ಕರ್ನಾಟಕ

karnataka

ETV Bharat / international

ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆ: 4 ತಿಂಗಳ ಬಳಿಕ ಬಿಡುಗಡೆಯಾದ ಯೋಧನ ಅಂದು, ಇಂದಿನ ಸ್ಥಿತಿ - ಉಕ್ರೇನ್​ ಸೈನಿಕನ ಫೋಟೋ ವೈರಲ್​

ರಷ್ಯಾ ಮತ್ತು ಉಕ್ರೇನ್ ಯುದ್ಧವು ಇಂದಿಗೆ (ಸೆಪ್ಟೆಂಬರ್​ 25) 214 ದಿನಗಳಿಗೆ ಕಾಲಿಟ್ಟಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಉಕ್ರೇನ್​ ಸೈನಿಕರೊಬ್ಬರ ಫೋಟೋಗಳು ಮನಕಲಕುವಂತಿದೆ.

russia-and-ukraine-war-soldier-photo-viral
214 ದಿನಗಳಿಗೆ ಕಾಲಿಟ್ಟ ರಷ್ಯಾ ಮತ್ತು ಉಕ್ರೇನ್ ಯುದ್ಧ: ಸೈನಿಕನ ಅಂದು, ಇಂದಿನ ಇದು ಫೋಟೋ

By

Published : Sep 25, 2022, 5:57 PM IST

Updated : Sep 25, 2022, 6:57 PM IST

ಮರಿಯುಪೋಲ್ (ಉಕ್ರೇನ್​): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಇದರ ನಡುವೆ ಮರಿಯುಪೋಲ್ ಮುತ್ತಿಗೆಯ ಸಮಯದಲ್ಲಿ ಸೆರೆಹಿಡಿಯಲಾದ ಉಕ್ರೇನ್​ ಸೈನಿಕರೊಬ್ಬರ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಫೆಬ್ರವರಿ 24ರಂದು ಆರಂಭವಾದ ರಷ್ಯಾ ಮತ್ತು ಉಕ್ರೇನ್ ಯುದ್ಧವು ಇಂದಿಗೆ (ಸೆಪ್ಟೆಂಬರ್​ 25) 214 ದಿನಗಳಿಗೆ ಕಾಲಿಟ್ಟಿದೆ. ಮರಿಯುಪೋಲ್‌ನಲ್ಲಿ ರಷ್ಯಾ ಸೇನೆಯೊಂದಿಗೆ ಹೋರಾಟದಲ್ಲಿ ಬಂಧಿಸಲ್ಪಟ್ಟಿದ್ದ 205 ಉಕ್ರೇನಿಯನ್ ಯುದ್ಧ ಕೈದಿಗಳನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಲಾಗಿದೆ. ಇವರಲ್ಲಿ ಒಬ್ಬರಾದ ಯೋಧ ಮೈಖೈಲೋ ಡಯಾನೋವ್ ಕುರಿತ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಮೇ ತಿಂಗಳಲ್ಲಿ ಬಂದರು ನಗರವಾದ ಮರಿಯುಪೋಲ್‌ನಲ್ಲಿ ಕೈಗಾರಿಕಾ ಪ್ರದೇಶಗಳ ಮೇಲೆ ರಷ್ಯಾದ ಮುತ್ತಿಗೆಯ ಸಮಯದಲ್ಲಿ ಇದೇ ಮೈಖೈಲೋ ಡಯಾನೋವ್ ತೋಳಿಗೆ ಗಾಯವಾಗಿದ್ದರೂ ನಗು ಮುಖದಲ್ಲಿರುವ ಫೋಟೋ ವೈರಲ್ ಆಗಿತ್ತು. ಆದರೆ, ಡಯಾನೋವ್ ಅವರ ಹೊಸ ಫೋಟೋ ಬೆಚ್ಚಿ ಬೀಳಿಸುವಂತಿದೆ.

ಇದನ್ನೂ ಓದಿ:ಭೂಕಂಪನದ ವೇಳೆ ನಾಪತ್ತೆಯಾಗಿದ್ದ ವ್ಯಕ್ತಿ 17 ದಿನಗಳ ಬಳಿಕ ಮೃತ್ಯುಂಜಯನಾಗಿ ಬಂದ!

ಈ ಫೋಟೋ ಮೈಖೈಲೋ ಡಯಾನೋವ್ ಯುದ್ಧ ಹಾಗೂ ಬಂಧನದಲ್ಲಿದ್ದಾಗ ಯಾವ ರೀತಿಯ ನರಕಯಾತನೆ ಅನುಭವಿಸಿದ್ದರು ಎಂಬುದನ್ನು ತೋರಿಸುವಂತಿದೆ. ಕೈ ತೋಳು ಹಾಗೂ ಮುಖದ ಮೇಲೆ ತೀವ್ರತರವಾದ ಗಾಯದ ಗುರುತುಗಳಿದ್ದು, ಅವರು ಓರ್ವ ಮಾನಸಿಕ ಅಸ್ವಸ್ಥನಂತೆ ಕಾಣಿಸುತ್ತಾರೆ.

