ಕೀವ್:ಇತ್ತೀಚೆಗಷ್ಟೇ ಅಮೆರಿಕ ಯುದ್ಧಪೀಡಿತ ಉಕ್ರೇನ್ಗೆ ಹಿಮಾರ್ಸ್ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಇತರ ಶಸ್ತ್ರಾಸ್ತ್ರಗಳನ್ನು ಒದಗಿಸಿ ಸಹಾಯ ಮಾಡುವುದಾಗಿ ಹೇಳಿರುವ ಬೆನ್ನಲ್ಲೇ ರಷ್ಯಾ ಕಿಡಿಕಾರಿದೆ. ಈ ಬಗ್ಗೆ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ಗೆ ಸಹಾಯ ಮಾಡಿದ್ದೇ ಆದಲ್ಲಿ ನಾವು ಹೊಸ ಗುರಿ ಇಡಬೇಕಾಗುತ್ತದೆ.
ಕೀವ್ಗೆ ದೂರಗಾಮಿ ಕ್ಷಿಪಣಿಗಳನ್ನು ಪೂರೈಸುವ ಪಶ್ಚಿಮದ ರಾಷ್ಟ್ರಗಳ ನಿರ್ಧಾರವನ್ನು ಖಂಡಿಸಿರುವ ಪುಟಿನ್, ನಿಮ್ಮ ಈ ಸಹಾಯ ನೀಡುವ ನಿರ್ಧಾರ ಯುದ್ಧವನ್ನು ಇನ್ನಷ್ಟು ವಿಸ್ತರಿಸಲು ಕಾರಣವಾಗಬಹುದು. ಸದ್ಯ ಯುದ್ಧಭೂಮಿಯಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ. ಇದರ ಜೊತೆಗೆ ಇಲ್ಲಿಯವರೆಗೆ ನಾಶ ಮಾಡಿರುವುದನ್ನೂ ಸೇರಿಸಿ, ಹೊಸ ಪ್ರದೇಶಗಳನ್ನು ನಾವು ಗುರಿಯಾಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.