ಕರ್ನಾಟಕ

karnataka

By

Published : Nov 19, 2022, 5:16 PM IST

ETV Bharat / international

ಟ್ರಂಪ್ ಟ್ವಿಟರ್​ ಖಾತೆ ಮರು ಸ್ಥಾಪಿಸಬೇಕೇ?: ಸಮೀಕ್ಷೆ ಆರಂಭಿಸಿದ ಎಲೋನ್ ಮಸ್ಕ್

2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಗಲಾಟೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಡೊನಾಲ್ಡ್ ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ.

reinstate-donald-trump-elon-musk-twitter-poll
ಟ್ರಂಪ್ ಟ್ವಿಟರ್​ ಖಾತೆ ಮರು ಸ್ಥಾಪಿಸಬೇಕೇ?: ಸಮೀಕ್ಷೆ ಆರಂಭಿಸಿದ ಎಲೋನ್ ಮಸ್ಕ್

ಹೈದರಾಬಾದ್ (ತೆಲಂಗಾಣ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಟ್ವಿಟರ್​ ಖಾತೆ ಮರು ಸ್ಥಾಪಿಸಬೇಕೇ ಎಂದು ಪ್ರಶ್ನಿಸಿ ಟ್ವಿಟರ್‌ನ ಹೊಸ ಮುಖ್ಯಸ್ಥ ಎಲೋನ್ ಮಸ್ಕ್ ಟ್ವೀಟ್​ ಮಾಡಿ, ಸಮೀಕ್ಷೆ ಆರಂಭಿಸಿದ್ದಾರೆ.

2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಡೊನಾಲ್ಡ್​ ಟ್ರಂಪ್‌ ಬೆಂಬಲಿಗರು ಕ್ಯಾಪಿಟೋಲ್‌ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಟ್ರಂಪ್‌ ಟ್ವಿಟರ್‌ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಇದೀಗ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಟ್ರಂಪ್​ ಘೋಷಿಸಿದ್ದಾರೆ.

ಇದರ ಬೆನ್ನಲ್ಲೇ, ಟ್ವಿಟರ್‌ನ ಹೊಸ ಮುಖ್ಯಸ್ಥ ಎಲೋನ್ ಮಸ್ಕ್, ಟ್ವಿಟರ್​ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಮರುಸ್ಥಾಪಿಸಬೇಕು. 'ಹೌದು ಅಥವಾ ಇಲ್ಲ' ಎಂದು ಟ್ವೀಟ್​ ಮಾಡಿ ಎಂದು ಟ್ವೀಟಿಸಿದ್ದಾರೆ. ಅಲ್ಲದೇ, ಜನರ ಧ್ವನಿ, ದೇವರ ಧ್ವನಿ ಎಂಬ ಅರ್ಥ ಕೊಡುವ 'ವೋಕ್ಸ್ ಪಾಪುಲಿ, ವೋಕ್ಸ್ ಡೀ' ಎಂದು ಮತ್ತೊಂದು ಟ್ವೀಟ್​ ಮಾಡಿದ್ದಾರೆ. ಟೆಕ್ ಬಿಲಿಯನೇರ್ ಆಗಿರುವ ಮಸ್ಕ್​ ತಮ್ಮ ಟ್ವಿಟರ್​ನಲ್ಲಿ 116 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ:ಟ್ವಿಟರ್ ಹೊಸ ಖಾತೆ: 90 ದಿನಗಳವರೆಗೆ 'ಬ್ಲೂ ಟಿಕ್ ಚಂದಾದಾರಿಕೆ ಸೇವೆ'ಗೆ ಅನುಮತಿಯಿಲ್ಲ

ABOUT THE AUTHOR

...view details