ಕರ್ನಾಟಕ

karnataka

ETV Bharat / international

ಕೊನೆಯ ಕ್ಷಣದಲ್ಲಿ ಅಮೆರಿಕದ ಬ್ಯಾಂಕ್​ನ ಬಾಂಡ್​ಗಳ ಮೇಲಿನ ಸಾಲ ಪಾವತಿಸಿದ ರಷ್ಯಾ - ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದ. ಈ ಬೆನ್ನಲ್ಲೇ ಅಮೆರಿಕದ ಬ್ಯಾಂಕೊಂದಕ್ಕೆ ರಷ್ಯಾ ಪಾವತಿ ಮಾಡಬೇಕಾದ ಸಾಲವನ್ನು ಪಾವತಿ ಮಾಡಿದೆ ಎಂದು ಅಮೆರಿಕದ ಖಜಾನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

russia-makes-last-minute-bond-payment-to-avoid-default
ಕೊನೆಯ ಕ್ಷಣದಲ್ಲಿ ಅಮೆರಿಕದ ಬ್ಯಾಂಕ್​ನ ಬಾಂಡ್​ಗಳ ಮೇಲಿನ ಸಾಲ ಪಾವತಿಸಿದ ರಷ್ಯಾ

By

Published : Apr 30, 2022, 9:24 AM IST

ನ್ಯೂಯಾರ್ಕ್​( ಅಮೆರಿಕ):ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆಯೇ ರಷ್ಯಾ ವಿದೇಶಿ ಸಾಲವೊಂದನ್ನು ತೀರಿಸಿದೆ. ಅಮೆರಿಕದ ಬ್ಯಾಂಕ್​ಗೆ ಪಾವತಿಸಬೇಕಾದ ಸಾಲದ ಮೊತ್ತವನ್ನು ತನ್ನಲ್ಲಿರುವ ಡಾಲರ್ ಸಂಗ್ರಹವನ್ನು ಉಪಯೋಗಿಸಿಕೊಂಡು, ಅಮೆರಿಕದಿಂದ ಹೊರಗಿದ್ದುಕೊಂಡು, ಕೊನೆಯ ಘಳಿಗೆಯಲ್ಲಿ ಸಾಲ ಪಾವತಿ ಮಾಡಿದೆ ಎಂದು ಅಮೆರಿಕದ ಖಜಾನೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಷ್ಟು ಸಾಲ ಮರುಪಾವತಿ ಮಾಡಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಆದರೆ, ಈ ತಿಂಗಳ ಆರಂಭದಲ್ಲಿ ಅಮೆರಿಕದ ಬ್ಯಾಂಕೊಂದರಲ್ಲಿ ಎರಡು ಬಾಂಡ್​​ಗಳಿಗಾಗಿ 649 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಲು ಪ್ರಯತ್ನಿಸಲಾಗಿದೆ ಎಂದು ರಷ್ಯಾದ ಹಣಕಾಸು ಇಲಾಖೆ ಹೇಳಿದೆ ಎಂದು ಜೆಪಿಮಾರ್ಗನ್ ಚೇಸ್ ವರದಿ ಮಾಡಿತ್ತು. ಆದರೆ, ಆ ವೇಳೆಯಲ್ಲಿ ಉಕ್ರೇನ್ ದಾಳಿಯ ಕಾರಣದಿಂದಾಗಿ ರಷ್ಯಾದ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳಿಂದಾಗಿ ಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದೇ ವೇಳೆ, ರಷ್ಯಾದ ಕರೆನ್ಸಿಯಾದ ರೂಬಲ್​ನಲ್ಲಿ ಸಾಲ ಪಾವತಿಮಾಡಲು ಪ್ರಯತ್ನಿಸಲಾಗಿತ್ತು.

ಮುಂದಿನ ವಾರದೊಳಗೆ ಸಾಲ ಪಾವತಿ ಮಾಡಬೇಕಾದ ಅನಿವಾರ್ಯತೆ ರಷ್ಯಾಗೆ ಇದ್ದು, ರಷ್ಯಾದಿಂದ ಸಾಲವನ್ನು ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ, 30 ದಿನಗಳ ಹೆಚ್ಚುಬರಿ ಅವಧಿಯಲ್ಲಿ ರೂಬಲ್​ಗಳನ್ನು ಡಾಲರ್​ಗಳಾಗಿ ಪರಿವರ್ತನೆ ಮಾಡಿರುವ ರಷ್ಯಾ ಸಾಲವನ್ನು ಮರುಪಾವತಿ ಮಾಡಿದೆ.

ರಷ್ಯಾ ಕ್ರಾಂತಿ ವೇಳೆಯಲ್ಲಿ ಅಂದರೆ 1917ರಲ್ಲಿ ಬೋಲ್​ಶೆವಿಕ್ಸ್ ಕ್ರಾಂತಿಯ ವೇಳೆಯಲ್ಲಿ ರಷ್ಯಾ ವಿದೇಶಿ ಸಾಲ ಪಾವತಿಸಲು ಸಾಧ್ಯವಾಗಿರಲಿಲ್ಲ. ಅದಾದ ನಂತರ ರಷ್ಯಾ ಎಲ್ಲಾ ಸಾಲವನ್ನು ಪಾವತಿ ಮಾಡಿದೆ. ಈಗ ಸಾಲ ಪಾವತಿ ಮಾಡಲು ರಷ್ಯಾ ಲಂಡನ್‌ನಲ್ಲಿರುವ ಸಿಟಿಗ್ರೂಪ್‌ನೊಂದಿಗಿನ ತನ್ನ ಖಾತೆಗಳನ್ನು ಬಳಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿಗಳು ತಿಳಿಸಿವೆ. ಆದರೆ ಈ ಪ್ರತಿಕ್ರಿಯೆ ನೀಡಲು ಸಿಟಿ ಗ್ರೂಪ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:'ಖುದ್ಸ್ ಡೇ ರ್‍ಯಾಲಿ': 2 ಹೊಸ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರದರ್ಶಿಸಿದ ಇರಾನ್

ABOUT THE AUTHOR

...view details