ಮಾಸ್ಕೋ: ಪಾಶ್ಚಿಮಾತ್ಯ ದೇಶಗಳು ಪ್ರಪಂಚದಾದ್ಯಂತ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಗಳ ಭಾಗವಾಗಿ ಉಕ್ರೇನ್ ಸಮಸ್ಯೆ ಉದ್ಭವಿಸಿದೆ. ಆದರೆ ಆ ಪ್ರಯತ್ನಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಆದ್ರೆ ನಾವು ಉಕ್ರೇನ್ ವಿರುದ್ಧ ಪರಮಾಣ ದಾಳಿ ಮಾಡಲು ಇಚ್ಛೆ ಹೊಂದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟೀನ್ ಹೇಳಿದ್ದಾರೆ.
ಗುರುವಾರ ನಡೆದ ಅಂತಾರಾಷ್ಟ್ರೀಯ ನೀತಿ ತಜ್ಞರ ಸಭೆಯಲ್ಲಿ ಪುಟಿನ್ ಮಾತನಾಡಿ, ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂಬ ಕಲ್ಪನೆಯು ಅಸಂಬದ್ಧವಾಗಿದೆ. ರಾಜಕೀಯವಾಗಿ ಮತ್ತು ಮಿಲಿಟರಿಯಾಗಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಮಾನವೀಯತೆಯ ಮುಂದೆ ಈಗ ಎರಡು ಪರ್ಯಾಯಗಳಿವೆ. ಸೂಕ್ತವಲ್ಲದಿದ್ದ ಸಮಯದಲ್ಲಿ ಜಗತ್ತು ಸ್ಥಿರವಾಗಿ ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುವ ಪರಿಹಾರಗಳನ್ನು ಕಂಡುಹಿಡಿಯುವುದು ಎಂದಿದ್ದಾರೆ.
ರಷ್ಯಾ ಪಾಶ್ಚಿಮಾತ್ಯ ಶತ್ರುವಲ್ಲ. ಆದರೆ, ಅವರು ನಮ್ಮ ದೇಶವನ್ನು ಅಧೀನಗೊಳಿಸಲು ತೋರಿಸುತ್ತಿರುವ ಸರ್ವಾಧಿಕಾರಿ ಧೋರಣೆ ಮತ್ತು ನೀತಿಗಳನ್ನು ನಾವು ವಿರೋಧಿಸುತ್ತೇವೆ. ರಷ್ಯಾವನ್ನು ದುರ್ಬಲಗೊಳಿಸುವ ಮೂಲಕ ಅವರು ತಮ್ಮ ಭೌಗೋಳಿಕ ರಾಜಕೀಯ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಆ ಪ್ರಯತ್ನಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ಸೋವಿಯತ್ ಯುಗದಲ್ಲಿ, ಕಮ್ಯುನಿಸ್ಟ್ ನಾಯಕರು ರಷ್ಯಾದ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡ ನಂತರ ಉಕ್ರೇನ್ ಕೃತಕ ದೇಶವಾಯಿತು. ನಮ್ಮ ಎರಡು ದೇಶಗಳ ಜನರು ಒಂದೇ ಜನಾಂಗಕ್ಕೆ ಸೇರಿದವರು ಎಂದು ಪುಟಿನ್ ಪ್ರತಿಪಾದಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವ ಮೂಲಕ ರಷ್ಯಾದ ಆರ್ಥಿಕತೆಯನ್ನು ನಾಶಮಾಡಲು ಪ್ರಯತ್ನಿಸಿದವು. ಆದರೆ, ಈ ಪ್ರಯತ್ನ ವಿಫಲವಾಯಿತು. ನಿರ್ಬಂಧಗಳಿಂದಾಗಿ ರಷ್ಯಾ ಅತ್ಯುನ್ನತ ಮಟ್ಟದ ಆರ್ಥಿಕ ಬಿಕ್ಕಟ್ಟನ್ನು ದಾಟಿದೆ. ಏಷ್ಯಾದ ರಾಷ್ಟ್ರಗಳೊಂದಿಗೆ ಹೊಸ ಇಂಧನ ಒಪ್ಪಂದಗಳನ್ನು ಮಾಡಿಕೊಳ್ಳವುದು ಮತ್ತು ರಷ್ಯಾದ ಆರ್ಥಿಕತೆಯು ಈಗ ಹೊಸ ಎತ್ತರವನ್ನು ಸಾಧಿಸಲು ಸಿದ್ಧವಾಗಿದೆ ಎಂದರು.
