ಕರ್ನಾಟಕ

karnataka

ETV Bharat / international

ಉಕ್ರೇನ್‌ ಮೇಲೆ ನೇರ ಯುದ್ಧದ ಜತೆ ಸೈಬರ್​ ವಾರ್​​:  ಬಹುತೇಕ ಸಂಸ್ಥೆಗಳ ಡೇಟಾ ನಾಶಪಡಿಸಿದ ರಷ್ಯಾ - ಉಕ್ರೇನ್‌ ರಷ್ಯಾ ನ್ಯೂಸ್

ರಷ್ಯಾದ ಹ್ಯಾಕರ್‌ಗಳು ಉಕ್ರೇನ್‌ನಲ್ಲಿನ ಬಹತೇಕ ಸಂಸ್ಥೆಗಳ ಡೇಟಾಗಳನ್ನು ನಾಶಪಡಿಸಿವೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ​​​ ತಿಳಿಸಿದೆ.

Russian hackers destroyed Ukraine data's
ಉಕ್ರೇನ್‌ನ ಬಹತೇಕ ಸಂಸ್ಥೆಗಳ ಡೇಟಾವನ್ನು ನಾಶಪಡಿಸಿದ ರಷ್ಯಾ

By

Published : Apr 28, 2022, 6:51 AM IST

ಉಕ್ರೇನ್: ಉಕ್ರೇನ್ ಮೇಲೆ ರಷ್ಯಾ ದಾಳಿ, ಸಾರ್ವಜನಿಕ ಆಸ್ತಿಪಾಸ್ತಿ ಸೇರಿ ಪ್ರಾಣಹಾನಿ ಮುಂದುವರಿದಿದೆ. ಕಳೆದ ದಿನ ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾ ಪಡೆಗಳು ಮತ್ತೆ ತಮ್ಮ ವಶಕ್ಕೆ ಪಡೆದುಕೊಂಡಿದ್ದವು. ಒಂದೆಡೆ ನೇರ ಯುದ್ಧ ಮುಂದುವರಿಸಿರುವ ರಷ್ಯಾ ಮತ್ತೊಂದು ಕಡೆ ಪರೋಕ್ಷ ಯುದ್ಧವನ್ನು ಜಾರಿಯಲ್ಲಿಟ್ಟಿದೆ. ಇದೀಗ ರಷ್ಯಾ ಹ್ಯಾಕರ್‌ಗಳು ಉಕ್ರೇನ್‌ನಲ್ಲಿನ ಬಹತೇಕ ಸಂಸ್ಥೆಗಳ ಡೇಟಾವನ್ನು ನಾಶಪಡಿಸಿವೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ​​​ ತಿಳಿಸಿದೆ.

ರಷ್ಯಾದಿಂದ ವಿನಾಶಕಾರಿ ದಾಳಿ ನಡೆಯುತ್ತಿದ್ದು, ಉಕ್ರೇನ್​​ ದೇಶದ ಮೂಲಸೌಕರ್ಯಗಳನ್ನು ನಾಶಗೊಳಿಸುತ್ತಿವೆ. ಇದೀಗ ಉಕ್ರೇನ್​ನ 10ಕ್ಕೂ ಹೆಚ್ಚು ಸಂಸ್ಥೆಗಳ ಮಾಹಿತಿಯನ್ನು ರಷ್ಯಾ ಹ್ಯಾಕರ್‌ಗಳು ನಾಶಪಡಿಸಿದ್ದು, ಅಸ್ತವ್ಯಸ್ತ ಮಾಹಿತಿಯುಳ್ಳ ವಾತಾವರಣ ನಿರ್ಮಾಣವಾಗಿದೆ.

ರಷ್ಯಾ ಸಂಯೋಜಿತ ಬೆದರಿಕೆ ಗುಂಪುಗಳು ಮಾರ್ಚ್ 2021ರ ಮೊದಲೇ ಸಂಘರ್ಷಕ್ಕೆ ಯೋಜನೆ ರೂಪಿಸಿದ್ದವು ಎಂದು ಮೈಕ್ರೋಸಾಫ್ಟ್ ಮೌಲ್ಯಮಾಪನ ಮಾಡಿದೆ. ಯುದ್ಧಭೂಮಿಯ ಮಾಹಿತಿ ಸಂಗ್ರಹಿಸಲು, ಭವಿಷ್ಯದ ವಿನಾಶಕಾರಿ ದಾಳಿಗಳನ್ನು ಸುಗಮಗೊಳಿಸಲು ಉಕ್ರೇನ್​ ನೆಟ್​ವರ್ಕ್ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ:ಚೀನಾದಲ್ಲಿ ಕಾಣಿಸಿಕೊಂಡ ಬರ್ಡ್​​ ಫ್ಲೂ: ಮೊದಲ ಮಾನವ ಸೋಂಕು ಪತ್ತೆ!

ರಷ್ಯಾದ ಸೈಬರ್‌ ದಾಳಿ ಉಕ್ರೇನ್​ ಸಂಸ್ಥೆಗಳ ಕಾರ್ಯಗಳನ್ನು ಕೆಡಿಸಿದೆ. ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಉಕ್ರೇನ್ ನಾಯಕತ್ವದ ವಿಶ್ವಾಸವನ್ನು ಅಲುಗಾಡಿಸಲು ಪ್ರಯತ್ನಿಸಿದೆ ಎಂದೂ ಹೇಳಿದೆ.

ABOUT THE AUTHOR

...view details