ವಾಷಿಂಗ್ಟನ್ :ಕಳೆದ ಒಂಬತ್ತು ತಿಂಗಳುಗಳಿಂದ ಉಕ್ರೇನ್ನಲ್ಲಿ ಯುದ್ಧ ಮಾಡುತ್ತಿರುವ ಉಕ್ರೇನ್ ಸ್ಥಿರವಾದ ಶಸ್ತ್ರಾಸ್ತ್ರಗಳ ಪೂರೈಕೆ ನಿರ್ವಹಿಸಲು ಹೆಣಗಾಡುತ್ತಿದೆ. ಮಾಸ್ಕೋ ಇದೀಗ ರಷ್ಯಾದ ಮಿಲಿಟರಿಗೆ ಅಗತ್ಯವಿರುವ ಡ್ರೋನ್‌ಗಳು ಹಾಗೂ ಕ್ಷಿಪಣಿಗಳನ್ನು ಮರು ಪೂರೈಸಲು ಮತ್ತೊಮ್ಮೆ ಇರಾನ್‌ನತ್ತ ದೃಷ್ಟಿ ಹರಿಸಿದೆ ಎಂದು ಅಮೆರಿಕ ಕಳವಳ ವ್ಯಕ್ತಪಡಿಸಿದೆ.
ರಷ್ಯಾ ಇರಾನ್‌ನಿಂದ ಹೆಚ್ಚುವರಿ ಸುಧಾರಿತ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಪಡೆಯಲು ಪ್ರಯತ್ನಿಸಬಹುದು. ಇರಾನ್‌ನಿಂದ ಮತ್ತೆ ಹೆಚ್ಚಿನ ಕ್ಷಿಪಣಿಗಳನ್ನು ಪಡೆಯಲು ರಷ್ಯಾ ಪ್ರಯತ್ನಿಸಬಹುದು ಎಂದು ಅಮೆರಿಕ ಆಡಳಿತ ವಿಶೇಷವಾಗಿ ಕಳವಳ ವ್ಯಕ್ತಪಡಿಸಿದೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಅಧಿಕಾರಿಗಳು ತಿಳಿದ್ದಾರೆ.
ಟೆಹ್ರಾನ್ ಮತ್ತು ಆರು ಪ್ರಮುಖ ಪ್ರಬಲ ದೇಶಗಳ ನಡುವೆ ಪರಮಾಣು ಒಪ್ಪಂದ ಅನುಮೋದಿಸಿದ 2015 ರ ಭದ್ರತಾ ಮಂಡಳಿಯ ನಿರ್ಣಯ ಉಲ್ಲಂಘಿಸಿ ರಷ್ಯಾಕ್ಕೆ ನೂರಾರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಮಾರಾಟ ಮಾಡಲು ಇರಾನ್ ಯೋಚಿಸಿದೆ ಎಂದು ಅಮೆರಿಕ ರಾಜತಾಂತ್ರಿಕರೊಬ್ಬರು ಹೇಳಿದ್ದಾರೆ.