ಚಿನ್ಫಿಂಗ್ ವಿಶೇಷ ಸ್ನೇಹಿತ ಎಂದ ಪುಟಿನ್:ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ವಿಶೇಷ ಸ್ನೇಹಿತ ಎಂದು ಪುಟಿನ್ ಬಣ್ಣಿಸಿದರು ಮತ್ತು ರಷ್ಯಾ-ಚೀನಾ ಅಪಾರ ಸಹಕಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್ (MBS) ಗೌರವಕ್ಕೆ ಅರ್ಹರು. ಸೌದಿ ಅರೇಬಿಯಾದೊಂದಿಗೆ ಸಹಕಾರವನ್ನು ಹೆಚ್ಚಿಸಲು ರಷ್ಯಾ ಶೀಘ್ರದಲ್ಲೇ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು. ಪುಟಿನ್ ಟರ್ಕಿಯ ಅಧ್ಯಕ್ಷ ತಯ್ಯಿಪ್ ಎರ್ಡೊಗನ್ ಅವರನ್ನು ಪ್ರಬಲ ನಾಯಕ. ಅವರ ವಿಚಾರಧಾರೆಯಂತೆ ಕೆಲಸ ಮಾಡುತ್ತೇನೆ. ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು. ನವೆಂಬರ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಜಿ 20 ದೇಶಗಳು ಪಾಲ್ಗೊಳ್ಳುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ರಷ್ಯಾದ ಅಧ್ಯಕ್ಷರು ಹೇಳಿದರು.
ಉಕ್ರೇನ್ ಮತ್ತು ಪಾಶ್ಚಿಮಾತ್ಯ ದೇಶಗಳೊಂದಿಗೆ ಮಾತುಕತೆಗೆ ಸಿದ್ಧ:ಎರಡನೇ ಮಹಾಯುದ್ಧದ ನಂತರ ಪ್ರಪಂಚವು ಪ್ರಸ್ತುತ ಕಠಿಣ ಹಂತವನ್ನು ಎದುರಿಸುತ್ತಿದೆ. ಈ ಪರಿಸ್ಥಿತಿಯನ್ನು ಕೊನೆಗೊಳಿಸಲು, ಪಾಶ್ಚಿಮಾತ್ಯ ದೇಶಗಳು ಪರಮಾಣು ಶಸ್ತ್ರಾಸ್ತ್ರಗಳ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುವುದನ್ನು ನಿಲ್ಲಿಸಬಹುದು ಮತ್ತು ರಷ್ಯಾದೊಂದಿಗೆ ಮಾತನಾಡಬಹುದು ಎಂದರು.
ಉಕ್ರೇನ್ ತನ್ನ ಪ್ರಾದೇಶಿಕ ಸಾರ್ವಭೌಮತ್ವವನ್ನು ರಷ್ಯಾದಿಂದ ಮಾತ್ರ ಖಾತರಿಪಡಿಸಬಹುದು ಎಂದು ಅರ್ಥಮಾಡಿಕೊಳ್ಳಬೇಕು. ಉಕ್ರೇನ್‌ನಲ್ಲಿ ಬಲಿದಾನ ಮಾಡಿದ ರಷ್ಯಾದ ಸೈನಿಕರ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತೇನೆ. ಆದರೆ ಈ ಯುದ್ಧವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ಪಷ್ಟ ಕಾರಣಗಳನ್ನು ನೀಡಿ ಮಾತುಕತೆಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಲು ರಷ್ಯಾ ಸಾಧ್ಯವಿರುವ ಎಲ್ಲವನ್ನೂ ಮಾಡಿದೆ. ಆದರೆ ಅಮೆರಿಕ ಅವರ ಮಾತನ್ನು ಕೇಳಲಿಲ್ಲ. ಅದರ ನಂತರ ಮಿಲಿಟರಿ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ ಎಂದರು.
ಓದಿ:ಪ್ರಧಾನಿ ಮೋದಿ, ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪುಟಿನ್.. ಚೀನಾಕ್ಕೂ ಬೆಂಬಲ, ಅಮೆರಿಕ ವಿರುದ್ಧ ಕಿಡಿ