಾಸ ಹೇಗಿದೆ ಗೊತ್ತಾ..
ಫೋನ್ಗೆ ಇಮೇಜ್ ಫೈಲ್ ಬಂದಾಗ ಅದನ್ನು ಸಂದೇಶ ಗಾರ್ಡ್ ಪರಿಶೀಲಿಸುತ್ತದೆ.. ಹೊಸ ಸಂದೇಶ ಗಾರ್ಡ್ ಸುಧಾರಿತ "ಸ್ಯಾಂಡ್‌ಬಾಕ್ಸ್" ಅಥವಾ ಒಂದು ರೀತಿಯ ವರ್ಚುವಲ್ ಕ್ವಾರಂಟೈನ್ ಆಗಿದೆ. ಫೋನ್ಗೆ ಇಮೇಜ್ ಫೈಲ್ ಬಂದಾಗ ಅದನ್ನು ಸಂದೇಶ ಗಾರ್ಡ್ ಪರಿಶೀಲಿಸುತ್ತದೆ. ಪರಿಣಾಮವಾಗಿ ದುರುದ್ದೇಶಪೂರಿತ ಕೋಡ್, ಬಳಕೆದಾರರ ಫೋನ್‌ನ ಫೈಲ್‌ಗಳನ್ನು ಪ್ರವೇಶಿಸಲು ಅಥವಾ ಆಪರೇಟಿಂಗ್ ಸಿಸ್ಟಮ್ ತಲುಪಲು ಸಾಧ್ಯವಾಗುವುದಿಲ್ಲ. ಇದನ್ನು ವರ್ಷದ ನಂತರ ಇತರೆ ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೂ ಅಳವಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.