ಕರ್ನಾಟಕ

karnataka

ETV Bharat / international

ಬಾಂಗ್ಲಾದೇಶದಲ್ಲಿ ಭೀಕರ ಬಸ್​ ದುರಂತ: ಮೂವರು ಮಕ್ಕಳು ಸೇರಿ 17 ಜನ ಸಾವು, ಹಲವರಿಗೆ ಗಾಯ - accident news

ಬಾಂಗ್ಲಾದೇಶದ ಝಳಕತಿ ಸದರ್ ಉಪಜಿಲ್ಲಾ ಪ್ರದೇಶದಲ್ಲಿ ಶನಿವಾರ ಬಸ್ಸೊಂದು​ ದೊಡ್ಡ ಕೆರೆಗೆ ಉರುಳಿಬಿದ್ದು ಅಪಾರ ಸಾವುನೋವು ಸಂಭವಿಸಿದೆ.

Road accident
ಭೀಕರ ಬಸ್​ ದುರಂತ

By

Published : Jul 23, 2023, 11:09 AM IST

ಢಾಕಾ : ನೈಋತ್ಯ ಬಾಂಗ್ಲಾದೇಶದಲ್ಲಿ ಶನಿವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

60ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್​, ಭಂಡಾರಿಯಾ ಉಪಜಿಲ್ಲೆಯಿಂದ ನೈಋತ್ಯ ವಿಭಾಗೀಯ ಕೇಂದ್ರ ಕಚೇರಿಯ ಬಾರಿಶಾಲ್‌ಗೆ ತೆರಳುತ್ತಿದ್ದಾಗ ಝಳಕತಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದುರಂತಕ್ಕೆ ಚಾಲಕನ ನಿರ್ಲಕ್ಷವೇ ಕಾರಣ ಎಂದು ಬದುಕುಳಿದವರು ಆರೋಪಿಸಿದ್ದಾರೆ.

"ಶನಿವಾರ ಬೆಳಗ್ಗೆ 9:00 ಗಂಟೆಯ ಸುಮಾರಿಗೆ ಪಿರೋಜ್‌ಪುರದ ಭಂಡಾರಿಯಾದಿಂದ ಹೊರಟ ಬಸ್​ 10:00 ಗಂಟೆ ಸುಮಾರಿಗೆ ಬಾರಿಶಾಲ್-ಖುಲ್ನಾ ಹೆದ್ದಾರಿಯಲ್ಲಿರುವ ಛತ್ರಕಾಂಡದ ರಸ್ತೆ ಬದಿಯ ದೊಡ್ಡ ಕೊಳಕ್ಕೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಮಿಸಿದ ಮುಳುಗುತಜ್ಞರು ಮೃತದೇಹಗಳನ್ನು ಹೊರತೆಗೆದಿದ್ದಾರೆ. 17 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ" ಎಂದು ಬಾರಿಶಾಲ್ ವಿಭಾಗೀಯ ಆಯುಕ್ತ ಎಂಡಿ ಶೌಕತ್ ಅಲಿ ದೃಢಪಡಿಸಿದ್ದಾರೆ.

ಇದನ್ನೂ ಓದಿ :Watch video : ಬಸ್ ಮತ್ತು ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ; ಒಬ್ಬನ ಸಾವು, 27 ಮಂದಿಗೆ ಗಾಯ

ಬಸ್ಸಿನೊಳಗೆ 65 ಪ್ರಯಾಣಿಕರಿದ್ದರು ಎಂದು ಅಂದಾಜಿಸಲಾಗಿದೆ. ಮೃತರಲ್ಲಿ ಎಂಟು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಇಪ್ಪತ್ತು ಪ್ರಯಾಣಿಕರು ಜಲಕತ್ತಿಯ ಮುಖ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಮೃತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಮೃತರಲ್ಲಿ ಹೆಚ್ಚಿನವರು ಪಿರೋಜ್‌ಪುರದ ಭಂಡಾರಿಯಾ ಉಪಜಿಲ್ಲಾ ಮತ್ತು ಝಳಕತಿಯ ರಾಜಾಪುರ ಪ್ರದೇಶದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೌತಮ್ ಕುಮಾರ್ ಘೋಸ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಅಪಘಾತದಲ್ಲಿ ಮಡಿದ KSRTC ಸಿಬ್ಬಂದಿಗೆ ₹1 ಕೋಟಿ ಅಪಘಾತ ವಿಮೆ ; ಇಬ್ಬರು ಸಿಬ್ಬಂದಿಯ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಣೆ

"ನಾನು ಡ್ರೈವರ್ ಸೀಟಿನ ಪಕ್ಕದಲ್ಲೇ ಕುಳಿತಿದ್ದೆ. ಬಸ್ ಚಾಲನೆ ಮಾಡುವಾಗ ಚಾಲಕ ಅಷ್ಟೊಂದು ಗಮನ ಹರಿಸುತ್ತಿರಲಿಲ್ಲ. ಬಸ್​ ಓವರ್ಲೋಡ್ ಆಗಿದ್ದರಿಂದ ತಕ್ಷಣವೇ ಮುಳುಗಿತು. ಅಪಘಾತದಲ್ಲಿ ನನ್ನ 75 ವರ್ಷದ ತಂದೆಯನ್ನು ಕಳೆದುಕೊಂಡೆ, ಅಣ್ಣ ಕೂಡ ಕಾಣೆಯಾಗಿದ್ದಾನೆ" ಎಂದು ಅಪಘಾತದಲ್ಲಿ ಗಾಯಗೊಂಡ 35 ವರ್ಷದ ಪ್ರಯಾಣಿಕ ರಸೆಲ್ ಮೊಲ್ಲಾ ಹೇಳಿದರು.

ಬಾಂಗ್ಲಾದೇಶದಲ್ಲಿ ಬಸ್ ಅಪಘಾತಗಳು ಸಾಮಾನ್ಯವಾಗಿದೆ. ರೋಡ್ ಸೇಫ್ಟಿ ಫೌಂಡೇಶನ್ (ಆರ್‌ಎಸ್‌ಎಫ್) ಪ್ರಕಾರ, ಜೂನ್‌ನಲ್ಲಿ ಒಟ್ಟು 559 ರಸ್ತೆ ಅಪಘಾತಗಳು ಸಂಭವಿಸಿವೆ.

ಇದನ್ನೂ ಓದಿ :ಫ್ಲೈಓವರ್‌ ಮೇಲೆ ನಿಂತು ಅಪಘಾತ ವೀಕ್ಷಿಸುತ್ತಿದ್ದವರಿಗೆ 160 ಕಿ ಮೀ ವೇಗದಲ್ಲಿ ಬಂದು ಗುದ್ದಿದ ಕಾರು ; 9 ಮಂದಿ ದಾರುಣ ಸಾವು !

ABOUT THE AUTHOR

...view details