ಲಂಡನ್:ನಾಡಿದ್ದು ಬ್ರಿಟನ್ ಎರಡನೇ ಎಲಿಜಬೆತ್ ರಾಣಿಯ ಅಂತ್ಯಕ್ರಿಯೆ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂತಿಮ ವಿದಾಯದ ವೇಳೆ ಭದ್ರತೆಗಾಗಿ ಸರ್ಕಾರ ಖರ್ಚು ಮಾಡುತ್ತಿರುವ ಮೊತ್ತ ಕೇಳಿದರೆ ಬೆರಗಾಗುತ್ತದೆ. ಎಷ್ಟು ಅಂತೀರಾ.. 7.5 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ 59 ಕೋಟಿ ರೂಪಾಯಿ.
ನಿಜ, ಸೆಪ್ಟೆಂಬರ್ 19 ರಂದು ರಾಣಿಯ ಅಂತ್ಯಕ್ರಿಯೆಯ ಭದ್ರತೆಗಾಗಿ ಬ್ರಿಟನ್ ಸರ್ಕಾರ ವ್ಯಯ ಮಾಡುತ್ತಿರುವ ಭದ್ರತಾ ಅಂದಾಜು ವೆಚ್ಚ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಯನ್ನು ದೇಶದ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಮತ್ತು ಒಂದು ದಿನದ ಕಾರ್ಯಕ್ರಮವಾಗಿದೆ.
ಅಂತ್ಯಕ್ರಿಯೆಯ ವೇಳೆ ಬೃಹತ್ ಸಂಖ್ಯೆಯಲ್ಲಿ ವಿದೇಶಿ ನಾಯಕರು ಮತ್ತು ಜನರು ಸೇರುವ ಸಾಧ್ಯತೆ ಇದ್ದು, ರಕ್ಷಣೆಗಾಗಿ ಬ್ರಿಟಿಷ್ ಸರ್ಕಾರ ಎಂಐ5, ಎಂಐ6 ಗುಪ್ತಚರ ಸಂಸ್ಥೆಗಳು, ಲಂಡನ್‌ನ ಮೆಟ್ರೋಪಾಲಿಟನ್ ಪೊಲೀಸ್ ಮತ್ತು ರಹಸ್ಯ ಸೇವೆಯ ಅಧಿಕಾರಿ, ಸಿಬ್ಬಂದಿಯನ್ನು ಬಳಸಲಾಗುತ್ತಿದೆ.
ಯುನೈಟೆಡ್ ಕಿಂಗ್‌ಡಮ್ ಪೊಲೀಸ್ ಇದುವರೆಗೆ ಕೈಗೊಳ್ಳುತ್ತಿರುವ ಅತಿದೊಡ್ಡ ಭದ್ರತಾ ಕಾರ್ಯಕ್ರಮ ಮತ್ತು ವೆಚ್ಚದಾಯಕವೂ ಇದಾಗಿದೆ. ಈವರೆಗೂ ಇಂತಹ ಬೃಹತ್ತಾದ ರಕ್ಷಣೆಯನ್ನು ಏಕದಿನದಲ್ಲಿ ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.