ಮರಿಯುಪೋಲ್ ಮುತ್ತಿಗೆ ನಂತರ ಡಯಾನೋವ್ ನಾಲ್ಕು ತಿಂಗಳು ರಷ್ಯಾದ ಜೈಲಿನಲ್ಲಿ ಇದ್ದರು. ಈ ವಾರ ಪ್ರಮುಖ ಕೈದಿಗಳ ವಿನಿಮಯದ ಭಾಗವಾಗಿ ಬಿಡುಗಡೆಗೊಂಡ ಅವರನ್ನು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಚೆರ್ನಿಹಿವ್‌ನ ನಗರದ ಆಸ್ಪತ್ರೆಗೆ ರವಾನಿಸಲಾಗಿತ್ತು.

ಇದನ್ನೂ ಓದಿ:ಭಾಗಶಃ ರಷ್ಯಾ ಸೇನೆ ಯುದ್ಧ ಸನ್ನದ್ಧಗೊಳಿಸಲು ಪುಟಿನ್ ಆದೇಶ

ನಂತರ ಅವರನ್ನು ಕೈವ್ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ದೀರ್ಘಾವಧಿಯ ಚಿಕಿತ್ಸೆಯ ಅಗತ್ಯ ಇದೆ. ಗಾಯಗೊಂಡ ತೋಳಿನಲ್ಲಿ ಸಿಲುಕಿದ್ದ ಗಾಜಿನ ಚೂರುಗಳನ್ನು ಯಾವುದೇ ಅರಿವಳಿಕೆ ನೀಡದೇ ಹೊರತೆಗೆಯಲಾಗಿದೆ. ತೋಳಿನಲ್ಲಿನ 4 ಸೆಂಮೀ ಮೂಳೆಯೇ ಇಲ್ಲ ಎಂದು ಮೈಖೈಲೋ ಡಯಾನೋವ್ ಅವರ ಸಹೋದರಿ ಹೇಳಿದ್ದಾರೆ.

ಮಿಲಿಟರಿ ಆಸ್ಪತ್ರೆಯ ವೈದ್ಯರು ಮೈಖೈಲೋ ಡಯಾನೋವ್ ಅವರನ್ನು ಪರೀಕ್ಷಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಆಪರೇಷನ್ ಮಾಡಲು ಆಗುತ್ತಿಲ್ಲ. ಮೊದಲು ಅವರು ಸ್ವಲ್ಪ ತೂಕವನ್ನು ಹೆಚ್ಚಿಸಿಕೊಳ್ಳಬೇಕಿದೆ. ಈಗ ಆಪರೇಷನ್ ಮಾಡಿದರೆ ಆರೋಗ್ಯಕ್ಕೆ ಅಪಾಯವಾಗಬಹುದು. ಆದ್ದರಿಂದ ಅವರು ಚೇತರಿಸಿಕೊಂಡು ಶಕ್ತಿ ಪಡೆಯಬೇಕೆಂದು ವೈದ್ಯರು ತಿಳಿಸಿದ್ದಾರೆ ಎಂದು ಸಹೋದರಿ ಹೇಳಿರುವುದಾಗಿ ವರದಿಯಾಗಿದೆ.

ಅಲ್ಲದೇ, ಮೈಖೈಲೋ ಡಯಾನೋವ್ ಅವರ ದೈಹಿಕ ಸ್ಥಿತಿ ಗಂಭೀರವಾಗಿದೆ. ಆದರೆ, ಮಾನಸಿಕವಾಗಿ ತುಂಬಾ ಬಲಶಾಲಿಯಾಗಿದ್ದಾರೆ. ಅವರು ಮರಳಿ ಬಂದಿರುವುದಕ್ಕಾಗಿ ತುಂಬಾ ಸಂತೋಷಪಟ್ಟಿದ್ದಾರೆ ಎಂದು ಮೈಖೈಲೋ ಡಯಾನೋವ್ ಅವರ ಸಹೋದರಿ ತಿಳಿಸಿದ್ದಾರೆ.

ಇದನ್ನೂ ಓದಿ:'ಇದು ಯುದ್ಧದ ಸಮಯವಲ್ಲವೆಂದು ಮೋದಿ ಸರಿಯಾಗಿಯೇ ಹೇಳಿದ್ದಾರೆ': ಫ್ರಾನ್ಸ್​ ಅಧ್ಯಕ್ಷ

Last Updated : Sep 25, 2022, 6:57 PM IST

ABOUT THE AUTHOR

...view details