ಕರ್ನಾಟಕ

karnataka

ETV Bharat / international

ಅಮೆರಿಕಾದ ಏರ್​ ಡಿಫೆನ್ಸ್​ ಸಿಸ್ಟಮ್ಸ್​ ಬಳಸದಂತೆ ಉಕ್ರೇನ್​ಗೆ ಎಚ್ಚರಿಕೆ ನೀಡಿದ ರಷ್ಯಾ! - ಅಮೆರಿಕಾ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ

ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ ಸಾಗುತ್ತಲೇ ಇದೆ. ಇದರ ಮಧ್ಯೆ ಉಕ್ರೇನ್​ಗೆ ರಷ್ಯಾ ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

US air defense systems could be targets in Ukraine  US air defense systems  Russia Ukraine war  ಉಕ್ರೇನ್​ಗೆ ಎಚ್ಚರಿಕೆ ನೀಡಿದ ರಷ್ಯಾ  ಅಮೆರಿಕಾದ ಏರ್​ ಡಿಫೆನ್ಸ್​ ಸಿಸ್ಟಮ್ಸ್​ ರಷ್ಯಾ ಮತ್ತು ಉಕ್ರೇನ್​ ಮಧ್ಯೆ ಯುದ್ಧ  ಉಕ್ರೇನ್​ಗೆ ರಷ್ಯಾ ಮತ್ತೊಮ್ಮೆ ಎಚ್ಚರಿಕೆ  ಅಮೆರಿಕಾ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ  ಜನರು ರಷ್ಯಾದ ಮಿಲಿಟರಿಗೆ ಬಲಿ
ಅಮೆರಿಕಾದ ಏರ್​ ಡಿಫೆನ್ಸ್​ ಸಿಸ್ಟಮ್ಸ್​ ಬಳಸದಂತೆ ಉಕ್ರೇನ್​ಗೆ ಎಚ್ಚರಿಕೆ ನೀಡಿದ ರಷ್ಯಾ

By

Published : Dec 16, 2022, 2:23 PM IST

ಕೈವ್, ರಷ್ಯಾ: ಉಕ್ರೇನ್‌ಗೆ ಅಮೆರಿಕ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಅಂದ್ರೆ ಏರ್​ ಡಿಫೆನ್ಸ್​ ಸಿಸ್ಟಮ್ಸ್ ಶಸ್ತ್ರಾಸ್ತ್ರಗಳನ್ನು ಒದಗಿಸಿದರೆ, ಆ ವ್ಯವಸ್ಥೆಗಳು ಮತ್ತು ಅವುಗಳನ್ನು ನಿರ್ವಹಿಸುವ ಜನರು ರಷ್ಯಾದ ಮಿಲಿಟರಿಗೆ ಬಲಿಯಾಗುತ್ತಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಗುರುವಾರ ಎಚ್ಚರಿಸಿದೆ.

ಯುರೋಪಿಯನ್ ಒಕ್ಕೂಟ (EU) ಗುರುವಾರ ಉಕ್ರೇನ್ ವಿರುದ್ಧದ ಯುದ್ಧದ ಬಗ್ಗೆ ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಘೋಷಿಸಿತು. ಈ ನಿರ್ಬಂಧಗಳ ವಿವರಗಳನ್ನು ಇನ್ನೂ ಒದಗಿಸಲಾಗಿಲ್ಲ. 27 ದೇಶಗಳ ಸಂಘಟನೆಯ ರಾಯಭಾರಿಗಳ ನಡುವಿನ ಸಭೆಯಲ್ಲಿ ಹಲವು ದಿನಗಳ ಮಾತುಕತೆಯ ನಂತರ ಇವುಗಳನ್ನು ಅನುಮೋದಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಅಮೆರಿಕಾದ ಏರ್​ ಡಿಫೆನ್ಸ್​ ಸಿಸ್ಟಮ್ಸ್​ ಬಳಸದಂತೆ ಉಕ್ರೇನ್​ಗೆ ಎಚ್ಚರಿಕೆ ನೀಡಿದ ರಷ್ಯಾ

ಯುರೋಪಿಯನ್ ಒಕ್ಕೂಟದ ಕೌನ್ಸಿಲ್‌ನ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಜೆಕ್ ರಿಪಬ್ಲಿಕ್, ಲಿಖಿತ ಪ್ರತಿಕ್ರಿಯೆಯ ನಂತರ ರಷ್ಯಾದ ಮೇಲಿನ ಮತ್ತಷ್ಟು ನಿರ್ಬಂಧಗಳನ್ನು ಇಂದು ದೃಢೀಕರಿಸಲಾಗುವುದು. ನಂತರ ಇವುಗಳನ್ನು ಸಂಘದ ಕಾನೂನು ದಾಖಲೆಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದೆ.

ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವ ಮತ್ತು ಅದರ ಪಡೆಗಳಿಗೆ ತರಬೇತಿ ನೀಡುವ ಮೂಲಕ ಯುಎಸ್ ಯುದ್ಧಕ್ಕೆ "ಪರಿಣಾಮಕಾರಿಯಾಗಿ ಒಂದು ಪಕ್ಷವಾಗಿದೆ" ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಹೇಳಿದ್ದಾರೆ.

ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಒದಗಿಸುವ ಯುಎಸ್ ಯೋಜನೆಗಳ ವರದಿಗಳು ನಿಜವಾಗಿದ್ದರೆ ಅದು "ಅಮೆರಿಕದಿಂದ ಮತ್ತೊಂದು ಪ್ರಚೋದನಾತ್ಮಕತೆ ಮತ್ತು ಯುದ್ಧಕ್ಕೆ ಕಾರಣವಾಗಬಹುದು. ಅಪರಾಧದಲ್ಲಿ ಅವರ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಅವರು ಘೋರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಅಮೆರಿಕಾದ ಏರ್​ ಡಿಫೆನ್ಸ್​ ಸಿಸ್ಟಮ್ಸ್​ ಬಳಸದಂತೆ ಉಕ್ರೇನ್​ಗೆ ಎಚ್ಚರಿಕೆ ನೀಡಿದ ರಷ್ಯಾ

ಉಕ್ರೇನಿಯನ್ ಪಡೆಗಳಿಗೆ ತರಬೇತಿ ವಿಸ್ತರಿಸುವುದಾಗಿ ಯುಎಸ್ ಘೋಷಿಸಿದೆ. ತಿಂಗಳಿಗೆ ಸುಮಾರು 500 ಉಕ್ರೇನಿಯನ್ ಪಡೆಗಳಿಗೆ ತರಬೇತಿ ನೀಡಲು ಯುಎಸ್ ನಿರೀಕ್ಷಿಸುತ್ತದೆ. ಅಮೆರಿಕ ಈಗಾಗಲೇ ಸುಮಾರು 3,100 ಉಕ್ರೇನಿಯನ್ ಪಡೆಗಳಿಗೆ ತರಬೇತಿ ನೀಡಿದೆ ಎಂದು ಯುಎಸ್ ರಕ್ಷಣಾ ಇಲಾಖೆಯ ವಕ್ತಾರ ಏರ್ ಫೋರ್ಸ್ ಜನರಲ್ ಪ್ಯಾಟ್ ರೈಡರ್ ಹೇಳಿದರು.

ಉಕ್ರೇನ್‌ಗೆ ಪೇಟ್ರಿಯಾಟ್ ಕ್ಷಿಪಣಿಗಳ ರವಾನೆ ಕಳುಹಿಸಲು ಅಮೆರಿಕ ಅನುಮೋದಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಯುಎಸ್ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ರಷ್ಯಾದ ದಾಳಿಯನ್ನು ಎದುರಿಸಲು ಹೆಚ್ಚು ಸುಧಾರಿತ ಶಸ್ತ್ರಾಸ್ತ್ರಗಳನ್ನು ಒದಗಿಸುವಂತೆ ಉಕ್ರೇನ್ ನಾಯಕರ ಮನವಿಗೆ ಯುಎಸ್ ಸಮ್ಮತಿಸಿದೆ.

ಓದಿ:ಮಲೇಷ್ಯಾದಲ್ಲಿ ಭೂಕುಸಿತ.. ಇಬ್ಬರು ಸಾವು, 50ಕ್ಕೂ ಹೆಚ್ಚು ಜನ ನಾಪತ್ತೆ!

ABOUT THE AUTHOR

...view details