ಕರ್ನಾಟಕ

karnataka

ETV Bharat / international

2 ದಿನದಲ್ಲಿ ಖೆರ್ಸನ್​ ಪ್ರದೇಶದ ಮೇಲೆ 54 ಶೆಲ್​ ದಾಳಿ ಮಾಡಿದ ರಷ್ಯಾ: ಉಕ್ರೇನ್​ ಆರೋಪ

ಉಕ್ರೇನ್​ನ ಹಲವು ಪ್ರದೇಶಗಳ ಮೇಲೆ ಬಾಂಬ್​ ದಾಳಿ ಮಾಡುತ್ತಿರುವ ರಷ್ಯಾ ಖೆರ್ಸನ್​ ಪ್ರದೇಶದಲ್ಲಿ ಶೆಲ್​ ದಾಳಿ ಮಾಡುತ್ತಿದೆ. ಇದರಿಂದ ನಾಗರಿಕರು ಭಯದಲ್ಲಿ ಹಳ್ಳಿಗಳನ್ನು ತೊರೆಯುತ್ತಿದ್ದಾರೆ.

russia-shells-kherson-oblast-54-times
ಖೆರ್ಸನ್​ ಪ್ರದೇಶದ ಮೇಲೆ 54 ಶೆಲ್​ ದಾಳಿ ಮಾಡಿದ ರಷ್ಯಾ

By

Published : Nov 27, 2022, 10:59 PM IST

ಕೀವ್​(ಉಕ್ರೇನ್):ಉಕ್ರೇನ್​ ಮೇಲೆ ನಿರಂತರ ದಾಳಿ ಮುಂದುವರಿಸಿರುವ ರಷ್ಯಾ ನಿನ್ನೆಯಿಂದ ಖೆರ್ಸನ್​ ಪ್ರದೇಶದ ಮೇಲೆ 54 ಬಾರಿ ಶೆಲ್​ ದಾಳಿ ಮಾಡಿದೆ. ಇದು ನಾಗರಿಕರ ಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿದೆ. ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ, ಮಗು ಸೇರಿದಂತೆ ಇಬ್ಬರು ತೀವ್ರ ಗಾಯಗೊಂಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಖೆರ್ಸನ್​ ಒಬ್ಲಾಸ್ಟ್​ ಗವರ್ನರ್​, 2 ದಿನಗಳ ಅಂತರದಲ್ಲಿ 54 ಶೆಲ್​ ದಾಳಿ ನಡೆಸಿದೆ. ಇದರಿಂದ ಅಪಾರ್ಟ್​ಮೆಂಟ್​ಗಳ ಕಟ್ಟಡಗಳು, ಶಿಪ್​ಯಾರ್ಡ್​, ಶಾಲೆ, ಮೈದಾನ, ಗ್ಯಾಸ್​ಪೈಪ್​ಗಳು ಭಾರೀ ಹಾನಿಗೊಳಗಾಗಿವೆ. ದಾಳಿಕೋರ ರಷ್ಯಾ ಉದ್ದೇಶಪೂರ್ವಕವಾಗಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ಈ ದಾಳಿ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಖೆರ್ಸನ್‌ನಲ್ಲಿ ವಸತಿ ಕಟ್ಟಡಗಳು, ಗ್ಯಾರೇಜ್ ಮತ್ತು ಶಿಕ್ಷಣ ಸಂಸ್ಥೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಎಂಟು ಹಳ್ಳಿಗಳು ಬೆಂಕಿಗೆ ಆಹುತಿಯಾಗಿವೆ. ರಷ್ಯನ್ನರು ಭಯೋತ್ಪಾದಕ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು. ಉಕ್ರೇನ್​ನ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡು ಬಳಿಕ ಅವುಗಳಿಂದ ಕಾಲ್ಕಿತ್ತ ಬಳಿಕ ಖೆರ್ಸನ್ ಒಬ್ಲಾಸ್ಟ್‌ ಪ್ರದೇಶದ ಮೇಲೆ ಶೆಲ್​ ದಾಳಿ ಹೆಚ್ಚಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಮತ್ತೆ ವಲಸೆ ಶುರು:ಅನೇಕ ನಿವಾಸಿಗಳು ರಷ್ಯಾದ ಶೆಲ್ ದಾಳಿಯಿಂದ ಪಾರಾಗಲು ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಬೇರೆಡೆ ವಲಸೆ ಆರಂಭವಾಗಿದೆ. ನವೆಂಬರ್ 20- 25 ರ ನಡುವೆ ರಾಜಧಾನಿ ಕೀವ್​ ಮೇಲೆ ನಡೆದ ಶೆಲ್​ ದಾಳಿಯಲ್ಲಿ 15 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಒಂದು ಮಗು ಸೇರಿದಂತೆ 35 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್​ ಹೇಳಿದೆ.

ಓದಿ:ದಕ್ಷಿಣ ಕೊರಿಯಾದಲ್ಲಿ ಹೆಲಿಕಾಪ್ಟರ್ ಪತನ: ಐವರು ಸಾವು

ABOUT THE AUTHOR

...view details