ಜೋಹಾನ್ಸ್‌ಬರ್ಗ್:ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಆಗಸ್ಟ್ 22 ರಿಂದ 24 ರ ವರೆಗೆ ನಡೆಯುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿಲ್ಲ ಎಂಬ ಸುದ್ದಿ ಹರದಾಡಿತ್ತು. ಇದು ತನ್ನನ್ನು ಆಶ್ಚರ್ಯಗೊಳಿಸಿತ್ತು ಎಂದು ಆಫ್ರಿಕಾದ ವಿದೇಶಾಂಗ ಸಚಿವ ನಲೇಡಿ ಪಾಂಡೋರ್ ಸೋಮವಾರು ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆಯ 15 ನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾ ಆಯೋಜಿಸುತ್ತಿದೆ. ಇದರ ಸಿದ್ಧತೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಚಿವ ನಲೇಡಿ, ಭಾರತದ ಪ್ರಧಾನಿ ಮೋದಿ ಅವರು ವಿಶ್ವಖ್ಯಾತಿ ಪಡೆದಿದ್ದಾರೆ. ಅವರು ಶೃಂಗಸಭೆಯಲ್ಲಿ ಭಾಗವಹಿಸಲ್ಲವೆಂದು ಎಂದಿಗೂ ಭಾವಿಸಲ್ಲ. ಭಾರತ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅವರು ಈ ಬಗ್ಗೆ ಮಾಹಿತಿ ನೀಡಿಲ್ಲ. ನಮ್ಮ ಶೆರ್ಪಾಗಳು ಕೂಡ ಸಂಪರ್ಕದಲ್ಲಿದ್ದಾರೆ. ಆದ್ದರಿಂದ, ಇದು ಕೇವಲ ವದಂತಿ ಎಂದು ಹೇಳಿದರು.
ಶೃಂಗಸಭೆಯನ್ನು ಹಾಳು ಮಾಡುವ ಕಾರಣಕ್ಕಾಗಿ ಕೆಲವರು ಇಂತಹ ವದಂತಿಯನ್ನು ಹಬ್ಬಿಸಿದ್ದಾರೆ. ಇದು ನಮಗೆಲ್ಲಾ ಅಚ್ಚರಿ ತಂದಿದೆ. ಆದರೆ, ಅವರ ಯಾವ ಪ್ರಯತ್ನಗಳೂ ಫಲ ನೀಡುವುದಿಲ್ಲ. ಬ್ರೆಜಿಲ್, ಚೀನಾ, ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾದ ನಾಯಕರು ಬ್ರಿಕ್ಸ್ ಶೃಂಗಸಭೆಯ ಹಲವಾರು ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗಹಿಸಿಲಿದ್ದಾರೆ ಎಂದು ಅವರು ಮೋದಿ ಅವರು ಸಭೆಗೆ ಬರಲಿದ್ದಾರೆ ಎಂದು ದೃಢಪಡಿಸಿದರು.