ಲಂಡನ್:ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕಳೆದ ಕೆಲ ವಾರಗಳ ಹಿಂದೆ ಪತ್ನಿ ಅಕ್ಷತಾ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯುಕೆ ಪ್ರಧಾನಮಂತ್ರಿ ಹುದ್ದೆಯ ಪ್ರಬಲ ಸ್ಪರ್ಧಿ ರಿಷಿ ಸುನಕ್ ಅವರ ಮನೆಯಲ್ಲಿ ಗೋ ಪೂಜೆ ನಡೆಸಲಾಗಿದೆ. ಅದರ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬ್ರಿಟಿಷ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ಪ್ರಬಲ ಸ್ಪರ್ಧೆಯಲ್ಲಿ ಅಂತಿಮ ಘಟ್ಟದಲ್ಲಿರುವ ರಿಷಿ ಸುನಕ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ಮೇಲಿಂದ ಮೇಲೆ ಹೊಸ ಹೊಸ ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರ ನಿವಾಸದಲ್ಲಿ ಹಸುವಿನ ಪೂಜೆ ಮಾಡಲಾಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್‌ಆರ್ ನಾರಾಯಣಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಸಹ ಉಪಸ್ಥಿತರಿದ್ದರು. ಭಾರತೀಯ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಹಸುವಿನ ಪೂಜೆ ನಡೆಸಲಾಗಿದೆ.