ಕರ್ನಾಟಕ

karnataka

ETV Bharat / international

ಉಕ್ರೇನ್​ಗೆ ಮಿಲಿಟರಿ ನೆರವು ನಿಲ್ಲಿಸದಿದ್ದರೆ ಪರಿಣಾಮ ನೆಟ್ಟಗಿರದು.. ಅಮೆರಿಕಕ್ಕೆ ರಷ್ಯಾ ವಾರ್ನಿಂಗ್​ - ಉಕ್ರೇನ್​ಗೆ ಅಮೆರಿಕ ನೆರವಿನ ವಿರುದ್ಧ ರಷ್ಯಾ ಕಿಡಿ

ಉಕ್ರೇನ್​ ಮಿಲಿಟರಿ ನೆರವು ಹೆಚ್ಚಿಸಿದ ಅಮೆರಿಕದ ವಿರುದ್ಧ ರಷ್ಯಾ ಕೆಂಡಕಾರಿದೆ. ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸದಿದ್ದರೆ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದೆ.

russia-warns-to-us
ಅಮೆರಿಕಕ್ಕೆ ರಷ್ಯಾ ವಾರ್ನಿಂಗ್​

By

Published : Apr 16, 2022, 8:03 AM IST

ವಾಷಿಂಗ್ಟನ್(ಅಮೆರಿಕ):ಉಕ್ರೇನ್​ ಮೇಲೆ 51 ದಿನಗಳಿಂದ ಯುದ್ಧ ಮುಂದುವರಿಸಿರುವ ರಷ್ಯಾಗೆ, ಉಕ್ರೇನ್​ ಪಡೆಗಳು ದಾಳಿ ಮಾಡಿ ಯುದ್ಧ ನೌಕೆಯನ್ನು ಧ್ವಂಸ ಮಾಡಿವೆ. ಇದರ ವಿರುದ್ಧ ಸಿಡಿದೆದ್ದಿರುವ ರಷ್ಯಾ ಉಕ್ರೇನ್​ ಪ್ರದೇಶಗಳ ಮೇಲೆ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸುತ್ತಿದೆ. ಈ ಮಧ್ಯೆಯೇ ಉಕ್ರೇನ್​ಗೆ ಭಾರಿ ಯುದ್ಧ ಶಸ್ತ್ರಾಸ್ತ್ರಗಳ ಪೂರೈಕೆ, 800 ಮಿಲಿಯನ್​ ಮಿಲಿಟರಿ ಆರ್ಥಿಕ ನೆರವು ಘೋಷಿಸಿದ ಅಮೆರಿಕಕ್ಕೆ, ರಷ್ಯಾ ಖಡಕ್​ ಎಚ್ಚರಿಕೆ ನೀಡಿದೆ. ಉಕ್ರೇನ್​ಗೆ ಶಸ್ತ್ರಾಸ್ತ್ರಗಳ ಹೆಚ್ಚಿನ ನೆರವು ನೀಡಿದರೆ, 'ಮುಂದೆ ಊಹಿಸಲಾಗದ ಪರಿಣಾಮ ಎದುರಿಸಬೇಕಾಗುತ್ತದೆ' ಎಂದಿದೆ.

ಉಕ್ರೇನ್​ಗೆ ಅತ್ಯಂತ ಸೂಕ್ಷ್ಮ ಶಸ್ತ್ರಾಸ್ತ್ರಗಳ ನೆರವು ನೀಡುತ್ತಿರುವ ಅಮೆರಿಕ, ನ್ಯಾಟೋ ಪಡೆಗಳ ಬಗ್ಗೆ ಕಿಡಿಕಾರಿರುವ ರಷ್ಯಾ, ಉಕ್ರೇನ್​ಗೆ ಮಿಲಿಟರಿ ಸಹಾಯ ಮಾಡುವುದನ್ನು ನಿಲ್ಲಿಸಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ನಿಲುವಾಗಿದೆ. ಇದನ್ನು ಮುಂದುವರಿಸಿದ್ದೇ ಆದಲ್ಲಿ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್​ ಆಗಿ ಹೇಳಿದೆ.

ನ್ಯೂಕ್ಲಿಯರ್​ ಬಾಂಬ್​ ಬೆದರಿಕೆ:ಕೆಲ ದಿನಗಳ ಹಿಂದಷ್ಟೇ ಅಮೆರಿಕ, ನ್ಯಾಟೋ ಪಡೆಗಳ ವಿರುದ್ಧ ಗುಡುಗಿದ್ದ ರಷ್ಯಾ, ಉಕ್ರೇನ್​ಗೆ ಸಹಾಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಷ್ಯಾ ತನ್ನ ಭದ್ರತೆಗಾಗಿ ನ್ಯೂಕ್ಲಿಯರ್​ ಬಾಂಬ್​ಗಳನ್ನು ನಿಯೋಜಿಸಲಾಗುವುದು ಎಂದಿತ್ತು.

ಓದಿ:ಟ್ವಿಟ್ಟರ್​ ಖರೀದಿಸುವ ಎಲಾನ್​​ ಮಸ್ಕ್​ ಕನಸಿಗೆ ಭಂಗ.. ಇದು ಕ್ರಮಬದ್ಧವಲ್ಲದ ನಿರ್ಧಾರ ಎಂದ ಮಂಡಳಿ

ABOUT THE AUTHOR

...view details