ವಾಷಿಂಗ್ಟನ್: ಸಲಿಂಗ ವಿವಾಹದ ಮಾನ್ಯತೆಯನ್ನು ರಕ್ಷಿಸುವ ಮಸೂದೆಗೆ ಅಮೆರಿಕದ ಸಂಸತ್ತಿನಲ್ಲಿ ಅಂಗೀಕಾರ ಸಿಕ್ಕಿದೆ. 2015ರಲ್ಲಿ ರಾಷ್ಟ್ರಾದ್ಯಂತ ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸಿದ ಬಳಿಕ ಹಾಗೂ ರಾಷ್ಟ್ರ ಮಟ್ಟದಲ್ಲಿ ರಾಜಕೀಯ ವಿಷಯವಾಗಿದ್ದ ಈ ಮಸೂದೆಯ ಜೊತೆಗೆ ಮದುವೆಯಾಗಿದ್ದ ಸಾವಿರಾರು ಸಲಿಂಗಿಗಳಿಗೆ ಈ ನಡೆ ನಿರಾಳತೆ ಮೂಡಿಸಿದೆ.
ಸಲಿಂಗ ವಿವಾಹ ಮತ್ತು ಅಂತರ್‌ಜನಾಂಗದ ಮದುವೆಯ ವಿಚಾರವನ್ನು ಈಗ ಫೆಡರಲ್ ನಿಯಮದ ಅಡಿ ತರಲಾಗಿದೆ. ಈ ಮಸೂದೆಗೆ ಸದನದಲ್ಲಿ 61 ಮಂದಿ ಸಮ್ಮತಿ ಸೂಚಿಸಿದ್ದು, 36 ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. 12 ರಿಪಬ್ಲಿಕನ್ ಸದಸ್ಯರ ಬೆಂಬಲ ಸಿಕ್ಕಿದೆ. ಈ ಸಂಬಂಧ ನಡೆದ ಹೋರಾಟಗಳಿಗೆ ಸಮಾನತೆಯನ್ನು ಈ ಮಸೂದೆ ತರುತ್ತದೆ ಎಂದು ಸೆನೆಟ್ ನಾಯಕ ಚುಕ್ ಶುಮರ್ ತಿಳಿಸಿದರು.